ಸುದ್ದಿ ವಿವರ : ಪಿ.ಆರ್.ರವಿಶಂಕರ್
ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯ ಬೊಯಿಸರ್ ಪಶ್ಚಿಮದಲ್ಲಿನ ಸುಪ್ರಸಿದ್ಧ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಇದೇ ಬರುವ
ತಾ.10 ಜುಲೈ 2025 ರ ಗುರುವಾರ ಆಷಾಢ ಪೂರ್ಣಿಮೆಯಂದು ಗುರುಪೂರ್ಣಿಮೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಪ್ರಾತಃಕಾಲ 6.30 ಕ್ಕೆ ಕಳಶ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ 7 ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಗುರುದೇವರಿಗೆ ಸರ್ವಭಕ್ತಾದಿಗಳಿಂದ ಸೀಯಾಳ ಅಭಿಷೇಕ ಜರಗಲಿದೆ.
8. ಕ್ಕೆ ಪ್ರಾತಃ ಆರತಿಯ ಬಳಿಕ 9.30 ಕ್ಕೆ ವಿವಿಧ ಭಜನಾ ವೃಂದದವರಿಂದ ಭಕ್ತಿ ಗೀತೆ ಭಜನಾ ಕಾರ್ಯಕ್ರಮವಿದೆ. ಮದ್ಯಾಹ್ನ
12.00 ಕ್ಕೆ ವಿಶೇಷ ಗುರುಪೂಜೆ ಜರಗಲಿದ್ದು ಮಂಗಳ ಆರತಿಯ ಬಳಿಕ ಪ್ರಸಾದ ವಿತರಣೆ (ಅನ್ನ ಸಂತರ್ಪಣೆ) ಜರಗಲಿದೆ.
ಭಕ್ತಾಭಿಮಾನಿಗಳೆಲ್ಲರೂ ಸಹಕುಟುಂಬ ಬಂಧುಮಿತ್ರರೊಡಗೂಡಿ ಕಾರ್ಯಕ್ರಮಕ್ಕೆ
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಗುರುವಿನ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಸದ್ಗುರು ಭಗವಾನ್ ಶ್ರೀ ಸ್ವಾಮಿ ನಿತ್ಯಾನಂದ ಗುರುದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಭಕ್ತವೃಂದದ ಸರ್ವ ಸದಸ್ಯರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್
8483980035




