35.8 C
Karnataka
March 31, 2025
ಮುಂಬಯಿ

ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್ – ಜಾಗತಿಕ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮ


 

ಮಹಿಳೆಯರು ಮಾನಸಿಕ ಒತ್ತಡದಿಂದ ಹೊರಬರಬೇಕು : ಪ್ರಜ್ಞ ಶೆಟ್ಟಿ                   

ಕರ್ನಾಟಕ ಮಹಾಮಂಡಲ ಮೀರಾ – ಭಾಯಂದರ್    ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ  ಜಾಗತಿಕ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮ ಮಾ.23 ನೇ ಭಾನುವಾರ ಸಂಜೆ  ಪ್ರಥಮೇಶ ಹಾಲ್ ಆರ್. ಎನ್. ಪಿ ಪಾರ್ಕ್ ಎಸ್ ವಿ ರೋಡ್ ಭಾಯಂದರ್ ಪೂರ್ವ ಇಲ್ಲಿ ನಡೆಯಿತು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಿನ್ಸಿಪಾಲ, ಕೌನ್ಸಿಲರ್ ಪ್ರಜ್ಞಾ ಶೆಟ್ಟಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಮಹಿಳೆಯರು ಮಾನಸಿಕ ಒತ್ತಡದಿಂದ ಹೊರಬಂದು ಪ್ರತಿನಿತ್ಯ ಮಹಿಳಾ ದಿನಾಚರಣೆ ಆಚರಿಸಬೇಕು.
 ಮಹಿಳೆಯರು ದಿನನಿತ್ಯ ತನ್ನ ಸಂಸಾರ, ಗಂಡ, ಮಕ್ಕಳು, ಮನೆಯ ಕೆಲಸ, ಅಡುಗೆ ತೊಡುಗೆಗಳ ಬಗ್ಗೆ ಅತಿ ಹೆಚ್ಚು ಗಮನಹರಿಸುತ್ತಾ ರಕ್ತದ ಒತ್ತಡ ,ಸಕ್ಕರೆ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಜೀವನವನ್ನು ಅತೀ ಸರಳ ವಿಚಾರದಿಂದ ನಡೆಸುತ್ತಾ ಏನು ನಮ್ಮಲ್ಲಿದೆಯೋ ಅದೇ ನಮ್ಮ ದೇವರು ನೀಡಿದ ಸೌಭಾಗ್ಯ ಎಂದು ಅರಿತು ಸರಳ ಜೀವನ ಶೈಲಿಯನ್ನು ಅನುಸರಿಸಿದರೆ ಯಾವುದೇ ಮಾನಸಿಕ ಒತ್ತಡ ಬರಲಾರದು. ಬೇರೆಯವರ ವಿಚಾರ, ಮೊಬೈಲ್ ಫೋನ್, ಟಿವಿಯ ಧಾರಾವಾಹಿ ಇತ್ಯಾದಿಗಳಿಂದ ದೂರವಿದ್ದು ಮಕ್ಕಳಿಗೆ ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ, ನಮ್ಮ ಭಾಷೆ ಇದನ್ನು ಕಲಿಸಿ ಸಮಾಜದ ಉತ್ತಮ ನಾಗರಿಕನನ್ನಾಗಿ ಮಾಡಿ ಬೆಳೆಸಿದಾಗ ನಾವು ಮಹಿಳೆಯರಾಗಿ ನಮ್ಮಜೀವನ ಸಾರ್ಥಕ ಗೊಳಿಸಿ ಎಂದು ನುಡಿದರು.

ಇನ್ನೋರ್ವ ಗೌರವ ಅತಿಥಿ ಕುಮಾರಿ ಆಕಾಂಕ್ಷ ಶಂಕರ್ ವೀರ್ಕರ್  ಮಾತನಾಡುತ್ತಾ ತುಂಬಾ ಒಳ್ಳೆಯ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಆಯೋಜಿಸಿದ್ದೀರಿ ಇಂಥ ಕಾರ್ಯಕ್ರಮಕ್ಕೆ ಸದಾ ನನ್ನ ಸಹಕಾರವಿದೆ ಎಂದರು. 

ಗಣ್ಯರ ಸಮ್ಮುಖದಲ್ಲಿ ಕನ್ನಡ ಸಿನಿಮಾ ಮತ್ತು ಕನ್ನಡ ಧಾರವಾಹಿಯಲ್ಲಿ ನಟಿಸಿದ ಉದಯೋನ್ಮುಖ ನಟಿ ನಿಧಿ ಸಂಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮೀರಾ ಭಾಯಂದರ್ ಕನಕಿಯ ಇಂಟರ್ನ್ಯಾಷನಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಸಮರ್ಥ್ ರೈ ಅವರನ್ನು ಸನ್ಮಾನಿಸಲಾಯಿತು. ಇವರು ಮಹಾರಾಷ್ಟ್ರ ರಾಜ್ಯದ ದೇವರ್ನ, ರತ್ನಗಿರಿ ಜಿಲ್ಲೆಯ ಪ್ರತಿನಿಧಿಯಾಗಿ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿ ಅತಿ ಹೆಚ್ಚು ಗೋಲ್  ಬಾರಿಸಿದ ಹೆಗ್ಗಳಿಕೆ ಈ ಬಾಲಕನದು. ಇನ್ನೋರ್ವ ಹಿರಿಯ ಮಹಿಳೆ ಕರ್ನಾಟಕ ಮಹಾಮಂಡಲದ ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ  ಸುಮತಿ ಡಿ ಶೆಟ್ಟಿ ಅವರನ್ನು ಅವರ ಅಪಾರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. 

ಸನ್ಮಾನಿತರಾದ ನಿಧಿ ಶೆಟ್ಟಿ ಮತ್ತು ಸಮರ್ಥ್ ರೈ ಸನ್ಮಾನಕ್ಕೆ ಪ್ರತಿ ಉತ್ತರವಾಗಿ ಕರ್ನಾಟಕ ಮಹಾಮಂಡಲ ಮತ್ತು ಮಹಿಳಾ ವಿಭಾಗಕ್ಕೆ ಅಭಿನಂದನೆ ಸಮರ್ಪಿಸಿದರು.  ಸುಮತಿ ಡಿ ಶೆಟ್ಟಿ ಅವರು ಕರ್ನಾಟಕ ಮಹಾಮಂಡಲದಿಂದ ಅಪಾರ ಬಂದುತ್ವ, ಪ್ರೀತಿ ದೊರೆತಿದೆ. ಈ ಬಂದುತ್ವವನ್ನು ಕಾಪಾಡಿಕೊಂಡು ಇನ್ನಷ್ಟು ಕರ್ನಾಟಕ ಮಹಾಮಂಡಲದ  ಸೇವೆಯನ್ನು ಮಾಡುತ್ತೇನೆ ಎಂದರು. 

ಮೊದಲು ಮಹಿಳಾ ಸದಸ್ಯರಿಂದ ಭಜನೆ, ಅರಸಿನ ಕುಂಕುಮ ಕಾರ್ಯಕ್ರಮ ಜರುಗಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಡಳದ ಮಹಿಳಾ ಸದಸ್ಯರಿಂದ ಮತ್ತು ಇತರ ಸಂಘ ಸಂಸ್ಥೆಗಳ ಮಹಿಳಾ ಸದಸ್ಯರಿಂದ ಬಹಳ ಸುಂದರವಾದ ಸಾಂಸ್ಕೃತಿಕ  ಕಾರ್ಯಕ್ರಮ ಜರುಗಿತು.  ಉಷಾ ಸತೀಶ್ ಶೆಟ್ಟಿ ಕಣಂಜಾರು ಮತ್ತು ಸೃಷ್ಟಿ ಸತೀಶ್ ಶೆಟ್ಟಿ ಕಣಂಜಾರು ತುಳುನಾಡಿನ ವೈಭವವನ್ನು ಹಂತ ಹಂತವಾಗಿ ಮಧು ಹೇಳುವ ಶೈಲಿಯಲ್ಲಿ ತಾಯಿ ಮಗಳು ಪ್ರಸ್ತುತಪಡಿಸಿ ಪ್ರಶಂಸೆಗೆ ಪಾತ್ರರಾದರು. ಡಿವೈನ್ ಸ್ಪಾರ್ಕ್ ವಸಾಯಿ ವತಿಯಿಂದ  ಜಲಜಾಕ್ಷಿ ಕುಂಬಳೆ ಅರಸಿನ ಕುಂಕುಮ ಇನ್ನಿತರ ವಿಷಯಗಳ ಬಗ್ಗೆ ಮಹಿಳೆಯರಿಗೆ ಬಹಳ ಸುಂದರವಾಗಿ ವಿವರಿಸಿದರು.

 ಕಾರ್ಯಕ್ರಮದ ಸಭಾಧ್ಯಕ್ಷ ರಾದ  ಸುಮಂಗಲ ಕಣಂಜಾರ್ ಮಾತನಾಡುತ್ತಾ ಕರ್ನಾಟಕ ಮಹಾಮಂಡಲದಿಂದಾಗಿ ನಾವೆಲ್ಲರೂ ಸಮಾಜದಲ್ಲಿ ಚಿರಪರಿಚಿತರಾಗಿದ್ದೇವೆ ಇದನ್ನು ಗಮನದಲ್ಲಿಟ್ಟು ಇನ್ನಷ್ಟು ಮಂಡಲದ ಮುಖಾಂತರ ಸೇವೆಯನ್ನು ಮಾಡೋಣ. ನಿಮ್ಮೆಲ್ಲರ ಸಹಕಾರ ಪ್ರೋತ್ಸಾದಿಂದ ಮಹಿಳಾ ವಿಭಾಗವು ಉತ್ತಮ ಕಾರ್ಯಕ್ರಮ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ವೇದಿಕೆಯಲ್ಲಿ ಮಂಡಳದ ಅಧ್ಯಕ್ಷರಾದ  ರವಿಕಾಂತ್ ಶೆಟ್ಟಿ ಇನ್ನ, ಗೌರವ ಅಧ್ಯಕ್ಷರಾದ ಡಾ. ಅರುಣೋದಯ ಎಸ್ ರೈ, ಸಂಚಾಲಕಿ  ಆಶಾ ಶೆಟ್ಟಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶೀಲಾ ಎಂ ಶೆಟ್ಟಿ, ಕಾರ್ಯದರ್ಶಿ  ನಯನ ಆರ್ ಶೆಟ್ಟಿ, ಜೊತೆ ಕೋಶಾಧಿಕಾರಿ  ಅನುಷಾ ಎನ್ ಶೆಟ್ಟಿ, ಜೊತೆ ಕಾರ್ಯದರ್ಶಿ  ಹೇಮಾವತಿ ಹೆಗಡೆ, ಜೊತೆ ಕೋಶಾಧಿಕಾರಿ  ಯಶವಂತಿ ಶೆಟ್ಟಿ, ಮಂಡಳಿಯ ಕಾರ್ಯಾಧ್ಯಕ್ಷೆ ಸುಮತಿ ಡಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ  ನಯನ ಆರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.  ಹೇಮಾವತಿ ಹೆಗಡೆ,  ಯಶವಂತಿ ಶೆಟ್ಟಿ  ವಿದ್ಯಾ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷರಾದ ಶಂಕರ್ ಕೆ ಶೆಟ್ಟಿ ಜೆಸಲ್ ಪಾರ್ಕ್, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಕೋಟ್ಯಾನ್, ಕೋಶಾಧಿಕಾರಿ ಗುಣ ಪಾಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುನಿಲ್ ಶೆಟ್ಟಿ ಮತ್ತು ಮಹಿಳಾ ಸದಸ್ಯರೆಲ್ಲರೂ ತನು ಮನ ಧನದಿಂದ ಸಹಕರಿಸಿದರು. ಕರ್ನಾಟಕ ಮಹಾಮಂಡಲ ಪ್ರಾರಂಭದಿಂದಲೂ ತನು ಮನ ಧನದಿಂದ ಸಹಕರಿಸಿ ಪ್ರೋತ್ಸಾಹಿಸುವ ಮಾಜಿ ನಗರಸೇವಕ ಗಣೇಶ್ ಶೆಟ್ಟಿ ಯವರ ವತಿಯಿಂದ ಪ್ರೀತಿ ಭೋಜನದ ವ್ಯವಸ್ಥೆ ನೆರವೇರಿತು. ಎಲ್ಲಾ  ದಾನಿಗಳನ್ನು, ಸಂಘ ಸಂಸ್ಥೆಯವರನ್ನು, ಸಾಕಾರ ಪ್ರೋತ್ಸಾಹ ಮಾಡಿದವರನ್ನು ಗೌರವಿಸಲಾಯಿತು. ಮಂಡಲದ ಸಂಸ್ಥಾಪಕರಾದ ಚಂದ್ರಶೇಖರ್ ವಿ ಶೆಟ್ಟಿಯವರು ಕಾರ್ಯಕ್ರಮ ನಿರೂಪಣೆ ಗೈದರು. ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Related posts

ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ : ಸಾಮೂಹಿಕ ಸತ್ಯನಾರಾಯಣ ಪೂಜೆ

Mumbai News Desk

ಆರೋಹಿ(ಖುಷಿ )ಶಿವ ಪ್ರಸಾದ ಪೂಜಾರಿಗೆ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ

Mumbai News Desk

ವರ್ಲಿ   ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ಇದರ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮದೊಂದಿಗೆ ಆಚರಣೆ

Mumbai News Desk

ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಹಳದಿ ಕುಂಕುಮ

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk

ಭಾರತೀಯ ಜನತಾ ಪಕ್ಷ ಡೊಂಬಿವಲಿ ಘಟಕದ ಆಶ್ರಯದಲ್ಲಿ ಜನ ಆರೋಗ್ಯ ಯೋಜನೆ.

Mumbai News Desk