30 C
Mumbai
April 24, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತ ಸಮಿತಿಯ ಚುನಾವಣೆ – ಜಯಶಾಲಿಯಾದ “ವಿಶನ್-2030” ಪ್ಯಾನೇಲ್





ಮುಂಬೈಯ ಹಿರಿಯ ಸಾಮಾಜಿಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ 2025-28ರ ಅವಧಿಗೆ ನಡೆದ ಆಡಳಿತ ಮಂಡಳಯ ಚುನಾವಣೆಯಲ್ಲಿ ವಿಶನ್-2030 ಪ್ಯಾನೆಲ್ ನ 24 ಅಭ್ಯರ್ಥಿಗಳು ಜಯಗಳಿಸಿ, ಮುಂದಿನ ಅವಧಿಗೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲಿರುವರು.
ಮಂಡಳಿಯ ನೂತನ ಆಡಳಿ ಮಂಡಳಿಯ ಸದಸ್ಯರ ಆಯ್ಕೆಗಾಗಿ ಜೂನ್ 29ರಂದು, ಅಂಧೇರಿ ಪಶ್ಚಿಮ ಮೊಗವೀರ ಭವನದಲ್ಲಿ ಚುನಾವಣೆ ನಡೆದಿದ್ದು, ಒಟ್ಟು 3055(ಮೂರು ಸಾವಿರದ ಐವತ್ತ ಐದು)ಸದಸ್ಯರು ಮತದಾನ ಮಾಡಿದ್ದರು. ಮತದಾನದ ಬಳಿಕ ಸಂಜೆ 6.30ಕ್ಕೆ ಮತ ಏಣಿಕೆ ಆರಂಭಗೊಂಡು, ಜೂನ್ 30ರ ಬೆಳಿಗ್ಗೆ 6 30 ಗಂಟೆಗೆ ಕೊನೆಗೊಂಡು, ವಿಶನ್-2030 ಬಣ ಜಯಭೇರಿ ಬಾರಿಸಿತು.
ಈ ಬಾರಿಯ ಚುನಾವಣೆಯಲ್ಲಿ ದಿವಂಗತ ಸದಾನಂದ ಕೋಟ್ಯಾನ್ ಅವರ ಗೌರವ ಸ್ಮರಣೆಯೊಂದಿಗೆ, ಮೊಗವೀರ ಸಮಾಜದ ಹೆಮ್ಮೆಯ ನಾಡೋಜ ಜಿ ಶಂಕರ್, ಸಮಾಜದ ಗಣ್ಯರುಗಳಾದ ವೇದ ಪ್ರಕಾಶ್ ಶ್ರೀಯಾನ್, ಸುರೇಶ್ ಕಾಂಚನ್, ಗೋಪಾಲ ಪುತ್ರನ್ ಇವರ ಸಂಪೂರ್ಣ ಬೆಂಬಲದ ‘ವಿಶನ್-2030″ ಪ್ಯಾನೆಲ್ ಮೀನಿನ ಚಿಹ್ನೆಯೊಂದಿಗೆ, ಹಾಗೂ ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿರುವ ಯು ಅರುಣ್ ಕುಮಾರ್ ಅವರ ” ನಮ್ಮ ಮೊಗವೀರ ಮಂಡಳಿ” ಬಣ ಹಣತೆ ಚಿಹ್ನೆಯೊಂದಿಗೆ, ತಲಾ 25 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಸಮಾಜ ಬಾಂಧವರಲ್ಲಿ ಕುತೂಹಲ ಮೂಡಿಸಿತ್ತು.
‘ವಿಶನ್-2030’ ಬಣದಲ್ಲಿ ವರದರಾಜ್ ಶ್ರೀಯಾನ್ ಒಬ್ಬರೇ ಚುನಾವಣೆಯಲ್ಲಿ ಪರಭವಗೊಂಡಿದ್ದು, ‘ನಮ್ಮ ಮೊಗವೀರ ಮಂಡಳಿ’ ಬಣದ ಎಚ್ ಅರುಣ್ ಕುಮಾರ್ 1560 ಮತ ಗಳಿಸಿ ಜಯ ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.

ವಿಶನ್-2030 ಬಣದ ಜಯಗಳಿಸಿದ ಅಭ್ಯರ್ಥಿಗಳು ಮತ್ತು ಅವರು ಗಳಿಸಿದ ಮತಗಳು

  1. ದಯಾವತಿ ಎಂ ಸುವರ್ಣ – 1753
  2. ಪ್ರೀತಿ ಎಚ್ ಶ್ರೀಯಾನ್ – 1687
  3. ದಿಲೀಪ್ ಕುಮಾರ್ ಮೂಲ್ಕಿ – 1666
  4. ಗಣೇಶ ಕೆ ಕಾಂಚನ್ – 1653
  5. ಹರೀಶ್ ಡಿ ಸುವರ್ಣ – 1645
  6. ದೇವರಾಜ್ ಕುಂದರ್ – 1644
  7. ದಾಮೋದರ ಬಿ ಪುತ್ರನ್ – 1635
  8. ಧರ್ಮೇಶ್ ಜಿ ಪುತ್ರನ್ – 1623
  9. ಕುಮಾರ್ ಮೆಂಡನ್ – 1618
  10. ಬಿ ಕೆ ಪ್ರಕಾಶ್ 7 1613
  11. ಹೇಮಲತಾ ಶಶಿಂದ್ರ – 1609
  12. ಕಿರಣ್ ಮೆಂಡನ್ – 1605
  13. ಪ್ರಜ್ವಲ್ ಸಾಲ್ಯಾನ್ – 1602
  14. ಚಂದ್ರಕಾಂತ್ ಸಾಲಿಯಾನ್ – 1600
  15. ಪ್ರಮೋದ್ ಕುಮಾರ್ – 1600
  16. ಚಂದ್ರಶೇಖರ್ ಕರ್ಕೇರ – 1599
  17. ಪ್ರಶಾಂತ್ ಎ ತಿಂಗಳಾಯ – 1599
  18. ಪುರುಷೋತ್ತಮ್ ಎಲ್ ಕರ್ಕೇರ – 1586
  19. ಮನ್ಮೋಹನ ಯ ಕರ್ಕೇರ – 1584
  20. ಮಹೇಂದ್ರ ಜಿ ಕುಂದರ್- 1583
  21. ರವಿರಾಜ್ ಎಚ್ ಕುಂದರ್ 1569
  22. ರಾಜೇಶ್ ಎಸ್ ಪುತ್ರನ್ – 1542
  23. ವಜ್ರಕಾಂತ್ ಕುಂದರ್ – 1530
  24. ಸಂತೋಷ್ ಬಿ ಕೋಟ್ಯಾನ್ – 1510.


Related posts

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಸಾಂತಾಕ್ರೂಸ್ ಶ್ರೀ ಮಂತ್ರದೇವಿ ದೇವಸ್ಥಾನದ ವಾರ್ಷಿಕ ಮಹಾಪೂಜೆ ಸಂಪನ್ನ,

Mumbai News Desk

ಮಹಾರಾಷ್ಟ್ರ ಮಾನವ ಸೇವಾ ಸಂಘ ದಹಿಸರ್ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ

Mumbai News Desk

ಕರ್ನಾಟಕ ಸಂಘ ಮುಂಬಯಿ ವತಿಯಿಂದ ಉದ್ಯಮಿ ಉದಯ ಶೆಟ್ಟಿ ಅವರ ಭೇಟಿ.

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ಬೋರಿವಲಿ ಪಶ್ಚಿಮದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk