
ಶ್ರೀ ಮೂಕಾಂಬಿಕಾ ದೇವಿಯ ಕೃಪೆಯಿಂದ ಜೀವನ ದಲ್ಲಿ ಯಶಸ್ಸನ್ನು ಕಂಡಿದ್ದೇನೆ – ಅರುಣೋದಯ ರೈ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಕಲ್ಯಾಣ್ ಎ. 21: ನಾನು ಮಹಾನಗರಕ್ಕೆ ಅಗಮಿಸಿ ಮುಂಬಯಿಯ ಮೊದಲ ದಿನವನ್ನು ಈ ಪ್ರದೇಶದಲ್ಲಿ ಕಳೆದವ, ಕಲ್ಯಾಣ್ ಬಿರ್ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದವ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ಯಕ್ಷಗಾನದ ಸವಿಯನ್ನು ಉಂಡಿದ್ದೇನೆ. ಮಹಾನಗರದಲ್ಲಿ ನನ್ನ ಜೀವನವನ್ನು ಅರಂಭಿಸಿದ ಈ ಸ್ಥಳವನ್ನು ಮರೆಯಲು ಸಾಧ್ಯವಿಲ್ಲ ಶ್ರೀ ಮೂಕಾಂಬಿಕಾ ದೇವಿಯ ಕೃಪೆಯಿಂದ ಜೀವನದಲ್ಲಿ ಯಶಸ್ಸುನ್ನು ಕಂಡಿದ್ದೇನೆ. ಇಂದು ಒಂದು ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ ಮನಸ್ಸಿಗೆ ಲಭಿಸಿದೆ. ಶ್ರೀ ನಿತ್ಯಾನಂದ ಭಜನಾ ಮಂಡಳಿಯ ಉತ್ತಮ ಅಡಳಿತ ಮಂಡಳಿಯಿಂದಾಗಿ ದೇವಸ್ಥಾನ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ನಿಮ್ಮ ಮುಂದಿನ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಿಮ್ಮೊಂದಿಗೆ ನಾನು ಸದಾ ಇದ್ದೇನೆ ಎಂದು ಖ್ಯಾತ ಶಿಕ್ಷಣ ತಜ್ಞ ರೈ ಎಜುಕೇಷನ್ ಟ್ರಸ್ಟ್ ಹಾಗೂ ಸೈಂಟ್ ಆ್ಯಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಇದರ ಸ್ಥಾಪಕ ಅರುಣೋದಯ ರೈ ನುಡಿದರು.
ಅವರು ಎಪ್ರಿಲ್ 20 ರ ಭಾನುವಾರದಂದು ಶ್ರೀ ನಿತ್ಯಾನಂದ ಮಿತ್ರ ಭಜನಾ ಮoಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ 63 ನೇ ವಾರ್ಷಿಕ ಮಹಾ ಪೂಜೆಯ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಅತಿಥಿ ಸುಬ್ಬಯ್ಯ ಶೆಟ್ಟಿ ಮಾತನಾಡುತ್ತಾ ಹಿರಿಯರು ಸ್ಥಾಪಿಸಿದ ದೇವಸ್ಥಾನದಲ್ಲಿ ಉತ್ತಮ ಅಡಳಿತ ಮಂಡಳಿಯ ಮುರ್ತುವರ್ಜಿಯಲ್ಲಿ ಕಳೆದ 63 ವರ್ಷಗಳಿಂದ ನಿರಂತರ ಶಾಸ್ರೋಕ್ತ ಪೂಜೆ, ಉತ್ಸವಗಳು ನಡೆಯುವುದರಿಂದ ಕಲ್ಯಾಣ್ ಪರಿಸರದ ಭಕ್ತರ ಶ್ರದ್ಧಾ ಕೇಂದ್ರವಾಗಿ ಈ ಮಂದಿರ ಮೆರೆಯುತ್ತಿದೆ. ಭಕ್ತರ ಸಹಕಾರದಿಂದ ಅಡಳಿತ ಮಂಡಳಿಯ ಶಿಸ್ತು ಬದ್ಧ ಕೆಲಸ ಕಾರ್ಯಗಳಿಂದ ಮುಂದಿನ ದಿನಗಳಲ್ಲೂ ಮೂಕಾಂಬಿಕಾ ದೇವಿಯ ಈ ದೇವಸ್ಥಾನ ಕ್ಷೇತ್ರವಾಗಿ ಮೆರೆಯಲಿದೆ ಎಂದರು.
ಅತಿಥಿ ಬಿಲ್ಲವರ ಅಸೋಸಿಯೇಷನ್ ಇದರ ಅಧ್ಯಕ್ಷ ಹರೀಶ್ ಅಮೀನ್ ಮಾತನಾಡುತ್ತಾ ಈ ಸ್ಥಳಕ್ಕೆ ಬಂದಾಗ ಮನಸ್ಸಿಗೆ ತೃಪ್ತಿ ಲಭಿಸಿದ ಅನುಭವವಾಗಿದೆ. ಇಲ್ಲಿ ಜಾಗದ ಕೊರತೆ ಇರಬಹುದು ಅದರೆ ದೇವರ ಕೃಪೆಗೆ ಕೊರತೆ ಇಲ್ಲ, ಶ್ರೀ ಮೂಕಾಂಬಿಕಾ ದೇವಿಯ ಕೃಪೆಯಿಂದಾಗಿ ನಿಮ್ಮ ಮುಂದಿನ ಯೋಜನೆಗಳು ನಿರ್ವಿಘ್ನವಾಗಿ ನಡೆಯುವುದರಲ್ಲಿ ಸಂದೇಹವಿಲ್ಲ ನಿಮ್ಮ ಪ್ರತಿಯೊಂದು ಯೋಜನೆಗಳಿಗೆ ನಮ್ಮ ಸಹಕಾರ ಸದಾ ಇದೆ ಎಂದರು.
ಅತಿಥಿ ಬಂಟರ ಸಂಘ ಮುಂಬಯಿ, ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ ಮಾತನಾಡುತ್ತಾ ಕಲ್ಯಾಣ್ ಪರಿಸರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಅಚ್ಚುಕಟ್ಟಾದ ಪೂಜೆ, ಸೇವೆ ಸಲ್ಲಿಸುವ ಮೂಲಕ ಶ್ರೀ ಮೂಕಾಂಬಿಕಾ ಕ್ಷೇತ್ರ ಕನ್ನಡಿಗರ ಮನೆ ಮತಾಗಿದೆ. ರಾಜೇಶ್ ಶೆಟ್ಟಿಯವರ ಮುಂದಾಳುತನದಲ್ಲಿ ಮಂದಿರ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ನಿಮ್ಮ ಮುಂದಿನ ಪ್ರತಿಯೊಂದು ಯೋಜನೆ ಯೋಚನೆಗಳಿಗೆ ನಮ್ಮ ಸಹಾಯ, ಸಹಕಾರ ಸದಾ ನೀಡಲಿದ್ದೇವೆ ಎಂದರು.

ಅತಿಥಿ ಎಶಿಯಾಟಿಕ್ ಕ್ರೇನ್ ಸರ್ವಿಸ್ ಇದರ ಎಂ.ಡಿ ಗಣೇಶ್ ಪೂಜಾರಿ ಮಾತನಾಡುತ್ತಾ ತುಳುನಾಡಿನಲ್ಲಿ ಹುಟ್ಟಿದ ನಾವು ಮಹಾರಾಷ್ಟ್ರ ವನ್ನು ಕರ್ಮಭೂಮಿಯನ್ನಾಗಿಸಿ ನಮ್ಮ ಅಚಾರ, ವಿಚಾರಗಳನ್ನು ಮಹಾನಗರದಲ್ಲಿ ಅಚರಿಸುತ್ತಾ ಬಂದಿದ್ದಾರೆ. ನಮ್ಮ ಹಿರಿಯರು ಆರು ದಶಕಗಳ ಹಿಂದೆ ಗ್ರಾಮೀಣ ಪ್ರದೇಶವಾದ ಶಹಾಡ್ ನಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನವನ್ನು ಸ್ಥಾಪಿಸಿ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಅದರೊಂದಿಗೆ ತುಳು- ಕನ್ನಡಿಗರಿಗೆ ದೇವರ ಭಕ್ತಿಯನ್ನು ಮಾಡಲು ಅವಕಾಶ ಕಲ್ಪಿಸಿದ್ದಾರೆ ಈ ಮಂದಿರವನ್ನು ಅಚ್ಚುಕಟ್ಟಾಗಿ ನಿರ್ಮಲವಾಗಿಡುವ ಜವಬ್ದಾರಿಯನ್ನು ನಾವು ಮಾಡೋಣಾ ಎಂದರು.

ಅತಿಥಿ ಮಧುಕರ್ ಮಾಪೆ ಮಾತನಾಡುತ್ತಾ ಕನ್ನಡಿಗರು ಗುಣಮಟ್ಟದ ಅಹಾರ ನೀಡುವಲ್ಲಿ ನಿಪುಣರು ಎಂದು ತಿಳಿದಿದ್ದೇನೆ. ಅದರೆ ಇಲ್ಲಿ ಈ ಮಂದಿರದ ಮೂಲಕ ಸನಾತನ ಧರ್ಮವನ್ನು ಉಳಿಸುವ ಕೆಲಸವನ್ನು ನಿವೆಲ್ಲರೂ ಮಾಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಯುಗದಲ್ಲಿ ತಲ್ಲಿನರಾಗುತ್ತಿರವ ಯುವಕರನ್ನು ನಾವು ನೋಡುತ್ತೇವೆ ಅದರೆ ಇಲ್ಲಿ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಯುವಕರನ್ನು ಕಂಡು ಅತೀವ ಅನಂದ ವಾಗುತ್ತಿದೆ ಎಂದರು.

ಪರಿಸರದ ನಗರ ಸೇವಕ ದಿಲೀಪ್ ಗಾಯಕ್ವಾಡ್ ಮಾತನಾಡುತ್ತಾ ಶ್ರೀ ಮೂಕಾಂಬಿಕಾ ದೇವಿಯ ಕೃಪೆಯಿಂದ ನಾನು ನಾಲ್ಕು ಬಾರಿ ನಗರ ಸೇವಕನಾಗಿ ಅಯ್ಕೆಯಾಗಿ ಸಮಾಜ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಯಾವುದೇ ಸಂಸ್ಥೆಯ ಅಡಳಿತ ಮಂಡಳಿ ಒಳ್ಳೆಯದಾಗಿದ್ದರೆ ಅ ಸಂಸ್ಥೆ ಒಳ್ಳೆಯದಾಗುತ್ತದೆ. ಅದೇ ರೀತಿ ಈ ದೇವಸ್ಥಾನದ ಅಡಳಿತ ಮಂಡಳಿ ಅಚ್ಚುಕಟ್ಟಾದ ಧಾರ್ಮಿಕ ಕೆಲಸ ಮಾಡುವುದರೊಂದಿಗೆ ಶೈಕ್ಷಣಿಕವಾಗಿ ಬಹಳಷ್ಟು ಕೆಲಸವನ್ನು ಈ ಸಂಸ್ಥೆ ಮಾಡುವುದನ್ನು ನಾನು ಕಂಡಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ನಿಮ್ಮ ಆಶೋತ್ತರಗಳನ್ನು ಶ್ರೀ ದೇವಿಯು ಪೂರ್ಣಗೊಳಿಸಲಿ ಎಂದರು.

ಮಂಡಳಿಯ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಅನ್ಯನ್ಯ ಭಕ್ತ, ಸಮಾಜ ಸೇವಕ ಸುಧೀರ್ ಶೆಟ್ಟಿ ವಂಡ್ಸೆ ದಂಪತಿ, ಹಿರಿಯ ಭಕ್ತೆ ಜಯಂತಿ ಶೆಟ್ಟಿ ಹಾಗೂ ಮೋಹನ್ ಮೂಲ್ಯ ಅವರ ಪರವಾಗಿ ಅವರ ಪತ್ನಿ ಮತ್ತು ಪುತ್ರನನ್ನು ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನಿಸಿ ದರು ಹಾಗೂ ಅನ್ನದಾನ ನೀಡಿದ ಸ್ವಾತಿ ವಿಶಾಲ್ ಶಾಂತ ಪರಿವಾರ, ಚಂದ್ರಕಾಂತ ಶೆಟ್ಟಿ ಮತ್ತು ಅನಿಲ್ ಶೆಟ್ಟಿ ಪರಿವಾರ, ಪ್ರಭಾವಳಿ ಸೇವೆ ನೀಡಿದ ಕರುಣಾಕರ ಶೆಟ್ಟಿ ಮತ್ತು ಅವರ ಸುಪುತ್ರಿ, ಯಕ್ಷಗಾನ ಸೇವೆ ನೀಡಿದ ರಾಜೇಶ್ ಶೆಟ್ಟಿ ದಂಪತಿ, ಸದಾಶಿವ ಪೂಜಾರಿ ಮತ್ತು ಯುವರಾಜ ಪೂಜಾರಿ ಹಾಗೂ ಅಚ್ಚುಕಟ್ಟಾದ ಕೆಲಸಗಳನ್ನು ಮಾಡಲು ಸಹಕಾರ ನೀಡುತ್ತಿದ್ದ ಚಿಣ್ಣರನ್ನು ವೇದಿಕೆಯ ಮೇಲೆ ವಿಶೇಷವಾಗಿ ಸತ್ಕರಿಸಲಾಯಿತು.

ಅಶಾ ನಾಯಕ್ ಅವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ವೇದಿಕೆಯ ಮೇಲೆ ಶ್ರೀಕಾಂತ್ ತಂತ್ರಿ, ರಾಜೇಶ್ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಹರೀಶ್ ಅಮೀನ್, ಅರುಣೋದಯ ರೈ, ಸುಭೋದ್ ಭಂಡಾರಿ, ಗಣೇಶ್ ಪೂಜಾರಿ, ಕರುಣಾಕರ ಶೆಟ್ಟಿ, ದಿಲೀಪ್ ಗಾಯಕ್ವಾಡ್, ಮಧುಕರ್ ಮೋಪೆ, ಯುವರಾಜ ಪೂಜಾರಿ, ಸಂತೋಷ ಶೆಟ್ಟಿ, ಜಗದೀಶ್ ಬೆಳಂಜೆ, ಜಯಂತಿ ಶೆಟ್ಟಿ, ದೀಪಕ್ ಬಂಗೇರಾ, ಗಣೇಶ್ ಶೆಟ್ಟಿ ನಂದ್ರೋಳಿ, ಸದಾನಂದ ಸಾಲ್ಯಾನ್, ಪ್ರೇಮ್ ಕುಮಾರ್ ಎಸ್. ರೈ, ವಸಂತ ಶೆಟ್ಟಿ, ಜ್ಯೋತಿ ಗಾಯಕ್ವಾಡ್ ಮೊದಲಾದವರು ಉಪಸ್ಥಿತರಿದ್ದರು.
ಚಿನ್ಮಯ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಜಗದೀಶ್ ಬೆಳಂಜೆ ವಂದಿಸಿದರು.

ನಮ್ಮ ಋಷಿ ಮುನಿಗಳು ದೇವರನ್ನು ಯಾವ ರೀತಿ, ಯಾವ ವಿಧದಲ್ಲಿ ಪೂಜಿಸ ಬೇಕೆಂದು ನಮಗೆಲ್ಲಾ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ದೇವರ ಮೇಲೆ ಅಚಲ ವಿಶ್ವಾಸ, ಭಕ್ತಿ, ಶ್ರದ್ಧೆಯಿಂದ ಪೂಜಿಸಿದಾಗ ದೇವರು ಅ ಭಕ್ತಿಗೆ ಒಲಿಯುತ್ತಾರೆ. ಈ ಕ್ಷೇತ್ರದಲ್ಲಿ ಅಚ್ಚುಕಟ್ಟಾದ, ಶಿಸ್ತು ಬದ್ಧವಾದ ಪೂಜೆ ಮಾಡಿದಾಗ ದೇವರು ಪ್ರಸನ್ನರಾಗುತ್ತಾರೆ. ದೇವತಾ ಕಾರ್ಯಗಳನ್ನು ನಾವು ಮಾಡುತ್ತಾ ಬಂದಾಗ ನಾವು ಮಾಡಿದ ಪಾಪ, ಕರ್ಮಾದಿಗಳು ಪರಿಹಾರವಾಗುತ್ತದೆ. — ಶ್ರೀಕಾಂತ್ ತಂತ್ರಿ, ಅರ್ಚಕರು
ಅಧ್ಯಕ್ಷರ ಮಾತು:-
ನಮ್ಮ ಹಿರಿಯರು ಸ್ಥಾಪಿಸಿದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನವನ್ನು ನಾವು ಶ್ರದ್ಧೆಯಿಂದ ಮುನ್ನಡೆಸಿ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ.ಅಖಂಡ ಭಜನೆ, ನವರಾತ್ರಿ ಉತ್ಸವ, ವಾರ್ಷಿಕ ಮಹೋತ್ಸವ , ಅನ್ನದಾನ ಸೇವೆಯನ್ನು ಮಾಡುತ್ತ ಪರಿಸರದ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಮಹಾನಗರ ಪಾಲಿಕೆ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಶೈಕ್ಷಣಿಕ ಸಹಾಯ,ದತ್ತು ಸ್ವೀಕಾರ, ವಿದ್ಯಾರ್ಥಿ ವೇತನವನ್ನು ನೀಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಳಿತ ಮಂಡಳಿ, ಮಹಿಳಾ ವಿಭಾಗ, ಯುವ ವಿಭಾಗ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಹಾಗೂ ದೇವಸ್ಥಾನದ ಹಿಂಬದಿಯ ಸ್ಥಳವನ್ನು ಪಡೆದು ಸಭಾಗೃಹ ನಿರ್ಮಿಸುವ ಯೋಜನೆ ಅಡಳಿತ ಮಂಡಳಿಯ ಮುಂದಿದೆ ಈ ಕಾರ್ಯಕ್ಕೆ ತಮ್ಮೇಲ್ಲರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ — ರಾಜೇಶ್ ಜೆ. ಶೆಟ್ಟಿ ( ಅಧ್ಯಕ್ಷರು ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ )