
ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035
ಉತ್ತರಮುಂಬೈ ಯಲ್ಲಿನ ಗಿರ್ ಗಾಂವ್ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುವ ಯುಗಾದಿ ಪಾಡ್ವಾ ನವ ವರ್ಷ ಸಂಭ್ರಮಾಚರಣೆಯು ತಾ.30 ರಂದು ಅದ್ದೂರಿಯಾಗಿ ಜರಗಿತು.
ಮುಂಬೈ ಮಹಾನಗರದಲ್ಲಿ “ಟ್ರೆಂಡ್ ಸೆಟ್ಟರ್ಸ್” ಶೀರ್ಷಿಕೆಯಡಿಯಲ್ಲಿ ನಿತಿನ್ ಇಂದಿರಾ ವಿಷ್ಣು ಕದಮ್ ಇವರು ಪ್ರತೀ ವರ್ಷ ಆಯೋಜಿಸುವ ಈ ಉತ್ಸವದ ಮೂಲಕ ಚೈತ್ರ ಮಾಸದ ಸ್ವಾಗತ ಹಾಗೂ ಅತೀ ಪುರಾತನ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವಂತಹ ಮಹತ್ತರ ಧ್ಯೇಯೋದ್ದೇಶಗಳನ್ನು ಒಳಗೊಂಡಿರುತ್ತದೆ. ಗುಡಿಪಾಡ್ವ ಹಬ್ಬವು ಮರಾಠೀ ಹಾಗೂ ಕೊಂಕಣಸ್ಥ ಸಮುದಾಯದ ಹೊಸವರ್ಷದ ಆಚರಣೆಯಾಗಿದ್ದು ಹಿಂದುತ್ವದ ವಿಶೇಷ ಧ್ಯೇಯೋದ್ದೇಶದೊಂದಿಗೆ ಸಮಸ್ಥ ಹಿಂದೂ ಸಮುದಾಯದ ಜನರು ಜಾತಿ ಭಾಷಾ ಭೇದವಿಲ್ಲದೆಯೇ ಇದರಲ್ಲಿ ಶೃದ್ಧಾ ಭಕ್ತಿಯೊಂದಿಗೆ ಭಾಗವಹಿಸುತ್ತಾರೆ.
ಇದೇ ತಾ.30 ರ ಮಾರ್ಚ್ ರವಿವಾರದಂದು ಜರಗಿದ 17 ನೆಯ ವರ್ಷದ ಉತ್ಸವದಲ್ಲಿ ಮುಂಬೈ ಮಹಾನಗರಿಯ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಹಿಂದೂ ಭಾವಿಕರು ತಮ್ಮ ವಿಶೇಷ ಪಾರಂಪಾರಿಕ ಉಡುಗೆಯೊಂದಿಗೆ ಭಾಗವಹಿಸಿದ್ದರು.
ಬೆಳಿಗ್ಗೆ ಗಿರ್ ಗಾಂವ್ ಬಳಿಯ ಪ್ರಾರ್ಥನಾ ಸಮಾಜ್ ಬಳಿಯಿಂದ ಆರಂಭಗೊಂಡ ಭವ್ಯ ಮೆರವಣಿಗೆಯು ಮದ್ಯಾಹ್ನ 2 .30 ಗಂಟೆಗೆ ಧೋಬಿತಲಾವ್ ಬಳಿ ( ಪಾರ್ಸಿ ಡೈರಿಯ ಸಮೀಪ) ನಿರ್ಮಿಸಿದ ಭವ್ಯ ಪೂಜಾ ಮಂಟಪದಲ್ಲಿ ಸಂಪನ್ನಗೊಂಡಿತು.
ಮಹಾರಾಷ್ಟ್ರದ ಭವ್ಯ ಸಂಸ್ಕೃತಿ ಹಾಗೂ ಇತಿಹಾಸವನ್ನು ಬಿಂಬಿಸುವ ವೈವಿಧ್ಯಮಯ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.
ಶ್ರೀ ಸಿದ್ಧಿವಿನಾಯಕ ಮಂದಿರದ ಪ್ರತಿಕೃತಿಯೊಂದಿಗೆ ನಿರ್ಮಿಸಿದ ವಿಶೇಷ ಪೂಜಾಮಂಟಪದಲ್ಲಿ ಜರಗಿದ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಪೂಜಾ ಕಾರ್ಯಕ್ರಮದಲ್ಲಿ ಡಾ• ಸುದೇಶ್ ಸಾಲಿಯಾನ್, ಮುಂಬೈ ಸಿದ್ಧಿವಿನಾಯಕ ಮಂದಿರದ ಮಾಜೀ ಟ್ರಸ್ಟೀ ನಿತಿನ್ ಕದಮ್ , ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರಾದ ಸತ್ಯಾ ಎಸ್. ಕೋಟ್ಯಾನ್ , ಆಹಾರ್ ಸಂಸ್ಥೆಯ ಜೋನ್ 1 ಅಧ್ಯಕ್ಷರಾದ ಮಹೇಂದ್ರ ಕರ್ಕೆರಾ ( ಮಹೇಶ್ ಲಂಚ್ ಹೋಮ್) ಮತ್ತು ಶಂಕರ್ ಶೆಟ್ಟಿ( ಮಿಲನ್ ಕಾಫೀ ಹೌಸ್) ಹಾಗೂ ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ ಹಾಗೂ ವಿವರ :
ಪಿ.ಆರ್.ರವಿಶಂಕರ್ ಡಹಾಣೂ ರೋಡ್ : 8483980035