32 C
Mumbai
March 7, 2026
Mumbai News Kannada
ತುಳುನಾಡು

ಚಂದ್ರಶೇಖರ ಬೆಳ್ಚಡ ಸಾರಥ್ಯದಲ್ಲಿ ಕಟೀಲಿನಲ್ಲಿ 50ನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ.





ಮುಂಬಯಿ : ಗರ್ಭಗುಡಿಯಿಂದ ಉತ್ಸವ ಸಂದರ್ಭದಲ್ಲಿ ದೇವರು ಹೊರಬಂದು ಪೂಜೆ ಸ್ವೀಕರಿಸಿ ಭಕ್ತರನ್ನು ಆಶೀರ್ವದಿಸುವುದು ಸಾಮಾನ್ಯ. ಆದರೆ ಕಟೀಲಿನ ಮಾತೆ ಯಕ್ಷಗಾನದ ಮೂಲಕ ಭಕ್ತರ ಮನೆಗೆ ಬಂದು ಸೇವೆ ಸ್ವೀಕರಿಸಿ ಹೋಗುತ್ತಾಳೆ ಎಂಬ ನಂಬಿಕೆ. ಕಳೆದ 50 ವರ್ಷಗಳಿಂದ ತಪಸ್ಸಿನಂತೆ ಗಂಪಮನೆಯಲ್ಲಿ ಯಕ್ಷಾರಾಧನೆ, ಕಲಾ ರಾಧನೆ ನಡೆಸುತ್ತಾ ಬಂದಿರುವುದು ಅಭಿನಂದನೀಯ ಎಂದು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ನುಡಿದರು.

ಮುಂಬಯಿ ಮಹಾನಗರದ ಉದ್ಯಮಿ, ಸಮಾಜ ಸೇವಕ ಚಂದ್ರಶೇಖರ ಆರ್. ಬೆಳ್ಚಡ, ಸುಪುತ್ರ ಮೇಹುಲ್, ಸಹೋದರ ಸಹೋದರಿಯರು ಹಾಗೂ ಗಂಪ ಫ್ಯಾಮಿಲಿ ಕಟೀಲು ಇವರ ವತಿಯಿಂದ 50ನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮವು ಏ. 27ರಂದು ಕಟೀಲು ಪೆಟ್ರೋಲ್ ಪಂಪ್ ಪಕ್ಕದ ಮೈದಾನದಲ್ಲಿ ನಡೆದಿದ್ದು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಗುರುಪುರದ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಪದ್ಯಾಣ ಗೋವಿಂದ ಭಟ್, ಮೋನಪ್ಪ ಗೌಡ ಕಿನ್ನಿ ಕೊಡಂಗೆ, ಕುಮಾರ ಪಡ್ರೆ ಇವರನ್ನು ಸನ್ಮಾನಿಸಲಾಯಿತು.
ಕಟೀಲು ಕ್ಷೇತ್ರದ ಶ್ರೀ ವಾಸುದೇವ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಕಮಲಾದೇವಿ ಆಸ್ರಣ್ಣ, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಅನಂತ ಪದ್ಮನಾಭ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಶ್ರೀ ಭಗವತಿ ಕ್ಷೇತ್ರ ಸಸಿಹಿತ್ತ್ಲು ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಉಮಾನಾಥ್ ಕೋಟ್ಯಾನ್, (ಶಾಸಕರು, ಮೂಲ್ಕಿ ಮೂಡಬಿದ್ರೆ ಕ್ಷೇತ್ರ), ಮಿಥುನ್ ರೈ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್), ಧರ್ಮ ಪಾಲ್ ಯು ದೇವಾಡಿಗ (ಅಧ್ಯಕ್ಷರು, ದೇವಾಡಿಗ ಮಹಾಮಂಡಲ), ಎಲ್ ವಿ ಅಮೀನ್ (ಗೌರವಾಧ್ಯಕ್ಷರು, ಬಿಲ್ಲವರ ಎಸೋಸಿಯೇಷನ್ ಮುಂಬೈ), ನಳಿನ್ ಕುಮಾರ್ ಕಟೀಲ್ (ಮಾಜಿ ಸಂಸದರು, ಮಂಗಳೂರು), ಸದಾಶಿವ ಉಳ್ಳಾಲ್ (ಅಧ್ಯಕ್ಷರು, ಮೂಡ) ಉಪಸ್ಥಿತರಿದ್ದರು.


ಗೌರವ ಅತಿಥಿಗಳಾದ ವಾಮನ್ ಇಡ್ಯಾ (ಅಧ್ಯಕ್ಷರು, ಶ್ರೀ ಭಗವತಿ ಕ್ಷೇತ್ರ ಸಸಿಹಿತ್ತ್ಲು), ಗಣೇಶ್ ಕುಂಟಲ್ಪಾಡಿ (ಅಧ್ಯಕ್ಷರು, ಭಗವತಿ ಕ್ಷೇತ್ರ ಕುದ್ರೋಳಿ), ಕೃಷ್ಣ ಎನ್. ಉಚ್ಚಿಲ್ (ಆಡಳಿತ ಮೊಕ್ತೇಸರರು, ಚೀರುಂಬಾ ಭಗವತಿ ಕ್ಷೇತ್ರ ಬೊಳ್ನಾಡು), ವಿಶ್ವನಾಥ ಕುದ್ರು (ಅಧ್ಯಕ್ಷರು, ಕನಿಲ ಭಗವತಿ ಕ್ಷೇತ್ರ, ಮಂಜೇಶ್ವರ), ಚಿದಾನಂದ ಗುರಿಕಾರ ನಂದ್ಯ, (ಅಧ್ಯಕ್ಷರು, ಭಗವತಿ ಕ್ಷೇತ್ರ ಉಳ್ಳಾಲ, ಚಂದ್ರಹಾಸ ಉಳ್ಳಾಲ್, (ಮಾಜಿ ಅಧ್ಯಕ್ಷರು, ಭಗವತಿ ಕ್ಷೇತ್ರ ಉಳ್ಳಾಲ), ರಮಾನಾಥ ಸುವರ್ಣ ಮಂಗಳೂರು (ಆಡಳಿತ ಮೊಕ್ತೇಸರರು, ದುರ್ಗಾಲಕ್ಷ್ಮಿ ದೇವಸ್ಥಾನ ಕುದ್ರೋಳಿ ಕೊಪ್ಪಳ, ಸುನೀಲ್ ಪಾಯಸ್, (ನಿತ್ಯದಾರ್ ಎಲೆಕ್ಟ್ರಿಕಲ್ ವರ್ಕ್ಸ್ ಪ್ರೈ. ಲಿ., ಕೆನರಾ ಪಿಂಟೋ ಟ್ರಾವೆಲ್ಸ್ ಮಂಗಳೂರು), ಮೋನಪ್ಪ ಶೆಟ್ಟಿ ಎಕ್ಕಾರು (ನಿರ್ದೇಶಕರು, ದ.ಕ.ಡ.ಕೆ.ಸ. ಬ್ಯಾಂಕ್ ಮಂಗಳೂರು), ರತ್ನಾಕರ ಶೆಟ್ಟಿ ಎಕ್ಕಾರು (ಮೊಕ್ತೇಸರರು, ಜಾರಂದಾಯ ದೇವಸ್ಥಾನ ಬಡಕರೆ ಎಕ್ಕಾರು), ಈಶ್ವರ ಕಟೀಲ್ (ರಾಷ್ಟ್ರೀಯ ಅಧ್ಯಕ್ಷರು, ಇಂಡಿಯನ್ ಕರಾಟೆ), ದೇವಿ ಪ್ರಸಾದ್ ಶೆಟ್ಟಿ (ಅಧ್ಯಕ್ಷರು, ಅರಸು ಕುಂಜಿರಾಯ ದೇವಸ್ಥಾನ, ಕೊಡೆತ್ತೂರು), ಲೋಕಯ್ಯ ಸಾಲ್ಯಾನ್ (ಕೊಂಡೆಲ್ತಾಯ ದೇವಸ್ಥಾನ ಕೊಂಡೆಲಾ ಕಟೀಲು, ದೇವಿದಾಸ್ ಕಾಮತ್ ಮುಂಬೈ (ಮಾತೋಶ್ರೀ ಅಜಾರು), ಪಿ ವಿ ಮೋಹನ್ ಮತ್ತು ಸುನಿಲ್ ಭಗತ್ (ಸಾಮಾಜಿಕ ಕಾರ್ಯಕರ್ತರು, ಮುಂಬೈ), ಶ್ರೀಮತಿ ಕಸ್ತೂರಿ ಪಂಜ (ಮಾಜಿ ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್), ಶ್ರೀಮತಿ ಯುಲಾಲಿಯಾ ಸಿಕ್ವೇರಾ (ಪುಂಚಮಾರು ಎಕ್ಕಾರು), ಶ್ರೀಮತಿ ಪೂಜಾ ಡಿ ಕಾಮತ್ ಮುಂಬೈ (ಯೋಗ ಶಿಕ್ಷಕರು ಹಾಗೂ ನೃತ್ಯ ತರಬೇತಿದಾರರು), ಶ್ರೀಮತಿ ಗೀತಾ ಪಿ ಕುಂದರ್ ಮತ್ತು ವಿಶ್ವನಾಥ್ ಉಡುಪಿ (ಟಷ್ಟಿಗಳು, ಭಗವತಿ ಕ್ಷೇತ್ರ ಸಸಿಹಿತ್ತ್ಲು), ಪ್ರಸಾದ್ ಅಂಚನ್ (ಮಾಲಕರು, ಅಂಚನ್ ಕೇಟರರ್ಸ್, ಮಂಗಳೂರು), ಭರತ್ ಮಂಗಳೂರು (ಪಿ ಎಫ್ ಆಫೀಸ್, ಮಂಗಳೂರು), ನವೀನ್ ಸುವರ್ಣ (ಎಕ್ಸೈಡ್ ಬ್ಯಾಟರೀಸ್, ಮಂಗಳೂರು) ತಿಮ್ಮಪ್ಪ ಕೋಟ್ಯಾನ್ ಕಟೀಲು (ಮಾಜಿ ತಾಲೂಕು ಪಂಚಾಯತ್ ಸದಸ್ಯರು ಕಟೀಲು), ನೀಲಯ್ಯ ಕೋಟ್ಯಾನ್ ಕಟೀಲು (ಅಧ್ಯಕ್ಷರು, ನಂದಿನಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಕಟೀಲು), ಸಂಜೀವ ಮಡಿವಾಳ (ಅಧ್ಯಕ್ಷರು, ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ಕಟೀಲು) ಕೇಶವ ಕಟೀಲು (ಗೌರವಾಧ್ಯಕ್ಷರು ಕಟೀಲು ಸ್ಪೋರ್ಟ್ಸ್ ಅಂಡ್ ಗೇಮ್ಸ್ ಕ್ಲಬ್) ಪ್ರಕಾಶ್ ಕುಕ್ಯಾನ್ (ಅಧ್ಯಕ್ಷರು, ಬಿಲ್ಲವ ಸಮಾಜ ಎಕ್ಕಾರು-ಪೆರ್ಮುದೆ) ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಂಬೈಯ ಸಂಘಟಕರೂ, ಸಮಾಜ ಸೇವಕರುಗಳಾದ ಚಿತ್ರಾಪು ಕೆ ಎಂ ಕೋಟ್ಯಾನ್, ಜಿ. ಟಿ. ಆಚಾರ್ಯ, ಡಾ. ಪ್ರಕಾಶ್ ಮೂಡಬಿದಿರೆ ಉಪಸ್ಥಿತರಿದ್ದರು.
ಚಂದ್ರಶೇಖರ ಬೆಳ್ಚಡ ಎಲ್ಲರನ್ನು ಸ್ವಾಗತಿಸಿದರು.
ರಾಜೇಂದ್ರ ಎಕ್ಕಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಭಕ್ತಿ ಪಾರಮ್ಯ” ಯಕ್ಷಗಾನ ಪ್ರದರ್ಶನವಿತ್ತು. ಸವಿರಾರು ಮಂದಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು ರಾತ್ರಿ ಅನ್ನ ಸಂತರ್ಪಣೆಯೊಂದಿಗೆ ಯಕ್ಷ ಸುವರ್ಣ ಸಂಭ್ರಮವು ಮುಕ್ತಾಯಗೊಂಡಿತು.



Related posts

ಯುವಕ ಸಂಘ ತೋಕೂರು,ಮಹಿಳಾ ಮಂಡಲ ತೋಕೂರು, ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಗಡಿಪ್ರದಾನ ಸ್ವೀಕರಿಸಿದ ಪಾತ್ರಾಡಿಗುತ್ತು  ಪುಷ್ಪರಾಜ್ ಶೆಟ್ಟಿ ಸಾಮಾನಿ ಗುತ್ತಿನಾರ್ ಗೌರವ,

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಮೂಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯಿಂದ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಮತ್ತು ಕುರ್ಚಿಗಳ ಕೊಡುಗೆ

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ವಿಜ್ಞಾನದಲ್ಲಿ ಪ್ರಯೋಗಶೀಲತೆ ಅತಿ ಮುಖ್ಯ: ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು

Mumbai News Desk