
ಜ್ಯೋತಿ ಸುವರ್ಣ , ಬದುಕಲ್ಲಿ ತನಗೋಸ್ಕರ ಬದುಕದೆ ಇತರರ ಖುಷಿಗೆ ಸ್ಪಂದಿಸಿದವರು: – ನಿತ್ಯಾನಂದ ಡಿ ಕೋಟ್ಯಾನ್
ಮುಂಬಯಿ ಜು13. ಅಲ್ಪ ಕಾಲದ ಅಸೌಖ್ಯದಿಂದಾಗಿ ಜುಲೈ 8 ರಂದು ತನ್ನ ಊರಾದ ಕಟಪಾಡಿ ಏಣಗುಡ್ಡೆಯಲ್ಲಿ ನಿಧನರಾದ ಬಿಲ್ಲವರ ಎಸೋಸಿಯೇಷನ್ ನಂ ಸಕ್ರಿಯ ಕಾರ್ಯಕರ್ತೆ, ಮಾಜಿ ಉದ್ಯೋಗಿ, ಜಯ ಸಿ ಸುವರ್ಣ ಅಭಿಮಾನಿಯಾಗಿದ್ದ ಜ್ಯೋತಿ ಆರ್ ಸುವರ್ಣರಿಗೆ ಗೊರೇಗಾವ್ ಪೂರ್ವದ ಸಹಕಾರವಾಡಿಯ ನಿತ್ಯಾನಂದ ಆಶ್ರಮದಲ್ಲಿ ಜು 12. ರಂದು ನುಡಿ ನಮನ, ಶ್ರದ್ದಾಂಜಲಿ ಸಭೆ ನಡೆಯಿತು.
ನುಡಿ ನಮನ ಸಭೆಯಲ್ಲಿ ನಂದಿ ಹೋದ ಜ್ಯೋತಿ ಸುವರ್ಣರ ಆತ್ಮ ಜ್ಯೋತಿಗೆ ಹಿರಿಯರಾದ ಸಮಾಜ ಸೇವಕಿ ಪ್ರಭಾ ಏನ್ ಸುವರ್ಣರು, ಬಿಲ್ಲವರ ಎಸೋಸಿಯೇಷನ್ ನ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ,, ಭಾಯಂದರ್ ಗುರು ನಾರಾಯಣ ಭಜನಾ ಮಂಡಳಿಯ ಕಾರ್ಯದರ್ಶಿ ಮಾಲತಿ ಕೆ ಬಂಗೇರ, ದೀಪ್ತಿ ಯೋಗೇಶ್ ಸುವರ್ಣ ಹಾಗೂ ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳು ಜ್ಯೋತಿ ಬೆಳಗಿಸಿ ಶ್ರದ್ದಾಂಜಲಿ ಸಭೆಗೆ ಚಾಲನೆ ನೀಡಿದರು.
ಜ್ಯೋತಿಯವರು ಮಣ್ಣಾಗುವ ವರೆಗೂ ಮಾನವರಾಗಿ ಬದುಕಿದರು, ಅವರು ಬದುಕಲ್ಲಿ ತನಗೋಸ್ಕರ ಬದುಕದೆ ಇತರರ ಖುಷಿಗೆ ಸ್ಪಂದಿಸಿದವರು, ಜೀವನದಲ್ಲಿ ಹಲವಾರು ಕನಸುಗಳನ್ನು ಹೊತ್ತುಕೊಂಡು ತನ್ನ ಆತ್ಮ ಸಾಕ್ಷಿಗೆ ಒಪ್ಪುವಂತೆ ಬದುಕನ್ನು ಕಟ್ಟಿಕೊಂಡು ಬೆವರು ಸುರಿಸಿ ಕಷ್ಟ ಪಟ್ಟು ದುಡಿಯುತ್ತಿದ್ದ ಜ್ಯೋತಿ ನಮ್ಮೆಲ್ಲರನ್ನೂ ಅಗಲಿದ್ದಾರೆ, ಅವರ ಜೀವನದಲ್ಲಿ ಹಲವು ಕನಸು ನನಸಾಗುವಲ್ಲಿ ನಾವು ಸಹಕರಿಸಿದ್ದೇವೆ, ಇನ್ನು ಮುಂದೆಯೂ ಮಕ್ಕಳಿಗೆ, ಕುಟುಂಭಕ್ಕೆ ನಮ್ಮಿಂದ ಆಗುವ ಸಹಾಯ ಮಾಡೋಣ ಎಂದು ಬಿಲ್ಲವರ ಎಸೋಸಿಯೇಷನ್ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ನುಡಿ ನಮನದಲ್ಲಿ ನುಡಿದರು. ಜ್ಯೋತಿಯವರು ನಮ್ಮ ಜೀವನದಲ್ಲಿ ತಾತ್ಕಾಲಿಕ ಪರಿಚಯ ಅಷ್ಟೇ ಆದರೆ ಅವರ ಒಳ್ಳೆಯ ಸಂಸ್ಕಾರ ಗುಣದ ವ್ಯಕ್ತಿತ್ವದಿಂದಾಗಿ ಅವರು ನಮ್ಮ ಜೀವನದಲ್ಲಿ ಮರೆಯಲಾಗದ ಒಂದು ಶಾಶ್ವತ ನೆನಪು ಎಂದು ಹೇಳಿ ಭಾರತ್ ಬ್ಯಾಂಕ್ ಉಪ ಕಾರ್ಯಧ್ಯಕ್ಷರಾದ ಅಡ್ವೋಕೇಟ್ ಸೋಮನಾಥ್ ಅಮೀನ್ ಶ್ರದ್ದಾಂಜಲಿ ಅರ್ಪಿಸಿದರು.
ಈ ಸಂಧರ್ಭದಲ್ಲಿ ಭಾರತ್ ಬ್ಯಾಂಕ್ ನ ನಿರ್ದೇಶಕರುಗಳಾದ ಚಂದ್ರಶೇಖರ್ ಪೂಜಾರಿ, ಭಾಸ್ಕರ್ ಎಂ ಸಾಲ್ಯಾನ್, ಗಂಗಾಧರ್ ಜೆ ಪೂಜಾರಿ, ಮೋಹನ್ ದಾಸ್ ಪೂಜಾರಿ ನುಡಿ ನಮನ ಸಲ್ಲಿಸಿದರೆ, ಹಿರಿಯ ಸಮಾಜ ಸೇವಕಿ ಪ್ರಭಾ ಏನ್ ಸುವರ್ಣ, ಸಬಿತ ಜಿ ಪೂಜಾರಿ, ಮಾಲತಿ ಬಂಗೇರ, ದೀಪ್ತಿ ಯೋಗೇಶ್ ಸುವರ್ಣ . ಶಶಿಕಲಾ ಕೋಟ್ಯಾನ್, ಬಬಿತ ಕೋಟ್ಯಾನ್, ಪುಷ್ಪ ಸುವರ್ಣ, ನಿಕಿತಾ ಇವರೆಲ್ಲರೂ ಜ್ಯೋತಿಯಲ್ಲಿದ್ದ ಗೃಹ ಲಕ್ಷ್ಮಿಯ ಗುಣ ಕೊಂಡಾಡಿ ಅವರ ವ್ಯಕ್ತಿತ್ವದ ಎಲ್ಲಾ ವಿಷಯಗಳನ್ನು ತಿಳಿಸಿ, ಭಾವೈಕ್ಯರಾಗಿ ಶ್ರದ್ದಾಂಜಲಿ ಅರ್ಪಿಸಿದರು.
ಬಿಲ್ಲವರ ಎಸೋಸಿಯೇಷನ್ ನ ಗುರುನಾರಾಯಣ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ಗಣೇಶ್ ಶೆಟ್ಟಿ, ಎಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಗಳಾದ ಧನಂಜಯ್ ಕೋಟ್ಯಾನ್, ರವೀಂದ್ರ ಶಾಂತಿ, ಮಾಜಿ ಜತೆ ಕಾರ್ಯದರ್ಶಿಗಳಾದ ಸದಾಶಿವ್ ಕರ್ಕೇರ, ಅಕ್ಷಯ್ ಪೂಜಾರಿ, ಅಶೋಕ್ ಸಸಿಹಿತ್ಲು, ಜಯ ಸಿ ಸುವರ್ಣ ಅಭಿಮಾನಿಗಳ ಸುವರ್ಣ ಸೇತು ತಂಡದ ಪರವಾಗಿ ಗಣೇಶ್ ಪೂಜಾರಿ ನುಡಿನಮನ ಸಲ್ಲಿಸಿದರು.
ಜ್ಯೋತಿ ಸುವರ್ಣರು ಒಳ್ಳೆ ನಡತೆ, ಗುಣ ಸಂಸ್ಕಾರ, ಸತ್ಯತೆ ಬದುಕಿನಲ್ಲಿ ಕಾಪಾಡಿಕೊಂಡು ಬಂದಿದ್ದರಿಂದ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮುಂಬೈಯ ಹೆಚ್ಚಿನ ಬಿಲ್ಲವರು, ಜಯ ಸುವರ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.
ಮುಂಬೈ ಬಿಲ್ಲವರು ಹಾಗೂ ಜಯ ಸುವರ್ಣ ಅಭಿಮಾನಿಗಳು ಒಂದು ತಳಮಟ್ಟದ ಸಮಾಜ ಸೇವಕಿಗೆ ನೀಡಿದ ಗೌರವ, ಶ್ರದ್ದಾಂಜಲಿ ಕಿಕ್ಕಿರಿದ ಸಮಾಜ ಬಾಂಧವರೊಂದಿಗೆ ತುಂಬಾ ಅರ್ಥಪೂರ್ಣ ವಾಗಿತ್ತು
B. Dinesh Kulal
Mob.: 9821868674




