
ಚಿತ್ರ,ವರದಿ : ದಿನೇಶ್ ಕುಲಾಲ್
ಮುಂಬಯಿ ಮಾ 9.ನಗರದ ಪ್ರತಿಷ್ಠಿತ ಜಾತಿಯ ಸಂಸ್ಥೆಯಲ್ಲಿ ಒಂದಾದ ಬೋಂಬೆ ಬಂಟ್ಸ್ ಅಸೋಷಿಯೇಶನಿನ 41ನೇ ವಾರ್ಷಿಕ ಮಹಾಸಭೆಯು ಮಾ. 9 ರಂದು ಬೆಳಿಗ್ಗೆ ನವಿ ಮುಂಬಯಿಯ ಜೂಯಿ ನಗರದ ಬಂಟ್ಸ್ ಸೆಂಟರ್‌ನ ಶಶಿಕಲಾ ಮನ್‌ಮೋಹನ್ ಶೆಟ್ಟಿ ಕಾಂಪ್ಲೆಕ್ಸ್‌ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ಎಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯವಾದಿ ಡಿ ಕೆ ಶೆಟ್ಟಿಯವರು ಮುಂದಿನ ಕಾಲಾವಧಿಗೆ ಅಧ್ಯಕ್ಷರಾಗಿ ಸೇವೆ ಮಾಡಲಿದ್ದಾರೆ ಎಂದು ಘೋಷಿಸಲಾಯಿತು,
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನ್ಯಾಯವಾದಿ ಡಿ ಕೆ ಶೆಟ್ಟಿ ಅವರನ್ನು ನಿರ್ಗಮನ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಹೂಗುಚ್ಛ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ ,
ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ ,ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ,
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿಎಸ್. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ,
ಡಿ ಕೆ ಶೆಟ್ಟಿಯವರು ಭಾರತ ಸರಕಾರದ ನೋಟರಿ ಪಬ್ಲಿಕ್ ಯಗಿ ಇತ್ತೀಚೆಗೆ ಆಯ್ಕೆಗೊಂಡಿದ್ದಾರೆ,
ಅವರು ಹಲವಾರು ಬ್ಯಾಂಕ್‌ಗಳಿಗೆ ಪ್ಯಾನಲ್ ನ್ಯಾಯವಾದಿಯಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂಧೇರಿ ಪಶ್ಚಿಮದ ನಿವಾಸಿಯಾಗಿರುವ ಅವರು ಮೂಲತಃ ಬೋಳ ಪರ್ತಿಮಾರುಗುತ್ತು ಬಲ್ಯಾರದಡ್ಡುವಿನವರಾಗಿದ್ದು, ಮುಂಬಯಿಯ ಹಿರಿಯ ಹೊಟೇಲ್ ಉದ್ಯಮಿ ದಿ| ಕಾಡ್ಯ ಎಂ. ಶೆಟ್ಟಿ ಮತ್ತು ಸುರತ್ಕಲ್ ಮಧ್ಯ ಕುಂಜರಬಾಳಿಕೆ ದಿ| ಭವಾನಿ ಕೆ. ಶೆಟ್ಟಿ ದಂಪತಿಯ ಪುತ್ರ.
ಬಂಟ್ಸ್ ಲಾ ಫೋರಂನ ಮಾಜಿ ಅಧ್ಯಕ್ಷರಾಗಿ, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾರ್ಕಳ ಕಲ್ಯಾ ಹಿರಿಯ ಪ್ರಾಥಮಿಕ ಶಾಲೆ, ಬೆಳ್ಳಣ್ ಹೈಸ್ಕೂಲ್‌ನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಜವಾಬ್ ಮಹಾ ಪೋಷಕರಾಗಿದ್ದಾರೆ, ಹೋಟೆಲ್ ಅಸೋಸಿಯೇಷನ್ ಆಫ್ ಮಹಾರಾಷ್ಟ್ರ ದ “(ಆಹಾರ ” )ಚುನಾವಣೆ ಕಮಿಟಿಯ ಸಂಚಾಲಕರಾಗಿ ಕಳೆದ 24 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ, ಅವರು ಮುಂಬೈ ಬಂಟರ ಸಂಘದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದವರು, ರಾಷ್ಟ್ರೀಯ ಬ್ಯಾಂಕ್ ನಲ್ಲಿ 30 ವರ್ಷಗಳ ಸೇವೆ ಮಾಡಿ ನಿವೃತ್ತರಾಗಿದ್ದಾರೆ.
ಅಸೋಸಿಯೇಷನ್ ಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ನ್ಯಾಯವಾದಿ ಡಿಕೆ ಶೆಟ್ಟಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅವರು ಅಭಿನಂದನೆ ಸಲ್ಲಿಸಿದ್ದಾರೆ,
ವಾರ್ಷಿಕ ಮಹಾಸಭೆ ಬಳಿಕ ನಡೆದ ಬಹಿರಂಗ ಅಧಿವೇಶನದ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ,ಡಾ. ಶ್ರೀಧರ್ ಶೆಟ್ಟಿ (ಶಿಕ್ಷಣ) ಡಾ. ಸುನಿಲ್ ಎಚ್ ಶೆಟ್ಟಿ (ವೈದ್ಯಕೀಯ) ಮತ್ತು ಪ್ರತಾಪ್ ವಿ ಶೆಟ್ಟಿ (ಕ್ರೀಡೆ) ಉಪಸ್ತಿ ತರಿದ್ದರು.