32 C
Mumbai
March 7, 2026
Mumbai News Kannada
ಸುದ್ದಿ

ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ಗೆ ಹೊಸ ರೂಲ್ಸ್: ಜುಲೈ 1ರಿಂದ ಆಧಾರ್ ಲಿಂಕ್ ಕಡ್ಡಾಯ





ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯವು ತತ್ಕಾಲ್​ ಟಿಕೆಟ್​ ಬುಕಿಂಗ್ ನಿಯಮಯದಲ್ಲಿ ಹೊಸ ಬದಲಾವಣೆ ಮಾಡಿದೆ. ತತ್ಕಾಲ್​ ಟಿಕೆಟ್​ ಬುಕಿಂಗ್​ ಮಾಡಬೇಕೆಂದರೆ IRCTC ಅಧಿಕೃತ ವೆಬ್​ಸೈಟ್​ ಅಥವಾ ಆ್ಯಪ್​​ ಗೆ ಆಧಾರ್​ ಲಿಂಕ್​ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್​ ಹೊಂದಿರುವ ಬಳಕೆದಾರರು ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್​ ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಈ​ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವಾಲ ತಿಳಿಸಿದೆ.

01-07-2025 ರಿಂದ ಜಾರಿಗೆ ಬರುವಂತೆ ತತ್ಕಾಲ್ ಟಿಕೆಟ್‌ಗಳನ್ನು ಆಧಾರ್ ಲಿಂಕ್​ ಹೊಂದಿರುವ ಬಳಕೆದಾರರು ಮಾತ್ರ ಐಆರ್​ ಟಿಸಿ ವೆಬ್‌ಸೈಟ್ ಅಥವಾ ಅದರ ಆ್ಯಪ್​ ಮೂಲಕ ಬುಕ್ ಮಾಡಬಹುದು. ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.

ಕಂಪ್ಯೂಟರ್​ ಆಧಾರಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಏಜೆಂಟ್​​ಗಳಿಗೆ ತತ್ಕಾಲ್​ ಬುಕಿಂಗ್​ ನಿರ್ಬಂಧ
ಇನ್ನು ತತ್ಕಾಲ್​ ಟಿಕೆಟ್​ ಸಾಮಾನ್ಯ ಜನರಿಗೆ ಸಿಗಲಿ ಎನ್ನುವ ಉದ್ದೇಶದಿಂದ ರೈಲ್ವೆ ಸಚಿವಾಲಯವು ಮಹತ್ತರ ಬದಲಾವಣೆಯೊಂದನ್ನು ತಂದಿದೆ. ಅದೇನೆಂದರೆ, ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್​ಗಳಿಗೆ ತತ್ಕಾಲ್ ಟಿಕೆಟ್​ ಆರಂಭವಾಗುವ ಮೊದಲ 30 ನಿಮಿಷದಲ್ಲಿ ಬುಕಿಂಗ್​ ಮಾಡುವ ಅವಕಾಶವನ್ನು ನಿರ್ಬಂಧಿಸಿದೆ. ಅಂದರೆ ಬೆಳಗ್ಗೆ 10 ರಿಂದ 10.30 ರವರೆಗೆ ಎಸಿ, ಬೆಳಗ್ಗೆ 11 ರಿಂದ 11.30 ರವರೆಗೆ ಆರಂಭವಾಗುವ ನಾನ್ ಎಸಿ ಟಿಕೆಟ್​ ಗಳನ್ನು ಬುಕ್​ ಮಾಡುವುದಕ್ಕೆ ಏಜೆಂಟ್​​ಗಳಿಗೆ ಅವಕಾಶ ನೀಡಿಲ್ಲ. ಈ ಅವಧಿಯಲ್ಲಿ ಆಧಾರ್ ದೃಢೀಕರಿಸಿದವರಿಗೆ ಆದ್ಯತೆ ನೀಡಲಾಗಿದೆ. ಅದೇ ರೀತಿ ಜುಲೈ 15ರಿಂದ ತತ್ಕಾಲ್​​ ನಲ್ಲಿ ಟಿಕೆಟ್​ ಬುಕ್ ಮಾಡಲು ಆಧಾರ್ ಕಾರ್ಡ್ ಒಟಿಪಿ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಒಟಿಪಿ ದೃಢೀಕರಣದ ನಂತರವೇ ಪಿಆರ್ ಎಸ್ ಕೌಂಟರ್​​ ಗಳ ಮೂಲಕ ಬುಕ್ಕಿಂಗ್​ ಮಾಡಲು ತತ್ಕಾಲ್ ಟಿಕೆಟ್ ಲಭ್ಯವಿರುತ್ತವೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.



Related posts

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ವಾರ್ಷಿಕೋತ್ಸವ, 70ನೇ ಕನ್ನಡ ರಾಜ್ಯೋತ್ಸವ ಮತ್ತು ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

Mumbai News Desk

ಬೆಂಗಳೂರು – ಮುಂಬೈ ನಡುವೆ ಸೂಪರ್‌ಫಾಸ್ಟ್‌ ರೈಲು; ಗುಡ್‌ನ್ಯೂಸ್‌ ಕೊಟ್ಟ ಸಂಸದ ತೇಜಸ್ವಿ ಸೂರ್ಯ

Mumbai News Desk

ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ವಿಯೋಗ

Mumbai News Desk

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್.ಕೋಡಿ ತೋಕೂರಿನಲ್ಲಿ ಬೇಸಿಗೆ ಶಿಬಿರ – ಚಿನ್ನರ ಹಬ್ಬ-2025ಕ್ಕೆ ಚಾಲನೆ

Mumbai News Desk

ನಗರದ ಪ್ರಸಿದ್ದ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಮುಂಬೈ – 2024 ಪುರಸ್ಕಾರ.

Mumbai News Desk