ಮುಂಬಯಿ : ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಈಗಾಗಲೇ ಮುಂಬಯಿ ನಗರ ಉಪನಗರ ಹಾಗೂ ತವರೂರಲ್ಲಿ ಅಗತ್ಯವಿದ್ದವರಿಗೆ ವಿವಿಧ ರೀತಿಯಲ್ಲಿ ಸಹಾಯ ನೀಡುತ್ತಿದ್ದು ಇದೀಗ ಮಾ. ೨೩ ರಂದು ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಸಾದ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ (HERC) ಗೆ ಬೆಂಬಲಿಸುದರೊಂದಿಗೆ ರೂಪಾಯಿ ಎರಡು ಲಕ್ಷ ದೇಣಿಗೆ ನೀಡಿದೆ. ಈ ಮೊತ್ತವನ್ನು
ಟೀಮ್ ಮುಷಕ್ ಅನೀಶ್ ಬಿರಾದಾರ್ ಅವರಿಗೆ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ರವಿ ಉಚ್ಚಿಲ್ ಅವರು ಇತರ ಸದಸ್ಯರೊಂದಿಗೆ ಹಸ್ತಾಂತರಿಸಿದರು.
ಈ ಮೊತ್ತವು ನಾಸಾದ ಅಗತ್ಯ ವೆಚ್ಚಕ್ಕೆ ಸಹಕರಿಸುದರೊಂದಿಗೆ ನಾಸಾಕ್ಕೆ ನೀಡುವ ಬೆಂಬಲವೂ ಇದಾಗಿದೆ.
ಏಪ್ರಿಲ್ 2025 ರಲ್ಲಿ ಅಲಬಾಮಾದ ಹಂಟ್ಸ್‌ವಿಲ್ಲೆಯಲ್ಲಿರುವ ಯು.ಎಸ್. ಸ್ಪೇಸ್ ಮತ್ತು ರಾಕೆಟ್ ಸೆಂಟರ್‌ನಲ್ಲಿ ನಡೆಯಲಿರುವ ಸಾಸಾದ ಎಚ್.ಇ.ಆರ್.ಸಿ. ರಿಮೋಟ್-ಕಂಟ್ರೋಲ್ಡ್ ವಿಭಾಗಕ್ಕೆ ಆಯ್ಕೆಯಾದ ಮೊದಲ ಭಾರತೀಯ ತಂಡವಾಗಿ ಟೀಮ್ ಮುಷಕ್ ಇತಿಹಾಸ ನಿರ್ಮಿಸಿದೆ.
ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಹಿರಿಯ ಸಲಹೆಗಾರರಾದ ಮೋಹನ್ ಶೆಟ್ಟಿ ಮತ್ತು ಶ್ರೀಮತಿ. ಮೀರಾ ಶೆಟ್ಟಿ ಕಾರ್ಯದರ್ಶಿ ರಾಧೇಶ್ ಉಚ್ಚಿಲ್, ಸಮಿತಿಯ ಇತರ ಗಣ್ಯರಾದ ಕುಮಾರ್ ಐಲ್, ಯಶವಂತ ಐಲ್, ಶ್ರೀಮತಿ ಚಂದ್ರಕಲಾ ಉಚ್ಚಿಲ್, ಮತ್ತು ಶ್ರೀಮತಿ ಪ್ರೀತಿ ಸಿ. ಉಚ್ಚಿಲ್, ಧರಂಪಾಲ್, ಚಂದ್ರಶೇಖರ್ ಸಿ. ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಂಡ ಮುಷಕ್‌ಗೆ ಶುಭ ಹಾರೈಸಲಾಯಿತು.