
ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ ಇವರ ವತಿಯಿಂದ ದಿನಾಂಕ 02/03/2025 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ಡೊಂಬಿವಲಿಯ ಶ್ರೀ ವರದ ಸಿದ್ಧಿ ವಿನಾಯಕ ಭವನದಲ್ಲಿ ನಡೆಯಿತು. ವಿಶೇಷ ಅತಿಥಿಗಳಾಗಿ ಶ್ರೀ ಯುತ ಮನಿಷ್ ದಾಬೋಲ್ಕರ್,
ಖಜಾಂಚಿ, ಮತ್ತು ವಿಶೇಷ ಸದಸ್ಯರಾದ ಶ್ರೀ ಶಿವಾನಂದ ಪ್ರಭು, ಕುಡಾಲ ದೇಶ್ಕರ್ ಆದ್ಯ ಗೌಡ ಬ್ರಾಹ್ಮಣ ಸಮಾಜ, ಗಿರ್ಗಾಂವ್; ಪುಲಿಂದ ಸಾಮಂತ್, ಪ್ರಸಿದ್ಧ ಲೇಖಕರು; ಗಣೇಶ್ ದೇಸಾಯಿ, ಕಾರ್ಯಾಧ್ಯಕ್ಷರು, ಕುಡಾಲ್ ದೇಶ್ಕರ್ ಸಹಯೋಗ, ಡೊಂಬಿವಲಿ. ಮುಂತಾದವರು ಉಪಸ್ಥಿತರಿದ್ದರು.
ಬೆಳಗಾತ 8:00 ಗಂಟೆಗೆ ಶ್ರೀ ವರದ ಸಿದ್ಧಿ ವಿನಾಯಕ ಮಂದಿರದಲ್ಲಿ ಶ್ರೀ ಗಣೇಶ ಪೂಜೆಯೊಂದಿಗೆ ಆರಂಭಗೊಂಡು ಸಾಯಂಕಾಲ 4:30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು.

ಸಮಾಜದ ವತಿಯಿಂದ ಪೂಜಾ ಕಾರ್ಯಕ್ರಮವನ್ನು ಸಮಾಜದ ಹಿರಿಯ ಕಾರ್ಯಕರ್ತರು ಹಾಗೂ ಮಾಜಿ ಕಾರ್ಯದರ್ಶಿಗಳಾದ ಶ್ರೀ ಯುತ ಮುಲಾರು ಪದ್ಮನಾಭ ಪ್ರಭು ದಂಪತಿಗಳು ಚೆಂಬೂರು, ಮುಂಬೈ ಇವರ ಮೂಲಕ ಸಮಾಜದ ಪ್ರಸಿದ್ಧ ಪೂರೋಹಿತರಾದ ಶ್ರೀ ಸುರೇಂದ್ರ ಭಟ್, ಶ್ರೀ ಸುಧಾಕರ ಭಟ್ ಮತ್ತು ಮಧುಕರ ಭಟ್ ಪೂನಾ ಇವರ ಸಾರಥ್ಯದಲ್ಲಿ ನೆರವೇರಿತು.
ಈ ಸಮಾರಂಭಕ್ಕೆ
ಪೂನಾದಿಂದ ಮುಂಬೈ ವರೆಗಿನ ಉಡುಪಿ ಮತ್ತು ಮಂಗಳೂರಿನ ಸಮಾಜ ಬಾಂಧವರು ಒಗ್ಗೂಡಿದ್ದರು.

ಸಮಾಜದ ಹೊಸ ಸಮಿತಿಯು ಇನ್ನು ಮುಂದೆ “ಕುಡಾಲ ದೇಶಸ್ಥ ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ” ಈ ಹೆಸರಿನಿಂದ ಉದ್ಘಾಟನೆಗೊಂಡಿತು.
ಆ ನಂತರ ಮುಂಬೈಯಲ್ಲಿರುವ ಸಮಾಜದ ಹಿರಿಯ ಕಾರ್ಯಕರ್ತರಾದ ಶ್ರೀ ಯುತ ಮುಲಾರು ಪದ್ಮನಾಭ ಪ್ರಭು ದಂಪತಿಗಳಿಗೆ, ಹಿರಿಯ ಉದ್ಯಮಿ ಶ್ರೀ ಯುತ ಮುಲಾರು ಗೋಪಾಲ ಪ್ರಭು ಡೊಂಬಿವಿಲಿ, ಸಮಾಜದ ಹಿರಿಯ ಧುರೀಣರಾದ ಉಡುಪಿ ಪರಾರಿ ಶ್ರೀ ಯುತ ಪುರುಷೋತ್ತಮ ಪಾಟೀಲ್ ದಂಪತಿಗಳು, ಸಮಾಜದ ಪ್ರಸಿದ್ಧ ಕಾರ್ಯಕರ್ತರಾದ ಮೊಡಂತ್ಯಾರು ಯಶವಂತ ನಾಯಕ್ ಮರೋಲ್, ಇನ್ನಿತರ ಪ್ರಮುಖರನ್ನು, ಎಲ್ಲಾ ಅತಿಥಿಗಳನ್ನು ಶ್ರೀ ಫಲ, ಶಾಲು ಮತ್ತು ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.
1969ನೇ ಇಸವಿಯಲ್ಲಿ ಶ್ರೀ ಯುತ ದಿ. ಜಿ ವಿ ಪಾಟೀಲರಿಂದ ಆರಂಭವಾದ ಈ ಸಂಸ್ಥೆಯನ್ನು 1978 ರಲ್ಲಿ ಶ್ರೀ ಯುತ ದಿ. ಅಮ್ಮೆಂಬಳ ಅಚ್ಯುತ ನಾಯ್ಕ್ ಅವರು ನೋಂದಣೀಕರಿಸಿದ ನಂತರದ ಇದುವರೆಗಿನ ಎಲ್ಲಾ ದಿವ್ಯಾತ್ಮರ ಸಮಾಜದ ಕೊಡುಗೆಯನ್ನು ಸ್ಮರಿಸಿ, ಸ್ಮೃತಿ ಚಿಹ್ನೆ ಹಾಗೂ ಶಾಲನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿ ಅವರ ಪುಣ್ಯ ಸ್ಮೃತಿಗೆ ಅಭಿವಾದನೆಗಳನ್ನು ಸಲ್ಲಿಸಲಾಯಿತು.
ಆ ನಂತರ ಮುಂಬೈಯಲ್ಲಿರುವ ಸಮಾಜದ ಮಕ್ಕಳು ಮತ್ತು ಭಗಿನಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಯಂಕಾಲ 4:30 ರವರೆಗೆ ಜರುಗಿದವು.