
ಕನಸಿನ ನಗರ ಎನ್ನಲಾಗುವ ಮುಂಬಯಿ, ಜಗತ್ತಿನಲ್ಲಿರುವ ಎಲ್ಲರನ್ನೂ ಕೈಬೀಸಿ ತನ್ನತ್ತ ಕರೆಯುವ ನಗರ. ಇಲ್ಲಿ ಮನುಷ್ಯನ ಪ್ರೀತಿ, ಅಂತಃಕರಣದ ಸೆಲೆ ಬತ್ತಿಹೋಗಿಲ್ಲದ ಕಾರಣ ಪ್ರೀತಿಯಿಂದ, ಒಗ್ಗಟ್ಟಿನಿಂದ ಇಲ್ಲಿ ಸುರಕ್ಷಿತವಾಗಿ ಜೀವನ ಸಾಗಿಸಲು ಅವಕಾಶವಿದೆ. ಇಲ್ಲಿ ಬರಿಗೈಲಿ ಬಂದವರು ಬೊಗಸೆ ತುಂಬಾ ಏನಾದರೊಂದನ್ನು ಪಡೆಯುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಪತ್ರಿಕಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕು ಕಟ್ಟಿಕೊಂಡ ಮುಂಬಯಿ ಮಹಾನಗರದ ಅನೇಕ ಪತ್ರಕರ್ತರುಗಳಲ್ಲಿ ಪ್ರಕಾಶ್ ಕುಂಠಿನಿಯವರು ಕೂಡಾ ಓರ್ವ ಹಿರಿಯ ಪತ್ರಕರ್ತರು ಮಾತ್ರವಲ್ಲ, ಕಳೆದ 10 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮಿಯಾಗಿ ಮುಂಬಯಿ ಮಹಾನಗರ ಮತ್ತು ಕನ್ನಡ ನಾಡಿನಾದ್ಯಂತ ಗುರುತಿಸಿಕೊಂಡವರು. 1973ರಲ್ಲಿ ಮುಂಬಯಿಗೆ ಆಗಮಿಸಿದ ಪ್ರಕಾಶ್ ಕುಂಠಿನಿ 1981ರಲ್ಲಿ ತನ್ನ ಕಾಲೇಜು ಶಿಕ್ಷಣ ಮುಗಿಸಿ ನಂತರ 1984ರಲ್ಲಿ ಮುದ್ರಣಾಲಯವನ್ನು ಆರಂಭಿಸಿ, ಆ ನಂತರ ವರ್ತಮಾನ ಪತ್ರಿಕೆಗಳತ್ತ ಒಲವು ತೋರಿಸಿ ನಗರದ ಹೆಸರಾಂತ ಪತ್ರಿಕೆಗಳಾದ ಕರ್ನಾಟಕ ಮಲ್ಲ, ಉದಯವಾಣಿ, ಮನಸ್ಪಂದನ, ಈ ಸಂಜೆ ಸುದ್ದಿ, ಮುಂಬಯಿ ಚೌಫೇರ್, ಅಪ್ತ ವಾರ್ತಾಹಾ, ಪುಣ್ಯ ನಗರಿ, ಮೆಟ್ರೋ ಬೀಟ್, ಯಶೋಭೂಮಿ, ತಮಿಳ್ ಟೈಮ್ಸ್, ಮರಾಠಿ ಮುರಸು ಮೊದಲಾದ ಪತ್ರಿಕೆಗಳಲ್ಲಿ ಸುಮಾರು 15 ವರ್ಷಗಳ ಕಾಲ ಪ್ರೀಲೆನ್ಸ್ ಫೋಟೋ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದ ನಂತರ 2014 – 2015ರಲ್ಲಿ ತನ್ನದೇ ಆದ ಪತ್ರಿಕೆ `ಛಾಯಾಕಿರಣ’ ಕನ್ನಡ ಮಾಸಿಕವನ್ನು ಆರಂಭಿಸಿ ಇದೀಗ ಈ ಪತ್ರಿಕೆಯ ದಶಮಾನೋತ್ಸವ ಸಮಾರಂಭ ಎ. 6 ರಂದು ಬೆಳಿಗ್ಗೆ 9.30 ರಿಂದ ರಾತ್ರಿ 8.30ರ ತನಕ ಛಾಯಾಕಿರಣ ಪತ್ರಿಕೆಯ ಗೌರವ ಸಂಪಾದಕ ಸ್ವರ್ಗೀಯ ಬಿ.ಎಸ್. ಕುರ್ಕಾಲ್ ವೇದಿಕೆಯಲ್ಲಿ ವಿವಿಧ ಸಮಾಜಹಿತ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.
ಕಲ್ಯಾಣ್ ಪಶ್ಚಿಮದ ಬಿರ್ಲಾ ಕಾಲೇಜು ರಸ್ತೆಯ ಕಡಕ್‌ಪಾಡ ಪರಿಸರದಲ್ಲಿರುವ ಹೋಟೆಲ್ ಗುರುದೇವ್ ಗ್ರಾಂಡ್‌ನಲ್ಲಿ ಈ ಸಂಭ್ರಮ ನಡೆಯಲಿದ್ದು, ಈ ಸಂಭ್ರಮದ ಎಲ್ಲಾ ಕಾರ್ಯಚಟುವಟಿಕೆಗಳ ಅಧ್ಯಕ್ಷತೆಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ. ಜಿ.ಎನ್. ಉಪಾಧ್ಯ ಅವರು ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವ ನಾಗರಾಜ ಶೆಟ್ಟಿಯವರು ಈ ದಶ ಸಂಭ್ರಮವನ್ನು ಸಾಂಕೇತಿಕವಾಗಿ ದಶ ದೀಪಗಳನ್ನು ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಈ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಉಪಸ್ಥಿತರಿರುವರು. ಗೌರವ ಅತಿಥಿಗಳಾಗಿ ಛಾಯಾಕಿರಣ ಪತ್ರಿಕೆಯ ನಿರ್ದೇಶಕ, ಜಾಸ್ಮಿನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಡಾ. ಸುರೇಂದ್ರ ವಿ. ಶೆಟ್ಟಿ, ಗುರುದೇವ್ ಗ್ರೂಪ್ ಆಫ್ ಹೋಟೆಲ್ಸ್‌ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಭಾಸ್ಕರ್ ಎಸ್. ಶೆಟ್ಟಿ ನಕ್ಕೋಡಿಗುತ್ತು, ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರು, ಸಿಎ ಸುರೇಂದ್ರ ಕೆ. ಶೆಟ್ಟಿ, ಬಂಟರ ಸಂಘ ಮುಂಬಯಿ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸುಭೋದ್ ಡಿ. ಭಂಡಾರಿ, ಕನ್ನಡಿಗ ಕಲಾವಿದರ ಪರಿಷತ್ತು, ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ರಾಜೇಶ್ವರಿ ನ್ಯಾಶನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ಸಾಣೂರು ಇದರ ಸಂಸ್ಥಾಪಕ, ಆಡಳಿತ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಬಂಟರ ಸಂಘ ಮುಂಬಯಿ ಕುರ್ಲಾ – ಬಾಂಡೂಪ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಭೂಮಿಕ ಎಂ. ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿಯ ನಿವೃತ್ತ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ಶೆಟ್ಟಿ ಇವರು ಉಪಸ್ಥಿತರಿದ್ದು, ಛಾಯಾಕಿರಣ ಮಾದ್ಯಮ ಸೇವಾ ಪ್ರಶಸ್ತಿಯನ್ನು ಪ್ರದಾನಿಸುವುದರ ಜೊತೆಗೆ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರನ್ನು ಮತ್ತು ಅನೇಕ ಸ್ವರ್ಣ ಪೋಷಕ ಸದಸ್ಯರನ್ನು ಗೌರವಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ನಂತರ ನೃತ್ಯ ವೈಭವ ಮತ್ತು ಸಮೂಹ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಹಾಸ್ಯ ಕವಿಗೋಷ್ಠಿ, ಕಿರುನಾಟಕ ಪ್ರದರ್ಶನ ನಡೆಯಲಿದೆ.

ಸಂಜೆ 4.30ಕ್ಕೆ ಸರಿಯಾಗಿ ಸಮಾರೋಪ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಘನ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ. ಗ್ರೂಪ್ ಆಫ್ ಹೋಟೆಲ್ಸ್ ಆ್ಯಂಡ್ ಕಂಪೆನೀಸ್‌ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಉಪಸ್ಥಿತರಿರುವರು. ವಿಶೇಷ ಆಮಂತ್ರಿತ ಗೌರವ ಅತಿಥಿಯಾಗಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಗೌರವ ಅತಿಥಿಗಳಾಗಿ ಪತ್ರಿಕೆಯ ಮುಖ್ಯ ಪ್ರವರ್ತಕರು, ವಿಸ್ವಾತ್ ಕೆಮಿಕಲ್ಸ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಬಿ. ವಿವೇಕ್ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪತ್ರಿಕೆಯ ನಿರ್ದೇಶಕ, ಈಸ್ಟ್‌ಲ್ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ – ಆಡಳಿತ ನಿರ್ದೇಶಕ ಪ್ರಭಾಕರ ಜೆ. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಗೌ.ಪ್ರ. ಕಾರ್ಯದರ್ಶಿ, ಇಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಡಾ. ಆರ್.ಕೆ. ಶೆಟ್ಟಿ, ತ್ರಿವೇಣಿ ಗ್ರೂಪ್ ಆಫ್ ಕಂಪೆನೀಸ್‌ನ ನಿರ್ದೇಶಕಿ ಮನೋರಮಾ ಎನ್. ಬಿ. ಶೆಟ್ಟಿ, ಜವಾಬ್‌ನ ಅಧ್ಯಕ್ಷ, ತುಂಗಾ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ನಿರ್ದೇಶಕ ರಾಜೇಶ್ ಬಿ. ಶೆಟ್ಟಿ, ಪತ್ರಿಕೆಯ ನಿರ್ದೇಶಕ, ಕೆ.ಎನ್. ಗ್ರೂಪ್ ಆಫ್ ಹೋಟೆಲ್ಸ್ ಕಲ್ಯಾಣ್ ಇದರ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಸತೀಷ್ ಎನ್. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ನ ಗೌರವ ಅಧ್ಯಕ್ಷ ಎಲ್.ಎ. ಅಮೀನ್, ಬೊರಿವಲಿ ಎಜ್ಯುಕೇಶನ್ ಕಮಿಟಿ ಬಂಟರ ಸಂಘ ಮಂಬಯಿ ಇದರ ಉಪ ಕಾರ್ಯಾಧ್ಯಕ್ಷ ನಿತ್ಯಾನಂದ ಹೆಗ್ಡೆ ಶಿರ್ವ ನಡಿಬೆಟ್ಟು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಛಾಯಾಕಿರಣ ಸಾಹಿತ್ಯ ಸೇವಾ ಪ್ರಶಸ್ತಿಯನ್ನು ಪ್ರದಾನಿಸುವುದರ ಜೊತೆಗೆ ಪತ್ರಿಕೆಯ ನಿರ್ದೇಶಕರು, ಪ್ರವರ್ತಕರು, ಸ್ವರ್ಣ ಪೋಷಕ ಸದಸ್ಯರನೇಕರನ್ನು ಗೌರವಿಸಲಿದ್ದಾರೆ.
ಛಾಯಾಕಿರಣ ಮಾದ್ಯಮ ಸೇವಾ ಪ್ರಶಸ್ತಿಯನ್ನು ಅಶೋಕ್ ಆರ್. ದೇವಾಡಿಗ, ಆನಂದ ಎಸ್. ದೇವಾಡಿಗ, ರಮೇಶ್ ಮರೋಳಿ ಮತ್ತು ಚೆನ್ನವೀರ ಅಡಿಗಣ್ಣನರವ್ ಇವರಿಗೆ ಮತ್ತು ಛಾಯಾಕಿರಣ ಸಾಹಿತ್ಯ ಸೇವಾ ಪ್ರಶಸ್ತಿಯನ್ನು ಶಾಲಿನಿ ಶೆಟ್ಟಿ ಅಜೆಕಾರು ಮತ್ತು ಶೆರೊನ್ ಶೆಟ್ಟಿ ಐಕಳ ಇವರಿಗೆ ಪ್ರಶಸ್ತಿ ಪತ್ರದ ಜೊತೆಗೆ ಗೌರವ ಧನ, ಸ್ಮರಣಿಕೆ, ಫಲಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಲಾಗುವುದು. ಜೊತೆಗೆ ಅನಾರೋಗ್ಯದಲ್ಲಿರುವ ಮಾಜಿ ಸಿಬ್ಬಂದಿ ಚೆನ್ನವೀರ ಅಡಿಗಣ್ಣನವರ ಅವರ ಔಷದೀಯ ವೆಚ್ಚಕ್ಕಾಗಿ ರೂ. 15 ಸಾವಿರ ನೀಡಿ ಶುಭ ಹಾರೈಸಲಾಗುವುದು.
ಮಾಧ್ಯಮ ಮತ್ತು ಸಮಾಜ ಈ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ಈ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಪತ್ರಕರ್ತರುಗಳಾದ ದಯಾಸಾಗರ ಚೌಟ, ಹರೀಶ್ ಹೆಮ್ಮಾಡಿ, ಡಾ. ದಿನೇಶ್ ಶೆಟ್ಟಿ ರಂಜಾಳ ಇವರು ಪಾಲ್ಗೊಂಡು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ತುಳು ಹಾಸ್ಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಅವರು ವಹಿಸಲಿದ್ದು, ಈ ಗೋಷ್ಠಿಯಲ್ಲಿ ಶಿಮಂತೂರು ಚಂದ್ರಹಾಸ್ ಸುವರ್ಣ, ಶ್ರೀ ನಾರಾಯಣ ಶೆಟ್ಟಿ ನಂದಳಿಕೆ, ಡಾ. ಜಿ.ಪಿ ಕುಸುಮ, ರಮಣ್ ಶೆಟ್ಟಿ ರೆಂಜಾಳ, ಸೋಮನಾಥ ಕರ್ಕೇರ, ಸೂರಿ ಮಾರ್ನಾಡ್ ಮತ್ತು ಅಶೋಕ್ ವಳದೂರ ಇವರು ತಮ್ಮ ತಮ್ಮ ಸ್ವರಚಿತ
ತುಳು ಹಾಸ್ಯ ಕವನಗಳನ್ನು ಪ್ರಸ್ತುತಪಡಿಸಲಿದ್ದಾರೆ.
ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭದ ನಡುವೆ, ಕನ್ನಡ ಸಮೂಹ ಗಾಯನ ಸ್ಪರ್ಧೆ (ಜಾನಪದ – ಭಾವಗೀತೆ), ಅಮಿತಾ ಕಲಾ ಮಂದಿರ ಮಿರಾರೋಡ್ ಇವರಿಂದ ನೃತ್ಯ ವೈಭವ, ಬೆಂಗಳೂರು ಅವಿಷ್ಕಾರ ತಂಡದವರಿಂದ ಗೋಸುಂಬೆ ಕಿರುನಾಟಕ ಪ್ರದರ್ಶನ ನಡೆಯಲಿದೆ. ಸಮಾರಂಭದಲ್ಲಿ ಪತ್ರಿಕೆಯ ನಿರ್ದೇಶಕರು, ಮುಖ್ಯ ಪ್ರವರ್ತಕರುಗಳನ್ನು ಸನ್ಮಾನಿಸಲಾಗುವುದು. ಅಂತೆಯೇ ಸುಮಾರು 25 ಮಂದಿ ಸ್ವರ್ಣ ಪೋಷಕ ಸದಸ್ಯರನ್ನು ಗೌರವಿಸಲಾಗುವುದು. ಬೆಳಿಗ್ಗೆ ಚಾ-ತಿಂಡಿ, ಮಧ್ಯಾಹ್ನ ಶಾಖಾಹಾರಿ ಊಟ, ಸಂಜೆ ಚಾ-ತಿಂಡಿ, ರಾತ್ರಿ
ಶಾಖಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ವಿಶೇಷ ದಶಮಾನೋತ್ಸವ ಆಚರಣಾ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯ ಸಮನ್ವಯಕರುಗಳಾಗಿ ಹರೀಶ್ ಟಿ. ಶೆಟ್ಟಿ, ಶಿಮುಂಜೆ ಪರಾರಿ ಮತ್ತು ವಿಜಯ್ ಶೆಟ್ಟಿ ಕುತ್ತೆತ್ತೂರು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 60 ಮಂದಿಯ ತಂಡವನ್ನು ಇದೀಗಲೇ ರಚಿಸಲಾಗಿದೆ. ವಿವಿಧ ವಿಭಾಗಗಳ ಜವಾಬ್ದಾರಿಯನ್ನು ಬೇರೆ ಬೇರೆ ತಂಡಗಳನ್ನು ರಚಿಸಿ ಎಲ್ಲರಿಗೂ ಜವಾಬ್ದಾರಿಯನ್ನು ಹಂಚಿಕೊಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9869717377 (ಹರೀಶ್), 9326186471 (ವಿಜಯ್), 9004601154 (ಸುಲೋಚನಾ) ಇವರನ್ನು ಸಂಪರ್ಕಿಸಬಹುದಾಗಿದೆ.
ಈ ಸಂಭ್ರಮದಲ್ಲಿ ಪತ್ರಿಕೆಯ ಸದಸ್ಯರು ಮಾತ್ರವಲ್ಲದೆ, ಪತ್ರಿಕೆಯ ಅಭಿಮಾನಿಗಳು, ಪ್ರಕಾಶ್ ಕುಂಠಿನಿ ದಂಪತಿಗಳ ಅಭಿಮಾನಿಗಳು, ಕನ್ನಡ ಭಾಷೆ – ಸಂಸ್ಕೃತಿಯ ಪರಿಚಾರಕರು, ಪತ್ರಿಕೆಯ ಓದುಗರು, ಭಾಷಾಭಿಮಾನಿಗಳು, ಪತ್ರಕರ್ತರು, ಲೇಖಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಸಂಪಾದಕರು, ಸಂಪಾದಕ ಮಂಡಳಿ ಸದಸ್ಯರು, ದಶ ಸಂಭ್ರಮ ಆಚರಣಾ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
