
ಮುಂಬೈಯಲ್ಲಿ ಭವಾನಿ ಟೀಚರ್ ಎಂದೇ ಪರಿಚಿತರಾದ ಭವಾನಿ ಜಿ ಪೂಜಾರಿ (86), ಇಂದು (ಮಾ. 17), ಬೆಳಿಗ್ಗೆ ಅಂಧೇರಿ ಪಶ್ಚಿಮ ರಮೇಶ್ ನಗರದ ಸ್ವಗ್ರಹದಲ್ಲಿ, ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೂಲತಃ ಉಡುಪಿಯ ಕಲ್ಯಾಣಪುರದವರಾದ ಭವಾನಿ ಅವರು ಮುಂಬೈಯಲ್ಲಿ ಕನ್ನಡ ಮಾಧ್ಯಮ ಶಿಕ್ಷಕಿಯಾಗಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ, ಜೆರಿಮೇರಿ ಕನ್ನಡ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಸರಳ, ಮೃದು ಸ್ವಭಾವದವರಾದ ಇವರು, ವಿದ್ಯಾರ್ಥಿಗಳೆಲ್ಲರ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದರು.
ಮೃತರು ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು, ಮೊಮ್ಮಕ್ಕಳನ್ನು, ಅಳಿಯ ಭಾರತ್ ಬ್ಯಾಂಕಿನ ನಿವೃತ್ತ ಡಿಜಿಎಂ ರಘು ಪೂಜಾರಿ, ಮಲ ಸಹೋದರ ಬಿಲ್ಲವರ ಎಸೋಸಿಯೆಷನ್ ನ ಮಾಜಿ ಅಧ್ಯಕ್ಷ ನಿತ್ಯನಂದ ಡಿ ಕೋಟ್ಯಾನ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವರು.