
ಮುಂಬಯಿ : ಕಾನೂನು ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಮಡಿದ ET ಗ್ಲೋಬಲ್ ಲೀಗಲ್ ಅವಾರ್ಡ್ಸ್ 2025 ರ “ವರ್ಷದ ವ್ಯವಸ್ಥಾಪಕಿ ಪಾಲುದಾರ – ಮಹಿಳೆ” ಪ್ರಶಸ್ತಿಯನ್ನು ಮಹಾನಗರದ ಅಂಧೇರಿ ಪೂರ್ವದ ಖ್ಯಾತ ವಕೀಲೆ ಕನ್ನಡತಿ ನ್ಯಾ. ಮೀನಾಕ್ಷಿ ಪದ್ಮನಾಭ ಅಚಾರ್ಯ ಪಡೆದಿದ್ದಾರೆ.
ಮಾರ್ಚ್ 5, 2025 ರಂದು ಮುಂಬಯಿಯಲ್ಲಿ ನಡೆದ ET ಗ್ಲೋಬಲ್ ಲೀಗಲ್ ಕನ್ವೆನ್ಷನ್ 2025 ರಲ್ಲಿ ಈ ಪ್ರಶಸ್ತಿಯನ್ನು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಎನ್. ಸಾಯಿಕೃಷ್ಣ ಅವರು ಪ್ರಧಾನಿಸಿದರು.
ಕಾನೂನು ಕ್ಷೇತ್ರದಲ್ಲಿ 20 ವರ್ಷಕ್ಕಿಂತಲೂ ಅಧಿಕ ಕಾಲದ ಅನುಭವವನ್ನು ಪಡೆದಿರುವ ನ್ಯಾ. ಮೀನಾಕ್ಷಿ ಅಚಾರ್ಯ ಅವರು ಈಗಾಗಲೇ ಪ್ರತಿಷ್ಠಿತ ಪೋರ್ಬಸ್ ಇಂಡಿಯಾ ಸೇರಿ ಹಲವಾರು ಉನ್ನತ ಮಟ್ಟದ ಪ್ರಶಸ್ತಿ, ಪುರಸ್ಕಾರ ಹಾಗೂ ಸನ್ಮಾನಗಳನ್ನು ದೇಶ ವಿದೇಶಗಳಲ್ಲೂ ಪಡೆದಿದ್ದು ಕಳೆದ ಸುಮಾರು 15 ವರ್ಷಗಳಿಂದ ಮುಂಬಯಿಯ ಅಂಧೇರಿ ಪೂರ್ವದ ಸಹರ್ ನಲ್ಲಿ ಅರ್.ಎಮ್. ಎ. ಲೀಗಲ್ ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಇವರ ಸಂಸ್ಥೆಯು ದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಚಿನ್ನೈ, ಮತ್ತು ಯುನೈಟೆಡ್ ಕಿಂಗ್ ಡಂನಲ್ಲಿ ಖಚೇರಿಯನ್ನು ಹೊಂದಿದೆ. ವಿಲೀನತೆ, ಸ್ವಾಧೀನತೆ, ಖಾಸಗಿ ಷೇರುಗಳು ಮತ್ತು ಹೂಡಿಕೆಗಳು, ವಿದೇಶಿ ಹೂಡಿಕೆ ನೀತಿಗಳು, ಕಾರ್ಪೊರೇಟ್ ಮತ್ತು ವಾಣಿಜ್ಯ ವಹಿವಾಟುಗಳು, ಬಂಡವಾಳ ಮಾರುಕಟ್ಟೆ, ಇ-ವಾಣಿಜ್ಯ, ರಿಯಲ್ ಎಸ್ಟೇಟ್, ಮೂಲಸೌಕರ್ಯ, ಉದ್ಯೋಗ ಮತ್ತು ಕಾರ್ಮಿಕ ವಿಷಯಗಳಲ್ಲಿ ಇವರು ಪರಿಣಿತರು.
ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮ
ಸೀತಾರಾಮ ಬಾಬು ಆಚಾರ್ಯ ಮತ್ತು ಶೋಭಾ ಸೀತಾರಾಮ ಆಚಾರ್ಯ ದಂಪತಿಯ ಸುಪುತ್ರಿಯಾದ ಇವರು ಮೂಡಬಿದ್ರೆಯ ಇರುವೆಲ್ ನ ಪದ್ಮನಾಭ ರಾಮಣ್ಣ ಆಚಾರ್ಯ ಅವರ ಪತಿ.
ಪುತ್ರ ಧ್ರುವ ಆಚಾರ್ಯ ಬೆಂಗಳೂರಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಇವರನ್ನು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಜೈ ಶ್ರೀ ವಿಶ್ವಕರ್ಮ ಭಜನಾ ಸಂಘ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಸನ್ಮಾನಿಸಿದೆ.