April 21, 2025
ಸುದ್ದಿ

ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ನಿಧನ.



ರೋಮನ್ ಕ್ಯಾಥೋಲಿಕ್ ಚರ್ಚನ ಮುಖ್ಯಸ್ಥ ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಪ್ರಾನ್ಸಿಸ್ ಅವರು ಇಂದು ಬೆಳಿಗ್ಗೆ (ಎ. 21) ನಿಧನರಾಗಿದ್ದಾರೆ.
ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಪೋಪ್ ಪ್ರಾನ್ಸಿಸ್ (88) ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್ ನ ಕಾಸಾ ಸಾಂತಾ ಮಾರ್ಟದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ವಿಶೇಷವೆಂದರೆ ಅವರು ಭಾನುವಾರದಂದು ಜನರನ್ನು ಉದ್ದೇಶಿಸಿ ಮಾತನಾಡಿದರು, ಆ ಸಮಯದಲ್ಲಿ ಅವರು ಚಿಂತನೆಯ ಸ್ವಾತಂತ್ರ್ಯ ಮತ್ತು ಸಹಿಷ್ಣುತೆ ಬಗ್ಗೆ ಮಾತನಾಡಿದರು.ಜನರಿಗೆ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಹೇಳಿದ್ದರು.ಅವರ ಧ್ವನಿ ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುವಂತೆ ತೋರುತ್ತಿತ್ತು.
12 ವರ್ಷಗಳ ಕಾಲ ವಿಶ್ವದ 1.4 ಬಿಲಿಯನ್ ರೋಮನ್ ಕ್ಯಾಥೋಲಿಕರ ಆಧ್ಯಾತ್ಮಿಕ ನಾಯಕರಾಗಿದ್ದ ಪೋಪ್ ಫ್ರಾನ್ಸಿಸ್ ಅವರ ಮರಣವು ರೋಮನ್ ಕ್ಯಾಥೋಲಿಕ್ ಚರ್ಚಿನಲ್ಲಿ ಹೊಸ ಪೋಪ್ ಅವರನ್ನು ನೇಮಿಸುವ ಸಾಂಪ್ರದಾಯಿಕ ಮತ್ತು ನಿಗೂಢ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ಕಾನ್ಕಗೇವ್ ಎಂದು ಕರೆಯಲಾಗುತ್ತದೆ ವಾಸ್ತವವಾಗಿ ಪೋಪ್ ಅವರನ್ನು ಕ್ಯಾಥೋಲಿಕ್ ಚರ್ಚಿನ ಸರ್ವೋಚ್ಚ ಮುಖ್ಯಸ್ಥರೆಂದು ಪರಿಗಣಿಸಲಾಗುತ್ತಿದೆ. ಅವರನ್ನು ಏಸುಕ್ರಿಸ್ತನ ಶಿಷ್ಯರಲ್ಲಿ ಪ್ರಮುಖರಾಗಿದ್ದ ಸಂತ ಪೀಟರ್ ಅವರ ಉತ್ತರಾಧಿಕಾರಿಯಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಪೋಪ್ ಚರ್ಚನ ಸಿದ್ಧಾಂತಗಳು ಮತ್ತು ನಂಬಿಕೆಗಳ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದಾರೆ.

Related posts

ಆನಂದ ಶೆಟ್ಟಿ ಎಕ್ಕಾರ್ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಯ್ಕೆ

Mumbai News Desk

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಯೋಗ  ಶಿಸ್ತುಬದ್ಧ ಜೀವನ ನಡೆಸಲು ಸಹಕಾರಿಯಾಗಿದೆ: ಗುತ್ತಿನಾರ್ ರವೀಂದ್ರ ಶೆಟ್ಟಿ

Mumbai News Desk

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನ: ಸಚಿವ ಸೋಮಣ್ಣ

Mumbai News Desk