
ಮುಂಬಯಿ ಹಾಗೂ ಮಂಗಳೂರಿನಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸೇವಾ ನಿರತವಾದ ಕುಲಾಲ ಪ್ರತಿಷ್ಠಾನದ ಆಯೋಜನೆಯಲ್ಲಿ “ಕುಲಾಲ ಪರ್ಬ” ಏಪ್ರಿಲ್ 13ರ ಆದಿತ್ಯವಾರ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ರವರೆಗೆ ಅಂಬೇಡ್ಕರ್ ಭವನ, ಉರ್ವಸ್ಟೋರ್, ಮಂಗಳೂರು ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರ :
ಉದ್ಘಾಟಕರು: ಶ್ರೀ ಮೋಹನ್ದಾಸ ಪರಮಹಂಸ ಸ್ವಾಮೀಜಿ, (ಶ್ರೀ ಧಾಮ ಮಾಣಿಲ)
ಅಧ್ಯಕ್ಷತೆ : ಸುರೇಶ್ ಕುಲಾಲ್ ಮಂಗಳದೇವಿ (ಅಧ್ಯಕ್ಷರು ಕುಲಾಲ ಪ್ರತಿಷ್ಠಾನ ಮಂಗಳೂರು)
ಗೌರವ ಉಪಸ್ಥಿತಿ :
- ಶಿವಾನಂದ ಕನಡ (ಪ್ರಧಾನ ಅರ್ಚಕರು ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ)
- ಎಂ ಪಿ ಬಂಗೇರ(ಮಾಜಿ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘ )
- ಮಮತಾ ಅಣ್ಣಯ್ಯ ಕುಲಾಲ್ ( ಅಧ್ಯಕ್ಷೆ ದ. ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತ್ರ ಸಂಘ, ಮಹಿಳಾ ವಿಭಾಗ )
- ಸದಾಶಿವ ಕುಲಾಲ್ ಅತ್ತಾವರ ( ಅಧ್ಯಕ್ಷರು, ಶ್ರೀದೇವಿ ದೇವಸ್ಥಾನ ಓಲ್ಡ್ ಕೆಂಟ್ ರೋಡ್ )
- ನ್ಯಾಯವಾದಿ ರಾಮ್ ಪ್ರಸಾದ್ ಎಸ್ ( ಅಧ್ಯಕ್ಷರು ಧರ್ಮಶಾಸ್ತ್ರ ಮಂದಿರ ಜ್ಯೋತಿ ನಗರ ಕುಲಶೇಖರ )
- ಗಂಗಾಧರ ಬಂಜನ್ (ರಾಜ್ಯಾಧ್ಯಕ್ಷರು ಕುಲಾಲರ ಕುಂಬಾರರ ಯುವ ವೇದಿಕೆ )
- ನ್ಯಾಯವಾದಿ ರವೀಂದ್ರ ಮುನ್ನಿಪಾಡಿ( ಅಧ್ಯಕ್ಷರು ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ )
- ನಾಗೇಶ್ ಕುಲಾಲ್ (ಅಧ್ಯಕ್ಷರು ಸ್ವರ್ಣ ಕೊಂಬ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ )
- ಕುಶ ಆರ್ ಮೂಲ್ಯ (ಕಾರ್ಯಾಧ್ಯಕ್ಷರು ಕುಂಭ ನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಳ್ಮಣ್ಣು )
- ಕಿರಣ್ ಕುಮಾರ್ ಅಟ್ಲೂರು( ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಸಮಿತಿ ಶ್ರೀ ವೀಣಾ ನಾರಾಯಣ ದೇವಸ್ಥಾನ )
ನೃತ್ಯ – ಸಂಗೀತ – ಸನ್ಮಾನ ( ಮಧ್ಯಾಹ್ನ 2:30 ರಿಂದ )
- ಅಮಿತ ಕಲಾಮಂದಿರದ ನಿರ್ದೇಶಕಿ ಅಮಿತ್ ಜತಿನ್ ಮೂಲ್ಯ ಮತ್ತು ತಂಡದವರಿಂದ
- ನಟನಾ ನೃತ್ಯ ಅಕಾಡೆಮಿ ಇದರ ನಿರ್ದೇಶಕಿ ಗೀತಾ ಸಾಲಿಯಾನ್ ಮತ್ತು ತಂಡದವರಿಂದ
- ಸವಿಜೀವನ ನ್ರತ್ಯಲಯ ಮಂಗಳೂರು ಇದರ ನಿರ್ದೇಶಕಿ ಸವಿತಾ ಜೀವನ್ ಮತ್ತು ತಂಡದವರಿಂದ
- ವಿದುಷಿ ಮಾನಸ ಕುಲಾಲ್ ಮಂಗಳೂರು ಇವರಿಂದ
- ವಿದುಷಿ ಸಿಂಚನ ಎಸ್ ಕುಲಾಲ್ ಇವರಿಂದ
ಹಾಗೂ ಕುಲಾಲ ಸಮಾಜದ ಮಕ್ಕಳಿಂದ ವೈವಿಧ್ಯಮಯ ನೃತ್ಯ ವೈಭವ
ದಿ. ಎಂ. ಕೆ. ಸೀತಾರಾಮ ಕುಲಾಲ್ ರಚಿಸಿರುವ ತುಳು ಚಿತ್ರಗೀತೆಗಳನ್ನು ಪ್ರಸಿದ್ಧ ಕಲಾವಿದ ಗಣೇಶ ಏರ್ಮಾಳ್ ಹಾಡಿ ರಂಜಿಸಲಿರುವರು.
ಇದೆ ವೇಳೆ ಕುಲಾಲ ಸಮಾಜದ 25 ಸಾಧಕರಿಗೆ ಕುಲಾಲ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭ :
ದಿವ್ಯ ಉಪಸ್ಥಿತಿ : ವಿಜಯ ಸುವರ್ಣ ಮಾದುಕೋಡಿ (ರೇಖಿ ಗುರು, ಶ್ರೀ ಸಾಯಿ ಲಿಂಗ್ ಸೆಂಟರ್ )
ಗೌರವಾಭಿನಂದನೆ : ಸುನಿಲ್ ಸಾಲಿಯನ್ ಮತ್ತು ಶ್ರೀಮತಿ ದೇವಕಿ ಸಾಲ್ಯಾನ್
ಅಧ್ಯಕ್ಷತೆ : ಸುರೇಶ್ ಕುಲಾಲ ಮಂಗಳದೇವಿ( ಅಧ್ಯಕ್ಷರು ಕುಲಾಲ ಪ್ರತಿಷ್ಠಾನ ಮಂಗಳೂರು )
ಗೌರವ ಅತಿಥಿಗಳು:
ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ( ಜಾಗತಿಕ ಬಂಟರ ಸಂಘಗಳ ಒಕ್ಕೂಟ )
ಸದಾಶಿವ ಶೆಟ್ಟಿ ಕನ್ಯಾನ( ಆಡಳಿತ ನಿರ್ದೇಶಕರು ಹೇರಂಬ ಕೆಮಿಕಲ್ಸ್ ಇಂಡಸ್ಟ್ರೀಸ್ )
ಶಶಿಧರ್ ಶೆಟ್ಟಿ ಬರೋಡ (ಸಿಎಂಡಿ ಶಶಿ ಕ್ಯಾಟರಸ್, ಗುಜರಾತ್ )
ಕರ್ನಿರೆ ವಿಶ್ವನಾಥ್ ಶೆಟ್ಟಿ (ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ )
ವಿ ಕರುಣಾಕರಣ್ (ಮಾಲಕರು ಕರುಣ ಇನ್ಫ್ರಾ ಪ್ರಾಪರ್ಟೀಸ್ ಇಂಡಿಯಾ ಪ್ರೈ ಲಿಮಿಟೆಡ್ )
ಮೋಹನ್ ಪೂಜಾರಿ (ಸಿಎಂಡಿ ವೈಷ್ಣವಿ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್)
ಮಯೂರ್ ಉಳ್ಳಾಲ್ (ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ )
ರಘು ಮೂಲ್ಯ ಪಾದೆಬೆಟ್ಟು( ಅಧ್ಯಕ್ಷರು ಕುಲಾಲ ಸಂಘ ಮುಂಬೈ)
ಶ್ರೀಮತಿ ಕಸ್ತೂರಿ ಪಂಜ( ಮಾಜಿ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್)
ಸುಂದರ್ ಕುಲಾಲ್ ಶಕ್ತಿನಗರ (ಆಡಳಿತ ಮೊಕ್ತೇಸರರು, ಶ್ರೀ ವೀರ ನಾರಾಯಣ ದೇವಸ್ಥಾನ)
ಡಾ. ಸುರೇಖಾ ರತನ್ ಕುಲಾಲ್ (ಉದ್ಯಮಿ, ಯೋಗ ಪಟು)
ಜಗದೀಶ್ ಬಂಜನ್ ( ಜೈದೀಪ್ ಕನ್ಸ್ಟ್ರಕ್ಷನ್ ಮುಂಬೈ)
ಲೋಕನಾಥ್ ಶೆಟ್ಟಿ (ಮಾಲಕರು,ಭಾರತಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಬಿಜೈ)
ಗುರುದತ್ ಶೆಣೈ (ಪಾಲುದಾರರು, ಮುಕುಂದ್ ಎಂಜಿಎಂ ರಿಯಾಲಿಟಿ ಮಂಗಳೂರು)
ಗಿರೀಶ್ ಬಿ ಸಾಲಿಯನ್ (ಕಾರ್ಯಕ್ಷರು, ಜ್ಯೋತಿ ಕೋ ಆಪರೇಟಿವ್ ಸೊಸೈಟಿ ಮುಂಬೈ)
ರಮಾನಂದ್ ಬಂಗೇರ (ಆಡಳಿತ ನಿರ್ದೇಶಕರು, ನಂದ ಟೆಕ್ಸ್ ಟೈಲ್ಸ್ ನಾಸಿಕ್ )
ಶಶಿಧರ್ ಹೆಗ್ಡೆ ( ಮಾಜಿ ಮೇಯರ್ ಮತ್ತು ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ )
ದಿವಾಕರ್ ಮೂಲ್ಯ (ಉದ್ಯಮಿ ಮತ್ತು ಅಧ್ಯಕ್ಷರು,ಕುಲಾಲ ಸಂಘ ಬೆಂಗಳೂರು )
ಈ ಸಂದರ್ಭ 25 ಮಂದಿ ಕುಲಾಲ ಸಮಾಜದ ಬಾಂಧವರಿಗೆ ಆರ್ಥಿಕ ಸಹಾಯ ಮಾಡಲಾಗುವುದು. ರಾತ್ರಿ 8 ರಿಂದ 8:30ರ ತನಕ ನಾಗೇಶ್ ಕುಲಾಲ್ ಕುಳಾಯಿ ಅವರ ಸಾರಥ್ಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕತ ಕಲಾಕುಂಭ ಕುಳಾಯಿ ಅರ್ಪಿಸುವ ‘ಮಣ್ಣಾ ಬಾಜನ’ ಕಿರು ನಾಟಕ ಪ್ರಸ್ತುತಗೊಳ್ಳಲಿದೆ
8:30 ರಿಂದ 9:30 ತನಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾ. ಸೀತಾರಾಮ್ ಕುಲಾಲ್ ಮತ್ತು ತಂಡದವರಿಂದ “ತಾಲೀಮು” ಪ್ರದರ್ಶನಗೊಳ್ಳಲಿದೆ.
ಕುಲಲ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಟಿ ಸುರೇಶ್ ಕುಲಾಲ್, ಟ್ರಸ್ಟಿಗಳಾದ ಮಾಸ್ಟರ್ ಬಿ ಸೀತಾರಾಮ್ ಕುಲಾಲ್, ಬಿ ನಾಗೇಶ್ ಕುಲಾಲ್, ವಿ ಪ್ರೇಮಾನಂದ ಕುಲಾಳ್, ಲಕ್ಷ್ಮಣ್ ಕುಂದರ್, ಬಿ ದಿನೇಶ್ ಕುಲಾಲ್ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕೊನೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸವಿರುಚಿಯಾದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

