ಕಲ್ಯಾಣ, 24/04/25: “ಕರ್ನಾಟಕ ನಮ್ಮ ಜನ್ಮಭೂಮಿಯಾದರೆ ಮಹಾರಾಷ್ಟ್ರ ನಮ್ಮ ಕರ್ಮಭೂಮಿ.ಹಾಗೆ ಕರ್ನಾಟಕ ರಾಜ್ಯೋತ್ಸವದೊಂದಿಗೆ ಮಹಾರಾಷ್ಟ್ರ ರಾಜ್ಯೋತ್ಸವವನ್ನೂ ಆಚರಿಸಬೇಕೆಂಬ” ಸಂಘದ ಸಲಹೆಗಾರ ಡಾ. ಸುರೇಂದ್ರ ಶೆಟ್ಟಿಯವರ ಆಶಯದಂತೆ ಕಳೆದ 10 ವರ್ಷಗಳಿಂದ ನಾವು ಆಚರಿಸುತ್ತಿದ್ದು, ಈ ವರ್ಷ ಮೇ 1ರಂದು ಕಲ್ಯಾಣ(ಪ)ದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಈ ಭವ್ಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ನ್ಯಾಯವಾದಿ ಅಡ್ವಕೇಟ್ ಅಕ್ಷತಾ ಪ್ರಭುರವರು ಮುಖ್ಯ ಅತಿಥಿಯಾಗಿ, ಸಾಮಾಜಿಕ ಕಾರ್ಯಕರ್ತ ಶ್ರೀ ಮಿಲಿಂದ ಕುಲಕರ್ಣಿಯವರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶ್ರೀ ಅಭಿಜಿತ್ ವಿನಾಯಕ ಚಾಂದೆಕರ್ ರವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಮುಂಬಯಿ ಪರಿಸರದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಡಾ. ಶಶೀ ಪ್ರವೀಣ್ ಶೆಟ್ಟಿಯವರನ್ನು ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗೈದ ಭಕ್ತಿ ಶಾಸ್ತ್ರಿ ಡಾ. ಅಮಿತ್ ಜಯಂತ್ ದೇಶಮುಖ್ ರವರನ್ನು ಸನ್ಮಾನಿಸಲಾಗುವುದು. ವಿವಿಧ ಮನೋರಂಜನೆಯಿಂದ, ಪ್ರೀತಿ ಭೋಜನದಿಂದ ಕೂಡಿದ ಈ ಭವ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಪ್ರೋಗ್ರಾಮ್ ಕಮಿಟಿ ಅಧ್ಯಕ್ಷ ಶ್ರೀ ಭಾಸ್ಕರ ಶೆಟ್ಟಿ (ಗುರುದೇವ್), ಸಂಘದ ಅಧ್ಯಕ್ಷ ಶ್ರೀ ಕೆ. ಎನ್. ಸತೀಶ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
