24.7 C
Karnataka
April 3, 2025
ಪ್ರಕಟಣೆ

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ




ಕಲ್ಯಾಣ (ಪ):3 ಮಾರ್ಚ್ 25 : ಸಂಘದ ಪ್ರಥಮ ಮಹಿಳಾಧ್ಯಕ್ಷೆ ದಿ.ಶಾರದ ಭಾಸ್ಕರ ಶೆಟ್ಟಿಯವರ ಪ್ರೇರಣೆಯಿಂದ ಕಳೆದ ಸುಮಾರು 21 ವರ್ಷಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಾರ್ಷಿಕ ಕಾರ್ಯಕ್ರಮವಾಗಿ ನಡೆಸುತ್ತಾ ಬಂದಿದ್ದು ಈ ವರ್ಷ ಇದೇ ಬರುವ 9 ಮಾರ್ಚ್ ರಂದು ಮುರ್ಬಾಡ್ ರಸ್ತೆ ಕಲ್ಯಾಣ ಪಶ್ಚಿಮದ ಬ್ರಾಹ್ಮಣ ಸೊಸೈಟಿ ಸಭಾಗ್ರಹದಲ್ಲಿ ಸಂಜೆ 5 ರಿಂದ ಆಚರಿಸಲಿದ್ದೇವೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಘಟಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಕವಿತಾ ಮಿಶ್ರಾ ಹಾಗೂ ಗೌರವ ಅತಿಥಿಯಾಗಿ ಯೋಗ ಪ್ರಚಾರಕಿ ಶ್ರೀಮತಿ ವೀಣಾ ನಿಮ್ಕರ್ ರವರು ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಶ್ರೀಮತಿ ಮಹಾಲಕ್ಷ್ಮಿ ತೋರ್ವಿ ಯವರನ್ನು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಪ್ರದ್ನ್ಯಾ ಬಾಬನ್ನವರ್ ರವರನ್ನು ತಮ್ಮ ಅಪ್ರತಿಮ, ನಿಸ್ವಾರ್ಥ ಸೇವೆಗಾಗಿ ಸತ್ಕರಿಸಲಾಗುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಹಾಗೂ ಮಹನೀಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಸಂಘದ ಅಧ್ಯಕ್ಷ ಕೆ.ಎನ್.ಸತೀಶ್, ಉಪಾಧ್ಯಕ್ಷರಾದ ಜಯಂತಿ ಹೆಗ್ಡೆ ಹಾಗೂ ವಿಜಯ್ ಪೈ,ಮಹಿಳಾಧ್ಯಕ್ಷೆ ವೀಣಾ ಕಾಮತ್, ಗೌರವ ಕಾರ್ಯದರ್ಶಿ ಜಯಂತ ದೇಶಮುಖ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು ಈ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Related posts

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಪಶ್ಚಿಮ – ಫೆ.10ರಂದು ಶ್ರೀ ಶನೀಶ್ವರ ದೇವರ ಮಹಾಪೂಜೆ.

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ, ಇಂದು ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

ಎ. 25-26 ರಂದು ಬೊರಿವಲಿ ಮಂಡಪೇಶ್ವರ ಗುಹೆಯ ಶ್ರೀ ಪಾಂಡವೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಬ್ರಹ್ಮ ಕಲಶೋತ್ಸವ

Mumbai News Desk

ಕನ್ನಡ ಸಂಘ ಸಯನ್ : ಮಾ. 29ರಂದು ಬೃಹತ್ ಉದ್ಯೋಗ ಮೇಳ

Mumbai News Desk

ಡಿ.3ರಂದು ಮುಂಬೈಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಷಷ್ಠಿಯಬ್ದ ಮಹೋತ್ಸವ.

Mumbai News Desk

ಬೊಂಬೇ ಬಂಟ್ಸ್ ಅಸೋಷಿಯೇಶನ್ ಮಹಿಳಾ ವಿಭಾಗ, ಜೂ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk