30 C
Mumbai
April 24, 2026
Mumbai News Kannada
ಸುದ್ದಿ

ಸಿ.ಎಮ್.ಎ. ಪರೀಕ್ಷೆಯಲ್ಲಿ ಸೃಷ್ಟಿ ಹಳೆಯಂಗಡಿಗೆ ದೇಶದಲ್ಲೇ 21 ನೇ ಶ್ರೇಣಿ ರಾಷ್ಟ್ರಪತಿಯಿಂದ ಪ್ರಮಾಣ ಪತ್ರ ಸ್ವೀಕಾರ





ಮುಂಬಯಿ : ಕ್ರೀಡೆಯೊಂದಿಗೆ ಶೈಕ್ಷಣಿಕ ಸಾಧನೆ ಗೈಯ್ಯುತ್ತಿರುವ ಸೃಷ್ಟಿ ಹಳೆಯಂಗಡಿ ಕೋಸ್ಟ್ ಆಂಡ್ ಮೆನೇಜ್ಮೆಂಟ್ ಅಕೌಂಟ್ ಸಿ.ಎಮ್.ಎ. ನಲ್ಲಿ ದೇಶದಲ್ಲೇ 21ನೇ ರಾಂಕ್ ಹಾಗೂ ಮುಂಬೈಯಲ್ಲಿ ಎರಡನೇ ರಾಂಕ್ ಪಡೆದು ಉತ್ತೀರ್ಣಳಾಗಿ ಸಾಧನೆಯನ್ನು ಮಾಡಿರುವಳು. ಜೂ. 23 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ಜರಗಿದ 12ನೇ ರಾಷ್ಟ್ರೀಯ ವಿದ್ಯಾರ್ಥಿ ಘಟಿಕೋತ್ಸವ -2025 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.

ಈಗಾಗಲೇ ಟೇಬಲ್ ಟೆನ್ನಿಸ್ ನಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ಈಕೆ ಕ್ರೀಡೆಯೊಂದಿಗೆ ಶೈಕ್ಷಣೆಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾಳೆ. ತನ್ನ ಏಳನೆಯ ಹರೆಯದಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಪ್ರತಿಭೆಯನ್ನು ಸಾಧಿಸಿದ ಸೃಷ್ಟಿ ಹಳೆಯಂಗಡಿ ಅಂದಿನಿಂದ ಈ ತನಕ ಟೇಬಲ್ ಟೆನ್ನಿಸ್ ನಲ್ಲಿ ಒಟ್ಟು 194 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಳು ಮಾತ್ರವಲ್ಲದೆ, ಈ ಕ್ರೀಡೆಯಲ್ಲಿ ಕಾಲೇಜು ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಶಿಫ್ ಗಳಿಸಿದ್ದಾಳೆ.

ಈಕೆ ನಗರದ ರಾಷ್ಟ್ರೀಯ ಬ್ಯಾಕೊಂದರ ನಿವೃತ್ತ ಉನ್ನತ ಅಧಿಕಾರಿ, ದಹಿಸರಿನ ಸುರೇಂದ್ರನಾಥ ಹಳೆಯಂಗಡಿ ಮತ್ತು ಹೇಮಾ ಹಳೆಯಂಗಡಿ ಇವರ ಸುಪುತ್ರಿ.



Related posts

ರಾಕ್ಷಸ ಪಾತ್ರಗಳಲ್ಲಿ ಮೆರೆದು, ಯಕ್ಷರಂಗದಲ್ಲಿ ಮಿಂಚಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

Mumbai News Desk

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಡ್ರಾಮಾ ಜ್ಯೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

Mumbai News Desk

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಜೀವಿತ್ ಬಿ ಕುಲಾಲ್  88.50 ಅಂಕ

Mumbai News Desk