April 1, 2025
ಮುಂಬಯಿ

ಕರ್ನಾಟಕ ಸಂಘ, ಕಲ್ಯಾಣ : ವಿಶ್ವ ಮಹಿಳಾ ದಿನಾಚರಣೆ


ಕಲ್ಯಾಣ,12/03/25: ಕಳೆದ 20 ವರ್ಷಗಳಿಂದ ಆಚರಿಸುತ್ತಿರುವ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಘದ ಪ್ರಥಮ ಮಹಿಳಾಧ್ಯಕ್ಷೆ ದಿ. ಶಾರದಾ ಭಾಸ್ಕರ ಶೆಟ್ಟಿಯವರು ಪ್ರಾರಂಭಿಸಿದ್ದು, ಈ ವರ್ಷ 9 ಮಾರ್ಚ 25ರಂದು ಮುರ್ಬಾಡ್ ರಸ್ತೆಯ ಬ್ರಾಹ್ಮಣ ಸೊಸೈಟಿ ಸಭಾಂಗಣದಲ್ಲಿ ಸಂಜೆ 5 ದರಿಂದ ವಿಜ್ರಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತ ವಿಕಾಸ್ ಪರಿಷತ್ ಕಲ್ಯಾಣ ಶಾಖೆಯ ಅಧ್ಯಕ್ಷೆ ಶ್ರೀಮತಿ ಕವಿತ ಮಿಶ್ರ ಆಗಮಿಸಿದ್ದು ಸಮಾಜದ ಎಲ್ಲಾ ರಂಗದಲ್ಲಿಯೂ ಮಹಿಳೆಯರ ಸಾಧನೆಯ ಬಗ್ಗೆ ಉಲ್ಲೇಖಿಸುತ್ತಾ ಬೇಟಿ ಬಚಾವೊ, ಬೇಟಿ ಪಡಾವೊ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಉಲ್ಲೇಖಿಸಿದರು. ಜೊತೆಗೆ ಸರಕಾರಿ ಹಾಗೂ ಉದ್ಯಮ ರಂಗಗಳಲ್ಲಿ ಮಹಿಳೆಯರ ಸಾಧನೆಯ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ನಿಮ್ಕರ್ ರವರು ಗೌರವ ಅತಿಥಿಯಾಗಿ ಭಾಗವಹಿಸಿದ್ದು ಜನರ ಜೀವನದಲ್ಲಿ ಯೋಗಾಭ್ಯಾಸದಿಂದ ಯೋಗ ಸಾಧನೆಯಿಂದ ರೋಗ ಮುಕ್ತ ಜೀವನವನ್ನು ನಡೆಸುವುದು ಸಾದ್ಯ ಎಂದು ತಿಳಿಯ ಹೇಳಿದರಲ್ಲದೆ ಶಾಲಾ ಕಾಲೇಜುಗಳಲ್ಲಿ ಯೋಗವನ್ನು ಭೌತಿಕ ವಿಷಯವನ್ನಾಗಿ ಅನುಷ್ಠಾನ ಗೊಳಿಸಬೇಕು. ಯೋಗ ಶಿಕ್ಷಕರ ನೇಮಕವಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಕಾರ್ಯಕ್ರಮದಲ್ಲಿ ಕಲ್ಯಾಣ ಪರಿಸರದ ಪ್ರಸಿದ್ಧ ದಂತ ವೈದ್ಯೆ ಡಾ. ಪ್ರದ್ನ್ಯ ಬಾಬನ್ನವರ್ ರವರನ್ನು ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಗೈದ ಶ್ರೀಮತಿ ಮಹಾಲಕ್ಷ್ಮಿ ತೋರ್ವಿ ಯವರನ್ನು ಶಾಲು ಹೂಗುಚ್ಛ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಸದಸ್ಯರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವಿವಿಧ ಮನಮೋಹಕ, ಉತ್ಕ್ರಷ್ಟ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಶ್ರೀಮತಿ ವಸಂತ ಚಂದ್ರ ಶೇಖರ್ ನಿರ್ದೇಶಿತ “ಅಂದು – ಇಂದು” ಎಂಬ ಕಿರು ನಾಟಕವನ್ನು ಪ್ರಸ್ತುತ ಪಡಿಸಲಾಯಿತು. ಈ ಕಿರು ನಾಟಕದಲ್ಲಿ ವಸಂತ ಚಂದ್ರ ಶೇಖರ್, ಪೂಜಾ ಕುಲಕರ್ಣಿ, ಶೈಲಜ ಜೋಶಿ, ಅಶ್ವಿನಿ ವಾಮನಾಚಾರ್, ರಜನಿ ಕುಲಕರ್ಣಿ ಹಾಗೂ ಲಲಿತಾ ರಾವ್ ಭಾಗವಹಿಸಿದರು.

ಪ್ರಸನ್ನ ಹೆಗ್ಡೆ ನಿರೂಪಣೆ ಗೈದ ಸಭಾ ಕಾರ್ಯಕ್ರಮ ವೇದಿಕೆಯ ಮಹಿಳಾ ಗಣ್ಯರಿಂದ ದೀಪ ಪ್ರಜ್ವಲನೆ ಹಾಗೂ ಸ್ವರ ಕಲಾ ವೇದಿಕೆಯ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾನಾಯಕ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂಘದ ಮಹಿಳಾಧ್ಯಕ್ಷೆ ಶ್ರೀಮತಿ ವೀಣಾ ಕಾಮತ್ ರವರು ಸಭಿಕರನ್ನು ಸ್ವಾಗತಿಸಿದರೆ, ಸಂಘದ ಪೂರ್ವ ಅಧ್ಯಕ್ಷೆ ದರ್ಶನ ಸೋನ್ಕರ್ ರವರು ಪ್ರಸ್ತಾವನೆ ಮಾಡಿದರು.

ಶ್ರೀಮತಿ ವೀಣಾ ನಾಯಕ್, ವಿಭಾ ದೇಶಮುಖ್, ಇಂದಿರಾ ಕುಲಕರ್ಣಿ, ಹಾಗೂ ಪ್ರಸನ್ನ ಹೆಗ್ಡೆ ಯವರು ಮುಖ್ಯ ಅತಿಥಿ, ಗೌರವ ಅತಿಥಿ ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಮತಿ ವೀಣಾ ನಾಯಕ್ ರವರು ವಂದನಾರ್ಪಣೆ ಮಾಡಿದ ರಂಗು ರಂಗಿನ ಈ ಕಾರ್ಯಕ್ರಮ ರಾಷಗೀತೆಯೊಂದಿಗೆ ಮುಕ್ತಾಯವಾಯಿತು.

Related posts

ಹಿಂದೂ ಜೂನಿಯರ್ ಕಾಲೇಜು ಶಿರ್ವ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಸಮಿತಿಯ  ಕುಟುಂಬೋತ್ಸವ ಹಾಗೂ ದಶಮಾನೋತ್ಸವದ  ವಿಜಯೋತ್ಸವ

Mumbai News Desk

ಸಿರಿನಾಡ ವೆಲ್ಪೆರ್ ಅಸೋಷಿಯೇಶನ್ ನ 23 ನೇ ವಾರ್ಷಿಕೋತ್ಷವ. ಸಾಮೂಹಿಕ ಶ್ರೀಶನೀಶ್ವರ ಪೂಜೆ ಸoಪನ್ನ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ, ಸಾಧಕರಿಗೆ ಸನ್ಮಾನ

Mumbai News Desk