ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸಿದ ಮೋಗವೀರ ಸಮಾಜದ ಮುಂದಾಳು ಶ್ರೀಧರ್ ಕಾಂಚನ್ (69)ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಎ. 15) ಮಧ್ಯಾಹ್ನ ನಿಧನಹೊಂದಿದರು.
ಅವರು ಪೊಲಿಪು ಮೊಗವೀರ ಸಭಾದ ಅಧ್ಯಕ್ಷರಾಗಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಸರಕಾರದ ನಾಮ ನಿರ್ದೇಶನ ಟ್ರಸ್ಟಿಯಾಗಿ, ಕಾಂಚನ್ ಮೂಲಸ್ಥಾನ ಪೊಲಿಪು ಇದರ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಓರ್ವ ಅಪ್ರತಿಮ ಹಾಸ್ಯ ಕಲಾವಿದರಾದ ಅವರು ಲಕ್ಷ್ಮೀ ನಾರಾಯಣ ಕಲಾವೃಂದ, ಹಾಗೂ ಇತರ ನಾಟಕ ತಂಡಗಳಲ್ಲಿ ತನ್ನ ಹಾಸ್ಯಭಿನಯದ ಮೂಲಕ ಕಲಾ ರಸಿಕರ ಮನಗೆದ್ದಿದ್ದರು.
ಶ್ರೀಧರ್ ಕಾಂಚನ್ ಅವರ ನಿಧನಕ್ಕೆ ಕಾಪು ಶಾಸಕ
ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪೊಲಿಪು ಮೊಗವೀರ ಸಭಾದ ಮುಂಬೈ ಶಾಖೆಯ ಪದಾಧಿಕಾರಿಗಳು, ಸದಸ್ಯರು, ಪೋಲಿಪು ಶಾಲಾ ಹಳೇ ವಿದ್ಯಾರ್ಥಿ ಸಂಘ ಮುಂಬೈಯ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.