25 C
Mumbai
March 7, 2026
Mumbai News Kannada
ಪ್ರಕಟಣೆ

ದೊಡ್ಡಣ್ಣ ಗುಡ್ಡೆಯ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಮೇ 9 ರಿಂದ ಮೇ 13 ಪ್ರತಿಷ್ಠಾ ವರ್ಧಂತಿ ಮಹೋತ್ಸವ





 


 

 ಉಡುಪಿ ಮೇ 7. ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರತಿಷ್ಠ ವರ್ಧಂತಿ ಮಹೋತ್ಸವವು ಇದೇ ತಿಂಗಳ ತಾರೀಕು 9ರ ಶುಕ್ರವಾರ ಸಾಯಂಕಾಲದಿಂದ ಆರಂಭಗೊಂಡು ತಾರೀಕು 13ರ ಮಧ್ಯಾಹ್ನದವರೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.

 ಆ ಪ್ರಯುಕ್ತ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು ತಾರೀಕು 9ರ ಶುಕ್ರವಾರ ಸಂಜೆ ಗಂಟೆ ಆರರಿಂದ ರಿತ್ವಿಜರ ಆಗಮನ ಸಾಮೂಹಿಕ ಪ್ರಾರ್ಥನೆ ತೋರಣಮಹೂರ್ತ ಉಗ್ರಾಣಮಹೂರ್ತ ವಾಸ್ತು ರಾಕ್ಷೋಜ್ಞಾದಿ ಪ್ರಕ್ರಿಯೆಗಳು 

 ತಾರೀಕು ಹತ್ತರ ಭಾನುವಾರದಂದು ಶ್ರೀ ಕ್ಷೇತ್ರದ ನಾಗಾಲಯದಲ್ಲಿ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಸರ್ವ ಪ್ರಾಯಶ್ಚಿತ ಪೂರ್ವಕ ಆಶ್ಲೇಷ ಬಲಿದಾನ , ವಟು ಆರಾಧನೆ ಬ್ರಹ್ಮಲಿಂಗೇಶ್ವರನ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ, ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಸೂಕ್ತ ಕಲಶಾಭಿಷೇಕ ಪರಿವಾರ ಪೂಜೆ ಪ್ರಸನ್ನ ಪೂಜೆ 

 ಮೇ 10 ರವಿವಾರದಂದು ಶ್ರೀ ದುರ್ಗಾ ಆದಿಶಕ್ತಿ ದೇವಿಯ ಪರಿವಾರ ದೇವರುಗಳಿಗೆ ಕಲಶಾರಾಧನೆ ಸ್ನಪನ ಕಲಶ ಅಭಿಷೇಕ  ಪರಿವಾರ ಪೂಜೆ ಅನ್ನ ಸಂತರ್ಪಣೆ 

 ತಾರೀಕು ಹನ್ನೊಂದು ಹತ್ತರ ಸಂಜೆ ಗಂಟೆ ಆರದಿಂದ ಬ್ರಹ್ಮ ಕಲಶದ ಮಂಡಲ ರಚನೆ, ಭುವನೇಶ್ವರಿ ಪೂಜೆ ಬ್ರಹ್ಮ ಕಲಶಾದಿವಾಸ ಅಧಿವಾಸ ಹೋಮಗಳು 

 ಮೇ 12 ಸೋಮವಾರ ಬೆಳಿಗ್ಗೆ ಗಂಟೆ ಆರರಿಂದ ಸ್ವಸ್ತಿ ಪುಣ್ಯಾಹವಾಚನ ಪಂಚಾಮೃತ ಅಭಿಷೇಕ, ಬೆಳಿಗ್ಗೆ 8.20ಕ್ಕೆ ಒದಗುವ ವೃಷಭ ಲಗ್ನ ಸುಮಹೂರ್ತದಲ್ಲಿ ಶ್ರೀಚಕ್ರ ಪೀಠ ಸುರಪೂಜಿತೆಗೆ ಪಂಚವಂಶತೆ ದ್ರವ್ಯ ಮೀಳಿತ ಅಷ್ಟೋತ್ತರ ಶತ ಬ್ರಹ್ಮಕುಂಬಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಪಲ್ಲಪ ಪೂಜೆ ಮಹಾ ಅನ್ನ ಸಂತರ್ಪಣೆ, ಸಂಜೆ ಗಂಟೆ ಆರರಿಂದ ಆರಾಧನಾ ರಂಗ ಪೂಜಾ ಮಹೋತ್ಸವ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ವಸಂತ ಪೂಜೆ ಅಷ್ಟಾವಧಾನ ಸೇವೆ ರಾತ್ರಿ ಪೂಜೆ ಪ್ರಸಾದ ವಿತರಣೆ 

 ಮೇ 13ರ ಮಂಗಳವಾರ ಬೆಳಿಗ್ಗೆ ಗಂಟೆ 8 ರಿಂದ ಶ್ರೀ   ಆರಾಧನೆ  ಮಹಾಸಂಪ್ರೋಕ್ಷಣೆ ಮಹಾಮಂತ್ರಾಕ್ಷತೆ ಮಹಾ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ  ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ



Related posts

ಕಾಪು ಹೊಸ ಮಾರಿಗುಡಿಯಲ್ಲಿ ಫೆ. 28ರಿಂದ ‘ಪ್ರತಿಷ್ಠಾ ವರ್ಧಂತಿ ಮಹೋತ್ಸವ’: ಶ್ರೀಚಕ್ರ ಯಂತ್ರ ದರ್ಶನಕ್ಕೆ ಅಪರೂಪದ ಅವಕಾಶ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ, ಫೆ. 1ರಂದು 18ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನ. 9ರಂದು ಚೈತನ್ಯ ಕಲಾವಿದರು ಬೈಲೂರು, ಇವರಿಂದ “ಅಷ್ಟೆಮಿ” ತುಳು ನಾಟಕ ಪ್ರದರ್ಶನ.

Mumbai News Desk

ಎ. 12 ರಿಂದ 21- ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾಗೇಟ್, ಶಹಾಡ್, 63 ನೇ, ಮಹಾಪೂಜೆ

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್ – 2026ಕ್ಕೆ ಆಹ್ವಾನ

Mumbai News Desk

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk