34.7 C
Karnataka
March 31, 2025
ಕ್ರೀಡೆ

ಗಿರೀಶ್ ಶೆಟ್ಟಿ ತೆಳ್ಳಾರ್ ನೇತೃತ್ವದಲ್ಲಿ ಮೇ 3 ರಂದು  ಮುನಿಯಾಲಿನಲ್ಲಿ ರಾಷ್ಟ್ರೀಯ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ

ಕಾರ್ಕಳ : ರಾಷ್ಟ್ರೀಯ ಕಬ್ಬಡಿ ಆಟಗಾರರನ್ನು ಒಗ್ಗಟ್ಟು ಮಾಡಿ ಹಿಂದೆ ಕಾರ್ಕಾಳದಲ್ಲಿ ಎರಡು ಬಾರಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ. ಮುಂಬಯಿಯ ಬಂಟರ ಸಂಘದ ಜೊತೆ ಕಾರ್ಯದರ್ಶಿ. ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ಮುಟ್ಟುಪಾಡಿ ಇದರು ಗೌರವಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರು ನೇತೃತ್ವದಲ್ಲಿ

ಹೆಬ್ರಿ ತಾಲೂಕು ಮುನಿಯಾಲಿನಲ್ಲಿ ಮೆ 3ರಂದು ಮುನಿಯಾಲಿನ ವೀರ ಸಾರ್ವಕ‌ರ್ ಮೈದಾನದಲ್ಲಿ ಕಾರ್ಕಳದ  ಕಬಡ್ಡಿ ಆಟಗಾರ ದಿ ಪ್ರೀತಂ ಶೆಟ್ಟಿ ಸ್ಮರಣಾರ್ಥ ರಾಷ್ಟ್ರಮಟ್ಟದ ಕಬಡ್ಡಿ ಆಯೋಜಿಸಲಾಗಿದೆ .

ಈ ಬಗ್ಗೆ  ಮಾ. 18ರಂದು ಕಾರ್ಕಳದ ಹೊಟೇಲ್ ಪ್ರಕಾಶ್‌ನಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಗಿರೀಶ್ ಶೆಟ್ಟಿ ತೆಳ್ಳಾರ್  ನಮ್ಮೂರಿನ ಮುಟ್ಟುಪಾಡಿಯ ರಾಷ್ಟ್ರೀಯ ಕಬಡ್ಡಿ ಆಟಗಾರ. ಕಬ್ಬಡ್ಡಿ ಪಂದ್ಯಾಟದ ವೇಳೆ ಹೃದಯಾಘಾತಕ್ಕೀಡಾಗಿ ಸಾವಿಗೀಡಾದ  ದಿ. ಪ್ರೀತಂ ಶೆಟ್ಟಿಯವರ ಸ್ಮರಣಾರ್ಥ ಈ ಕಬ್ಬಡಿ ಪಂದ್ಯಾಟ ನಡೆಯಲಿದೆ. ಪಂದ್ಯಾಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸಮಾಜ ಸೇವಕ.  ಹಿಂದೂ ಪ್ರಖರವಾದಿ  ಮಹೇಶ್ ಶೆಟ್ಟಿ ತೆಳ್ಳಾರ್ ಯವರು ವಹಿಸಲಿದ್ದಾರೆ ಹಾಗೂ ಒಟ್ಟು ಕಾರ್ಯಕ್ರಮದ  ಸಹಭಾಗಿತ್ವವನ್ನು ಉದ್ಯಮಿ. ಸಮಾಜ ಸೇವಕ ಉದಯ ಶೆಟ್ಟಿ ಮುನಿಯಾಲ್ ವಹಿಸಿಕೊಂಡಿರುತ್ತಾರೆ.ಇದು

ರಾಜಕೀಯ ರಹಿತವಾಗಿ ನಡೆಯುವ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ನಟ-ನಟಿಯರು ಭಾಗವಹಿಸಲಿದ್ದಾರೆ .ಬೆಳಗ್ಗೆ 9.30ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಆಯ್ದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಇದರ ವಿಜೇತರಿಗೆ ಪ್ರಥಮ – 25 ಸಾ. ರೂ., ದ್ವಿತೀಯ – 15 ಸಾ. ರೂ., ತೃತೀಯ 10 ಸಾ.ರೂ. ಹಾಗೂ ಚತುರ್ಥ 10 ಸಾ. ರೂ. ಬಹುಮಾನ ನೀಡಲಾಗುತ್ತದೆ. ಸಂಜೆ 6.30ರಿಂದ ನಡೆಯುವ 8 ತಂಡಗಳ ಪ್ರೋ ಕಬ್ಬಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಆಡಲಿದ್ದಾರೆ. ಬಿಡ್ಡಿಂಗ್ ಮೂಲಕ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರಾಷ್ಟ್ರಮಟ್ಟದ 8 ಫ್ರಾಂಚೈಸಿಗಳಿಗೆ ತಂಡಗಳ ಖರೀದಿಗೆ ಅವಕಾಶವಿದೆ. ಇದರಲ್ಲಿ ಎರಡು ತಂಡಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮೀಸಲಿರಿಸಲಾಗಿದೆ.

 ವಿಜೇತರಿಗೆ ಪ್ರಥಮ – 1 ಲ. ರೂ., ದ್ವಿತೀಯ – 75 ಸಾ.ರೂ., ತೃತೀಯ ಮತ್ತು ಚತುರ್ಥ -50 ಸಾ.ರೂ. ಹಾಗೂ ಉಳಿದ ನಾಲ್ಕು ತಂಡಗಳಿಗೆ ತಲಾ 25 ಸಾ.ರೂ. ಸಮಾಧನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್‌ ಕುಂಬ್ಳೆ ಮಾತನಾಡಿ, ಮುನಿಯಾಲಿನಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದಲ್ಲಿ ಹಿಂದೂಸ್ಥಾನದ ಉತ್ತಮ ಆಟಗಾರರು ಭಾಗಿಯಾಗಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅವಶ್ಯ ಎಂದರು. 

    ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ.) ಮುಟ್ಟುಪಾಡಿ ಇದರ ಅಧ್ಯಕ್ಷ ಸುನಿಲ್ ಹೆಗ್ಡೆ ಕೋಶಾಧಿಕಾರಿ ಸುದೀಪ್‌ ಅಜಿಲ, ಸುಹಾಶ್ ಶೆಟ್ಟಿ ಮುಟ್ಟುಪಾಡಿ, ಹರೀಶ್ ಶೆಟ್ಟಿ ಪಡುಕುಡೂರು, ಗೋಪಿನಾಥ್ ಭಟ್ ಉಪಸ್ಥಿತರಿದ್ದರು.

ರಾಷ್ಟ್ರೀಯ ಕಬಡ್ಡಿ ಆಟಗಾರರ ಆತ್ಮೀಯತೆಯನ್ನು ಹೊಂದಿರುವ ಗಿರೀಶ್ ಶೆಟ್ಟಿ ತೆಳ್ಳಾರ್ ಯವರು ಈ ಹಿಂದೆ ಎರಡು ಬಾರಿ ತನ್ನ ಊರು ಕಾರ್ಕಳದಲ್ಲಿ ಬಹು ವೆಚ್ಚದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟವನ್ನು ನಡೆಸಿ ದೇಶದ ಅತ್ಯುತ್ತಮ ಕಬಡ್ಡಿ ಆಟಗಾರರನ್ನು ಕಾರ್ಕಳಕ್ಕೆ ಕರೆತಂದಿರುವ ಹೆಮ್ಮೆ ಇವರಿಗೆ ಇದೀಗ. ಮೂರನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಆಟ ಕಾರ್ಕಳದಲ್ಲಿ ನಡೆಯುವುದಕ್ಕೆ ಎಲ್ಲಾ ರೀತಿಯ ಸಿದ್ಧತೆ ಕೊಂಡಿದೆ.

Related posts

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk

ಮುಂಬೈ ಬಂಟರ ಸಂಘದ   ಡೊಂಬಿವಲಿ ಪ್ರಾದೇಶಿಕ ಸಮಿತಿಗೆ. ಟ್ರೋಪಿ , ಒಂದು ಲಕ್ಷ

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk

ಪ್ಯಾರಿಸ್ ಒಲಿಂಪಿಕ್ಸ್ – ಭಾರತಕ್ಕೆ ಮೊದಲ ಪದಕ, ಶೂಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್

Mumbai News Desk

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ : ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ – ಲವ ಕರ್ಕೇರ.

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಪ್ರಿನ್ಸೆಸ್ ಆಫ್ ಕರಾವಳಿ 2025 ಆಗಿ ವಿಯಾ ಸಾಯಿ ಆಯ್ಕೆ

Mumbai News Desk