ಮುಲ್ಕಿ ಸೀಮೆಯ ಒಡತಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವರ್ಷವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ಸುಮಾರು 1.30ರ ಹೊತ್ತಿಗೆ ಬ್ರಹ್ಮರಥವನ್ನು ಭಕ್ತರು ಎಳೆಯುತ್ತಿದ್ದಂತೆ, ರಥದ ಮೇಲ್ಭಾಗ ಕುಸಿದು ಬಿದ್ದಿದೆ.
ಇವೇಳೆ ಅರ್ಚಕರು ರಥದ ಒಳಗಡೆ ಇದ್ದರು, ಅಮ್ಮನ ಅನುಗ್ರಹದಿಂದ ಯಾವುದೇ ಅನಾಹುತವಾಗಿಲ್ಲ ಎನ್ನಲಾಗಿದೆ. ನಂತರ ಚಂದ್ರಮಂಡಲ ರಥದಲ್ಲಿ ದೇವರ ಉತ್ಸವವನ್ನು ಮುಂದುವರಿಸಲಾಯಿತು ಎಂದು ಕ್ಷೇತ್ರದ ಭಕ್ತರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು , ಇದಕ್ಕೆಲ್ಲಾ ದೇವರ ಮುನಿಸೇ ಕಾರಣ ಎನ್ನಲಾಗುತ್ತಿದೆ.

