32 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಆದಿವಾಸಿ ಶಾಲೆಗೆ ಭೇಟಿ, ಪುಸ್ತಕ, ಇತರ ಸಾಮಗ್ರಿ ವಿತರಣೆ






ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕಲ್ಯಾಣ್ ನ ಮುರ್ಬಾಡ್ 5 ಆದಿವಾಸಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ನೂರಾರು ವಿದ್ಯಾರ್ಥಿಗಳಿಗೆ ಪುಸ್ತಕ, ತಿಂಡಿ ತಿನಿಸು,ಶಾಲಾ ಬ್ಯಾಗ್ ಹಾಗೂ ಹಾಗೂ ಮತ್ತಿತರ ಸಾಮಗ್ರಿಗಳನ್ನು ವಿತರಿಸಲಾಯಿತು.ಹಾಗೂ ಅಲ್ಲಿಯ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಅನ್ನದಾನ ನೀಡಲಾಯಿತು.


ಶ್ರೀ ಜಗದಂಬಾ ಮಂದಿರದ ಯುವ ಯುವ ವಿಭಾಗವು ಕಳೆದ ಏಳು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದು ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ರೂವಾರಿಯಾದ ಪ್ರಸಾದ್ ದೇವಾಡಿಗ, ಸಚಿನ್ ದೇವಾಡಿಗ ಅಕ್ಷಯ್ ಶೆಟ್ಟಿ,ಪ್ರಕಾಶ್ ಸಾಲ್ಯಾನ್, ರತನ್ ಪೂಜಾರಿ ಅವರ ನೇತೃತ್ವದಲ್ಲಿ, ಮಂದಿರದ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಸಂತೋಷ ಶೆಟ್ಟಿ, ಜೊತೆ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಹಾಗೂ ಮಂದಿರದ ಸದಸ್ಯ ದಿನೇಶ್ ಪೂಜಾರಿ ಹಾಗೂ ಯುವ ವಿಭಾಗದ ಅನೇಕ ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀ ಜಗದಂಬಾ ಮಂದಿರದ ಸದಸ್ಯರು, ದಾನಿಗಳು ಹಾಗೂ ಅನೇಕ ಡೊಂಬಿವಲಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಹಕರಿಸಿದರು.


ಈ ಸಂದರ್ಭ ಶಾಲೆಯ ವತಿಯಿಂದ ಪ್ರಸಾದ್ ದೇವಾಡಿಗ, ರಾಜೇಶ್ ಕೋಟ್ಯಾನ್ ಹಾಗೂ ದಿನೇಶ್ ಪೂಜಾರಿಯವರನ್ನು ಗೌರವಿಸಲಾಯಿತು. ಚಿನ್ಮಯ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.



Related posts

ಚಾರ್ಕೋಪ್ ಕನ್ನಡ ಬಳಗದ ಮಹಿಳೆಯರಿಂದ “ಅಷ್ಟವಿನಾಯಕ ಯಾತ್ರೆ”

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧೀಶ ಧನಂಜಯ ಪೂಜಾರಿಗೆ ಶೇ 89.20 ಅಂಕ.

Mumbai News Desk

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk