
ಭಾರತ್ ಬ್ಯಾಂಕಿನ ವಿಲೇಪಾರ್ಲೆ (ಪಶ್ಚಿಮ) ಶಾಖೆಯು ತನ್ನ ಗ್ರಾಹಕರ ಸೇವೆಯ 10ನೇ ವರ್ಷವನ್ನು ಇತ್ತೀಚೆಗೆ ಆಚರಿಸಿದೆ.
ಬ್ಯಾಂಕಿನ ನಿರ್ದೇಶಕರಾದ ಸುರೇಶ್ ಬಿ. ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ, ಕಳೆದ ಹತ್ತು ವರ್ಷದಲ್ಲಿನ ಶಾಖೆಯ ಪ್ರಯಾಣವನ್ನು ಶ್ಲಾಘಿಸಿದರು.
ಬ್ಯಾಂಕಿನ ಗ್ರಾಹಕರು, ಶಾಖೆಯ ಸಿಬ್ಬಂದಿ ವರ್ಗದವರು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಬ್ಯಾಂಕಿನ ಹಾಗೂ ಶಾಖೆಯ ಹಿರಿಯ ಗ್ರಾಹಕರಾದ ಮನೀಷಾ ಭಟ್ಟಾಚಾರ್ಜಿ ಮತ್ತು ಹಿತೇನ್ ಥಕ್ಕರ್, ಬ್ಯಾಂಕಿನ ನಿರ್ದೇಶಕ ಸುರೇಶ್ ಬಿ. ಸುವರ್ಣ, ಶಾಖಾ ಪ್ರಭಂದಕಿ ಸರೋಜಾ ಸುವರ್ಣ ಮತ್ತು ಇತರ ಗಣ್ಯರು ಅತಿಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ದಶಮಾನೋತ್ಸವವನ್ನು ಆಚರಿಸಿದರು.
ಶಾಖೆಯ ಉಪ ಪ್ರಭಂದಕಿ ದಕ್ಷಾ ಘಗಡ ಮತ್ತು ಸಿಬ್ಬಂದಿ ವರ್ಗದವರಾದ ಕಿರಣ್ ಸಂಗೋಯ್, ನಿಧಿ ಮಹಾದ್ದಾಲ್ಕರ್, ಧೀರಜ್ ಕೋಟ್ಯಾನ್ ಮತ್ತು ಪ್ರಣಾಲಿ ರಾವ್, ಸಹಾಯಕ ಸಿಬ್ಬಂದಿ ಆನಂದ್ ಗಾವ್ಡೆ ಮತ್ತು ಭದ್ರತಾ ಸಿಬ್ಬಂದಿ ರಾಮಚಂದ್ರ ಗಾಯಕ್ವಾಡ್ ಸೇರಿದಂತೆ ಶಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹತ್ತನೆಯ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಖಾ ಪ್ರಭಂದಕಿ ಸರೋಜಾ ಸುವರ್ಣ, ಗ್ರಾಹಕರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. “ನಮ್ಮ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ತೃಪ್ತಿಕರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಗ್ರಾಹಕರು ಮತ್ತು ಸಿಬ್ಬಂದಿಗಳ ಬ್ಯಾಂಕಿನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ನಮ್ಮ ಗ್ರಾಹಕರೊಂದಿಗೆ ನಿರಂತರ ಸುದೀರ್ಘ್ಹ ಹಾಗೂ ತೃಪ್ತಿಕರ ಸೇವೆ ಇನ್ನೂ ಉನ್ನತ ಮಟ್ಟದಲ್ಲಿ ನೀಡುತ್ತೇವೆ ಎಂದು ನುಡಿದರು,
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಮತ್ತು ಉಪಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ ಅಮೀನ್ ಹಾಗೂ ನಿರ್ದೇಶಕರು ಶುಭಾಶಯಗಳು ತಿಳಿಸಿರುವರು.