ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದ ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ.
ಟ್ರಂಪ್ ಅವರ ಸುಂಕ ಘೋಷಣೆ ನಂತರ ಶೇರು ಮಾರುಕಟ್ಟೆಗಳಲ್ಲಿ ಬಾರಿ ಕುಸಿತ ಕಂಡು ಬಂದಿದ್ದು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಅವ್ಯವಸ್ಥೆ ಉಂಟಾಗಿದೆ. ಸೋಮವಾರ ಏಷ್ಯಾದ ಮಾರುಕಟ್ಟೆಗಳು ಪ್ರಮುಖ ಕುಸಿತವನ್ನು ಕಂಡವು. ಜಪಾನ್ ನ ನಿಕ್ಕಿ 225 ಶೇ. 6.3 ಮತ್ತು ಹಾಂಗ್ ಕಾಂಗ್ ನ ಹ್ಯಾಂಗ್ ಸೇಂಗ್ ಶೇ. 10 ರಷ್ಟು ಕುಸಿಯಿತು. ಭಾರತೀಯ ಮಾರುಕಟ್ಟೆ ಸಹ ವಹಿವಾಟು ಆರಂಭವಾದಾಗ ಶೇ. 5 ರಷ್ಟು ಕುಸಿದಿದೆ. ಅಮೇರಿಕದ ಎಲ್ಲಾ ಪ್ರಮುಖ ಷೇರು ಸೂಚ್ಯಂಕಗಳು ಶೇ. 5 ರಷ್ಟು ಕುಸಿದಿದ್ದು, 2020 ರ ನಂತರದ ಕೆಟ್ಟ ವಾರವನ್ನು ಅನುಭವಿಸಿದೆ. ಈ ಸುಂಕಗಳಿಂದಾಗಿ ಅಮೆರಿಕ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತದ ಸಂಭಾವನೀಯತೆ ಶೇ. 60 ಕ್ಕೆ ಏರಿದೆ ಎಂದು ಜೆಪಿ ಮಾರ್ಗನ್ ಎಚ್ಚರಿಸಿದೆ.
ಅಮೆರಿಕ ಅಧ್ಯಕ್ಷ ಡೋನಲ್ ಟ್ರಂಪ್ ಅವರ ನೂತನ ಸುಂಕ ನೀತಿ ಜಗತ್ತನ್ನು ಗಿರಗಿ ಹೊಡೆಯುವಂತೆ ಮಾಡಿತು. ಉದ್ಯಮಿಗಳಿಗೆ ‘ಸುವರ್ಣಕಾಲ’ ಎಂದು ಡೊನಾಲ್ಡ್ ಟ್ರಂಪ್ ಕರೆಯುತಿರುವ ಈ ಸುಂಕಗಳು ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ನಲುಗುವಂತೆ ಮಾಡಿದೆ. ಭಾರತೀಯ ಶೇರು ಮಾರುಕಟ್ಟೆ ಕಳೆದ 10 ತಿಂಗಳ ಅವಧಿಯಲ್ಲಿನ ಅತಿ ದೊಡ್ಡ ಕುಸಿತವನ್ನು ಅನುಭವಿಸಿದ್ದು ಕೆಲವೇ ಸೆಕೆಂಡುಗಳಲ್ಲಿ ಹೂಡಿಕೆದಾರರ 20 ಲಕ್ಷ ಕೋಟಿ ಹೆಚ್ಚಿನ ಮೊತ್ತ ಅಳಿಸಿ ಹೋಯಿತು. ಭಾರತದ ಅಗ್ರ ಮೂವತ್ತು ಸಂಸ್ಥೆಗಳನ್ನು ಒಳಗೊಂಡಿರುವ ಸೆನ್ಸೆಕ್ಸ್ ಬಹುತೇಕ 4000 ಅಂಕಗಳ ಕುಸಿತ ಅನುಭವಿಸಿ, ದಿನದ ವಹಿವಾಟಿನ ಒಂದು ಹಂತದಲ್ಲಿ 21, 743.65ಗೆ ತಲುಪಿತ್ತು. ಈ ಮಾರುಕಟ್ಟೆ ಕೋಲಾಹಲ ಬೃಹತ್ ಹೂಡಿಕೆದಾರದಿಂದ ಸಣ್ಣ ಹೂಡಿಕೆದಾರರ ತನಕ ಎಲ್ಲರೂ ಭಾರತದ ಪರಿಸ್ಥಿತಿ ಇನ್ನೇನಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ.
