
ಸ್ಥಾಪನೆಯಾದ ಅಲ್ಪಾವಧಿಯಲ್ಲಿಯೇ ವಿಭಿನ್ನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರುಗಳಿಸಿದ ಸಯನ್ ಕನ್ನಡ ಸಂಘದ ವತಿಯಿಂದ ಬ್ರಹತ್ ಉದ್ಯೋಗ ಮೇಳ ಮಾರ್ಚ್ 29, ಶನಿವಾರ ಜರಗಿತು.
ಬೆಳಿಗ್ಗೆ ಸಂಘದ ಅಧ್ಯಕ್ಷರಾದ ಡಾ. ಎಂ ಜೆ ಪ್ರವೀಣ್ ಭಟ್,
ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ, ಸಲಹೆಗಾರರಾದ ಡಾ. ಸದಾನಂದ ಶೆಟ್ಟಿ, ಭಾಸ್ಕರ ಶೆಟ್ಟಿ, ದೀಪ ಬೆಳಗಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಲಹೆಗಾರ, ರಾಜಕೀಯ ನೇತಾರ ಭಾಸ್ಕರ್ ಶೆಟ್ಟಿ “ಸಂಘ ಪ್ರಾರಂಭವಾಗಿ ಒಂದೂವರೆ ವರ್ಷದಲ್ಲಿ ಮಾಡಿದ ಕಾರ್ಯ ಚಟುವಟಿಕೆಗಳನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ನಮ್ಮ ದೇಶ ಅಭಿವೃದ್ಧಿಯ ಕಡೆಗೆ ಸಾಗಬೇಕಾದರೆ ಎಲ್ಲರಿಗೂ ಉದ್ಯೋಗದ ಅವಶ್ಯಕತೆ ಇದೆ. ಈ ಈ ನಿಟ್ಟಿನಲ್ಲಿ ಕನ್ನಡ ಸಂಘ ಸಯನ್ ನ ಇಂದಿನ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ಸಂಘಕ್ಕೆ ಯಾವತ್ತು ನನ್ನ ಸಹಕಾರ ಇದ್ದೇ ಇದೆ ಎಂದರು.
ಇನ್ನೋರ್ವ ಸಲಹೆಗಾರ, ನಗರದ ಖ್ಯಾತ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ತನ್ನ ಅನಿಸಿಕೆ ತಿಳಿಸುತ್ತಾ
” ಸಂಘವು ಹಲವಾರು ಕಾರ್ಯಕ್ರಮಗಳನ್ನು ಇಷ್ಟರ ತನಕ ಯಶಸ್ವಿಯಾಗಿ ಆಯೋಜಿಸುತ್ತ ಬಂದಿದೆ. ಅದರಲ್ಲೂ ಕಳೆದ ತಿಂಗಳು ನಡೆದ ಆರೋಗ್ಯ ಶಿಬಿರಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅದೇ ರೀತಿ ಶಿಕ್ಷಣಕ್ಕೂ ನಾವು ಮಹತ್ವ ನೀಡಬೇಕಾಗಿದೆ. ವಿದ್ಯಾವಂತರಿಗೆ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡುವುದು ಅಗತ್ಯವಿದೆ. ಅತೀ ಕಡಿಮೆ ಸಮಯದಲ್ಲಿ ನಾವು ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಅವರ ಮುಂದಾಳತ್ವದಲ್ಲಿ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ನಡೆದಿದೆ. ಇದು ಜನ ಸಾಮಾನ್ಯರಿಗೆ ಬೇಕಾದ ಕಾರ್ಯಕ್ರಮ ” ಎಂದರು.

ಸಂಘದ ಸಲಹೆಗಾರ, ಹೋಟೆಲ್ ಉದ್ಯಮಿ ದಿನೇಶ್ ಶೆಟ್ಟಿ ತನ್ನ ಅನಿಸಿಕೆ ತಿಳಿಸುತ್ತಾ ” ಜನತಾ ಸೇವೆಯೇ ಜನಾರ್ಧನ ಸೇವೆ ಎಂಬ ತತ್ವದಡಿ ನಮ್ಮ ಸಂಘವು ಆರಂಭವಾಗಿದೆ. ಇಂದಿನ ಉದ್ಯೋಗ ಮೇಳದಲ್ಲಿ ಬಹಳಷ್ಟು ಯುವಕ-ಯುವತಿಯರಿಗೆ ಸಹಾಯ ವಾಗಲಿದೆ, ಮುಂದಕ್ಕೂ ಜನರ ಕಣ್ಣೀರೋರಿಸುವ ಕಾರ್ಯ ಸಂಘದಿಂದ ನಡೆಯುತ್ತಿರಲಿ” ಎಂದರು.
ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷೆ ಪ್ರಭಾ ಎನ್ ಸುವರ್ಣ ಮಾತನಾಡುತ್ತಾ ” ನಮ್ಮ ಸಂಘದ ಚಟುವಟಿಕೆಗಳ ಬಗ್ಗೆ ನಮ್ಮ ತುಳು-ಕನ್ನಡಿಗರು ಮೆಚ್ಚುಗೆ ವ್ಯಕ್ತ ಪಡಿಸುತಿರುವುದು ನಮಗೆ ಹೆಮ್ಮೆಯ ವಿಷಯ. ಎಲ್ಲರ ಸಹಕಾರದಿಂದ ಸಂಘವು ಮತ್ತಷ್ಟು ಜನಪರ ಕಾರ್ಯಗಳನ್ನು ನಡಿಸುತ್ತಿರಲಿ ಎನ್ನುತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಅಧ್ಯಕ್ಷೀಯ ನುಡಿಗಳನಾಡಿದ ಡಾ. ಎಮ್ ಜೆ ಪ್ರವೀಣ್ ಭಟ್ ಅವರು ” ಸಂಘದ ಪ್ರಾರಂಭದ ದಿನದಿಂದ ಇಂದಿನ ತನಕ ಹಲವಾರು ಕಾರ್ಯಕ್ರಮಗಳನ್ನು ನಾವು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದ್ದೇವೆ. ಅದರಲ್ಲೂ ಡಾ. ಸದಾನಂದ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ ವೈದ್ಯಕೀಯ ಶಿಬಿರದಿಂದ ಬಹಳಷ್ಟು ಜನರಿಗೆ ಪ್ರಯೋಜನವಾಗಿದೆ. ನಮ್ಮ ಸಂಘದ ಪದಾಧಿಕಾರಿಗಳು, ಸಲಹೆಗಾರರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಇದು ನಮ್ಮ ಸಂಘದ ಬೆಳವಣಿಗೆಗೆ ಪೂರಕವಾಗಿದೆ. ಸಂಘಕ್ಕೆ ಸ್ವಂತ ಕಚೇರಿಯ ಅಗತ್ಯವಿದ್ದು, ಎಲ್ಲರೂ ಈ ಬಗ್ಗೆ ಪ್ರಯತ್ನಿಸೋಣ. ಮುಂದಕ್ಕೂ ಉತ್ತಮ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳೋಣ” ಎಂದರು.
ಹೋಟೆಲ್ ಉದ್ಯಮಿ ರವಿ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಶೆಟ್ಟಿ ಆರ್ ಏನ್, ಸಂಘದ ಸಂಸ್ಥಾಪಕ ಹ್ಯಾರಿ ಸೀಕ್ವೆರ, ಗೌರವ ಕೋಶಾಧಿಕಾರಿ ಸುರೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಸ್ವಾಗತಿಸುತ್ತಾ ” ನಮ್ಮ ಸಂಘವು ಪ್ರಾರಂಭವಾದ ಉದ್ದೇಶದೊಂದಿಗೆ ಉತ್ತಮ ರೀತಿಯಲ್ಲಿ ಮುನ್ನಡೆಯುತಿದ್ದು ಎಲ್ಲ ಪದಾಧಿಕಾರಿಗಳು, ಸಲಹೆಗಾರರು, ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತಾ ಬರುತ್ತಿರುವುದರಿಂದ ಅಲ್ಪಾವಧಿಯಲ್ಲಿ ಇಷ್ಟೊಂದು ಕಾರ್ಯಕ್ರಮಗಳನ್ನು ಆಯೋಜಿಸಲು ಕಾರಣವಾಯಿತು, ಸದಾ ಜನಪರ ಕಾರ್ಯಗಳನ್ನು ಮಾಡುತ್ತಿರುವ ಸಂಘಕ್ಕೆ ದಾನಿಗಳು ಬೆಂಬಲಿಸಬೇಕು” ಎಂದರು.
ಉದ್ಯೋಗ ಮೇಳದಲ್ಲಿ 30 ಕ್ಕೂ ಮಿಕ್ಕಿ ಹೆಸರಾಂತ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿ ಉದ್ಯೋಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದರು. ಮುಂಬೈ ಅಲ್ಲದೆ ದೂರದ ಉಪನಗರಗಳಿಂದಲೂ ತುಳುವ ಕನ್ನಡಿಗರು ಅಲ್ಲದೆ ಅನ್ಯ ಭಾಷಿಕರು ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಸುಮಾರು 200ಕ್ಕೂ ಅಧಿಕ ಯುವಕ-ಯುವತಿಯರು ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿದರು. 20 ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗ ದ್ರಡಿಕರಣ ಪತ್ರ ಪಡೆದರು.
ಸಂಘದ ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ಸದಾನಂದ ಶೆಟ್ಟಿ, ಸದಾಶಿವ ಶೆಟ್ಟಿ , ಸಂಸ್ಥಾಪಕ ಹ್ಯಾರಿ ಸೀಕ್ವೆರ, ಕೋಶಾಧಿಕಾರಿ ಸುರೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಚಂದ್ರಿಕಾ ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ದಯಾನಂದ ಮೂಲ್ಯ, ಜಯಶೀಲ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು, ನವೀನ್ ಪೂಜಾರಿ , ಕಾರ್ಯಕಾರಿ ಸಮಿತಿಯ ಚಂದ್ರ ದೇವಾಡಿಗ, ಮಹೇಶ್ ಪೂಜಾರಿ, ತ್ರಿವೇಣಿ ಶೆಟ್ಟಿ, ಶೋಭಾ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.
ತ್ರಿವೇಣಿ ಶೆಟ್ಟಿ,, ಶೋಭಾ ಶೆಟ್ಟಿ ಪ್ರಾರ್ಥಿಸಿದರು, ಮಾಲ ಮೇಸ್ತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು .