
ಹೆಜಮಾಡಿ ಗೋಪಾಲ್ ಎ. ಕೋಟ್ಯಾನ್ಕಾರ್ ಅವರಿಂದ ಸ್ಥಾಪಿಸಲ್ಪಟ್ಟಿರುವ ಪೌರಾಣಿಕ ವಾಚಕ ಸಮಿತಿ ಇದರ 49 ನೇ ವಾರ್ಷಿಕ ಶನಿಪೂಜೆ ಮಾರ್ಚ್ 1 ರಂದು ಶನಿವಾರ ಬೆಳಿಗ್ಗೆ ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗದ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ 10 ಗಂಟೆಗೆ ಕಲಶ ಮುಹೂರ್ತವನ್ನು ಸಮಿತಿಯ ಅರ್ಚಕರಾದ ಚಂದ್ರ ಶೇಖರ ಬಂಗೇರ ಅವರು ವಾಡಿಕೆಯ ವಿಧಿಯಂತೆ ನೆರವೇರಿಸಿದರು. ಪ್ರಾರಂಭದಲ್ಲಿ ಶನಿಗ್ರಂಥ ವಾಚಕರಾಗಿ ಸುರೇಂದ್ರನಾಥ್ ಹಳೆಯಂಗಡಿ, ಅರ್ಥ ವಿವರಣಕಾರರಾಗಿ ರತ್ನಾಕರ್ ಬಿ. ಬಂಗೇರ ಅವರು ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು. ನಂತರ ಪಾರಾಯಣದಲ್ಲಿ ಇಂದಿರಾ ಮೆಂಡನ್, ಎಚ್. ಮಹಾಬಲ್, ಗೀತಾ ಮೆಂಡನ್, , ಜಗನ್ನಾಥ್ ಪುತ್ರನ್, ಹರೀಶ್ ಕಾಂಚನ್, ಪ್ರೇಮಾ ಅಮೀನ್, ಪುರಂದರ ಅಮೀನ್, ಶ್ಯಾಮ್ ಪುತ್ರನ್, ಮೋಹನ್ ಅಮೀನ್, ಸಂಜೀವ ಬಂಗೇರ,ಕೇಶವ ಬಂಗೇರ, ಅವರು ಪಾಲ್ಗೊಂಡರು. ಅರ್ಥ ವಿವರಣೆಯಲ್ಲಿ ಬಾಲಕೃಷ್ಣ ಪೂಜಾರಿ, ಜಗನ್ನಾಥ್ ಕಾಂಚನ್,ಶೇಖರ್ ಮೆಂಡನ್, ಲಕ್ಷ್ಮಣ್ ಸುವರ್ಣ,ಪುಷ್ಪ ಬಂಗೇರ, , ಲೋಕನಾಥ್ ಕಾಂಚನ್ ನಿರ್ವಹಿಸಿದರು.,4.30ರಿಂದ 5.30 ರ ವರೆಗೆ ಭಜನೆ, ಹಾಗೂ ಸಮಿತಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಿರುವ ಹಾಗೂ ಮುಖ್ಯ ಅತಿಥಿ ಯಾಗಿದ್ದ ಮುರುಗನ್ ನಂಬಿಯರ್ ಅವರನ್ನು ಸನ್ಮಾನ ಮಾಡಲಾಯಿತು.ಮಹಾ ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆಯಿತು.ಸಮಿತಿಯ ಅಧ್ಯಕ್ಷ ರತ್ನಾಕರ್ ಬಂಗೇರ, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಕಾಂಚನ್, ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ, ಹರೀಶ್ ಕಾಂಚನ್, ಕೇಶವ್ ಬಂಗೇರ ಅವರು ಮುಂದಾಳತ್ವ ವಹಿಸಿದ್ದರು, ವಾಸು ಉಪ್ಪುರು, ಪುರಂದರ ಅಮೀನ್ ಪೂಜಾ ವಿಧಿಯಲ್ಲಿ ಸಹಕರಿಸಿದರು
ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು, ಮನ, ಧನದಿಂದ ಸಹಕರಿಸಿದ ಭಕ್ತ ಭಾಂದವರಿಗೆ ಕಾರ್ಯದರ್ಶಿ ಲೋಕನಾಥ್ ಕಾಂಚನ್ ಧನ್ಯವಾದ ಅರ್ಪಿಸಿದರು.