
ನಾಯ್ಗoವ್- ವಸಯಿ – ನಾಲಾಸೋಪಾರ-ವಿರಾರ್ ಪರಿಸರದ ಮೊಗವೀರ ಬಂಧುಗಳ ಸಂಘಟನೆ, ವಸಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಮಾರ್ಚ್ 16, ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ವಸಯಿ ಪಶ್ಚಿಮ, ವಸಯಿ ಕರ್ನಾಟಕ ಸಂಘದ ಹತ್ತಿರದ, ಸ್ವಾಮಿ ನಾರಾಯಣ ಮಂದಿರದ ಎರಡನೇ ಅಂತಸ್ತಿನ ಸಭಾಗ್ರಹದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷರಾದ ಯಶೋದರ ವಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಂಘಟಕಿ ಬ್ಯಾಕ್ವರ್ಡ್ ಅಲ್ ಡೇ ದಿನರ್ ನ ಸಹಾ ಸ್ಥಾಪಕಿ ಸುಚಿತ್ರ ಎಸ್ ಪುತ್ರನ್, ಗಾಯತ್ರಿ ಪರಿವಾರದ ಸಂಚಾಲಕರಾದ ಜಯಲಕ್ಷ್ಮಿ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
ಈ ಸಂದರ್ಭ ಸಂಘದ ಹಿರಿಯ ಸಕ್ರಿಯ ಸದಸ್ಯೆ ಸರೋಜಿನಿ ಜೆ ಕರ್ಕೇರ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಭಜನೆ ಸ್ಪರ್ಧೆ, ಹಳದಿ ಕುಂಕುಮ ಪ್ರಸ್ತುತಗೊಳ್ಳಲಿದೆ.
ಸಂಘದ ಅಧ್ಯಕ್ಷರಾದ ಯಶೋಧರ ವಿ ಕೋಟ್ಯಾನ್, ಉಪಾಧ್ಯಕ್ಷರಾದ ದಯಾನಂದ್ ಕುಂದರ್, ಕಾರ್ಯದರ್ಶಿ ಶೇಕರ್ ಕರ್ಕೇರ, ಕೋಶಾಧಿಕಾರಿ ವಿಶ್ವನಾಥ್ ಬಂಗೇರ, ಸಲಹೆಗಾರ ಮೋಹನ್ ಪುತ್ರನ್, ಸಂಚಾಲಕರಾದ ಪ್ರದೀಪ್ ಪುತ್ರನ್, ಕಾರ್ಯಕ್ರಮ ಸಮಿತಿಯ
ಕಾರ್ಯಧ್ಯಕ್ಷ ಪ್ರತಿಕ್ ಶ್ರೀಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೇ ಪ್ರೇಮ ಎಸ್ ನಾಯಕ್, ಉಪಾಧ್ಯಕ್ಷೆ ಪಲ್ಲವಿ ಪುತ್ರನ್, ಸಲಹೆಗಾರರಾದ ಮೋಹಿನಿ ಮಲ್ಪೆ ಹಾಗೂ ಟ್ರಸ್ಟಿಗಳು, ಸರ್ವ ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.