ಥಾಣೇ ಪಶ್ಚಿಮದ ವೀರ ಸಾವರ್ಕರ್ ನಗರದಲ್ಲಿ ದೈವ ಭಕ್ತ ಶಿವ ಪ್ರಸಾದ ಪೂಜಾರಿ ಪುತ್ತೂರು ಅವರು ಸ್ಥಾಪಿಸಿ, ಜನರ ಇಷ್ಟಾರ್ಥಗಳನ್ನು ಈಡೇರಿಸಿಕೊಡುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನಾಂಕ 13/04/2025 ನೇ ರವಿವಾರದಂದು ಮಾಸಿಕ ಸಂಕ್ರಮಣ ಪೂಜೆ ನಡೆಯಲಿದೆ.
ಅಂದು ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಗಳು.
ಬೆಳಿಗ್ಗೆ ಗಂಟೆ 9:00 ಕ್ಕೆ ಗಣಹೋಮ,
ಮಧ್ಯಾಹ್ನ ಗಂಟೆ 12:00 ಕ್ಕೆ ಪಂಚಕಜ್ಜಾಯ ಸೇವೆ,
ಮಧ್ಯಾಹ್ನ ಗಂಟೆ 12:30 ಕ್ಕೆ ಮಹಾ ಆರತಿ ಆದ ಬಳಿಕ
ಮಧ್ಯಾಹ್ನ ಗಂಟೆ 01:00 ಕ್ಕೆ ಅನ್ನಪ್ರಸಾದ ವಿತರಣೆಯಾಗಲಿದೆ.
ತದನಂತರ ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಭಾಂಡೂಪ್ ಇವರಿಂದ ಶ್ರೀ ಶನಿಶ್ಛರ ಗ್ರಂಥ ಪಾರಾಯಣ (ಯಕ್ಷಗಾನ ತಾಳ ಮದ್ದಳೆ) ನಡೆಯಲಿದೆ.
ಸಂಜೆ ಗಂಟೆ 07:30 ಕ್ಕೆ ಮಹಾ ಮಂಗಳಾರತಿಯು ನಡೆಯಲಿರುವುದು.
ತಾವೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೈವ – ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರವಾಗಿ ಶ್ರೀ ಶಿವಪ್ರಸಾದ್ ಪೂಜಾರಿ ಪುತ್ತೂರು(9004318009)ವಿನಂತಿಸಿದ್ದಾರೆ.