ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೆ ಎಸ್ ರಾವ್ ನಗರ ಮೂಲ್ಕಿ ಇದರ ಮಾಜಿ ಅಧ್ಯಕ್ಷರಾದ ದಿ. ಶ್ರೀ ರಾಘವ ಸುವರ್ಣರವರ ಧರ್ಮಪತ್ನಿ ಶ್ರೀಮತಿ ಕುಸುಮ ಸುವರ್ಣರವರು (76) ದಿನಾಂಕ 25-03-2025ರಂದು ಸ್ವಲ್ಪ ಸಮಯದ ಅನಾರೋಗ್ಯದಿಂದ ನಿಧನರಾದರು. ಮೃತರು ಧಾರ್ಮಿಕ ವಿಧಿವಿಧಾನಗಳನ್ನು ಅಳವಡಿಸಿಕೊಂಡು ಜನರಿಗೆ ಮಾರ್ಗದರ್ಶಕರಾಗಿದ್ದರು. ಮೃತರು ಒಂದು ಗಂಡು, ಮೂರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರು ಅಭಯಚಂದ್ರ ಜೈನ್, ಮಾಜಿ ಸಚಿವರಾದ ವಿನಾಯಕ ಕುಮಾರ್ ಸೊರಕೆ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ಪಿ ಸಾಲಿಯಾನ್, ಗೋಪಿನಾಥ ಪಡಂಗ, ಪ್ರಕಾಶ್ ಸುವರ್ಣ, ದನಂಜಯ ಮಟ್ಟು, ನಾರಾಯಣಗುರು ಸಮಾಜ ಸೇವಾ ಸಂಘ ಕೆ.ಎಸ್.ರಾವ್ ನಗರ ಇದರ ಅಧ್ಯಕ್ಷರಾದ ಮಹಾಬಲ ಸನಿಲ್, ಬಿಲ್ಲವ ಮುಖಂಡ ಜನಾರ್ದನ ಬಂಗೇರ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಅಸೀಫ್ ಇವರೆಲ್ಲರು ಸಂತಾಪ ವ್ಯಕ್ತಪಡಿಸಿದ್ದಾರೆ.
