
ಕರ್ನಾಟಕ ಸಂಘ ಕಲ್ಯಾಣ್ ಇದರ 22ನೇ ವಾರ್ಷಿಕ ಮಹಾಸಭೆಯು ಜುಲೈ 13 ರಂದು ಸಂಜೆ, ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷರಾದ ಕೆ ಎನ್ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ 24 – 25 ರ ಪರಿಷ್ಕೖತ ಲೆಕ್ಕ ಪತ್ರಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹಾಗೂ 2025 – 2026 ಅವಧಿಗೆ ಸಿ. ಎಮ್. ಲಾಡ್ ಎಸೋಸಿಯೇಟ್ಸ್ ಮತ್ತು ಸುಭ್ರಮಣ್ಯಮ್ ಐಯರ್ ರವರನ್ನು ಭಾಹ್ಯ ಹಾಗೂ ಆಂತರಿಕ ಲೆಕ್ಕಪತ್ರ ಪರೀಷ್ಕರರನ್ನಾಗಿ ನೇಮಿಸಲಾಯಿತು.
ಅಧ್ಯಕ್ಷರಾದ ಕೆ. ಎನ್. ಸತೀಶ್ ಮಾತನಾಡುತ್ತಾ ಇತ್ತೀಚೆಗೆ ದೈವಾಧೀನರಾದ ಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ, ಪೂರ್ವ ಅಧ್ಯಕ್ಷ ಟಿ. ಎಸ್. ಉಪಾಧ್ಯಾಯ ಹಾಗೂ ಪೂರ್ವ ಜನ ಸಂಪರ್ಕ ಅಧಿಕಾರಿ ಶ್ರೀಧರ ಕುಲಕರ್ಣಿಯವರಿಗೆ ನಮನಗಳನ್ನು ಸಲ್ಲಿಸಿದರಲ್ಲದೆ ಸಂಘದ ಅಭಿವೃದ್ಧಿಯ ಬಗ್ಗೆ ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಜೊತೆಗೆ ಮುಂಬರುವ ಸಂಘದ ಬೆಳ್ಳಿ ಹಬ್ಬದ ಪೂರ್ವಾಭಾವಿ ತಯಾರಿಯ ಬಗ್ಗೆ ಸಲಹೆ ನೀಡಿದರು.
ಈಗಿನ ಕಾರ್ಯಕಾರಿ ಸಮಿತಿಯ ಅವಧಿ ಮುಗಿದಿದ್ದು ನವ ಕಾರ್ಯಕಾರಿ ಸಮಿತಿಯ ನೇಮಕದ ಪ್ರಕ್ರೀಯೆ ಪೂರ್ಣ ಗೊಂಡಿದ್ದು 2025 – 2027 ಅವಧಿಯ ನವ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು.ದರು. ಜಯಂತ ದೇಶಮುಖ್ ಅಧ್ಯಕ್ಷರನ್ನಾಗಿ, ಜಯಂತಿ ಹೆಗ್ಡೆಯವರನ್ನು ಉಪಾಧ್ಯಕ್ಷರನ್ನಾಗಿ, ವಿಜಯ್ ಪೈಯವರನ್ನು ಗೌರವ ಕಾರ್ಯದರ್ಶಿಯಾಗಿ, ಗಣೇಶ ಪೈಯವರನ್ನು ಕೋಶಾಧಿಕೋರಿಯಾಗಿ ಹಾಗೂ ವೀಣಾ ಕಾಮತ್ ರವರನ್ನು ಮಹಿಳಾಧ್ಯಕ್ಷೆಯಾಗಿ ನಿಯುಕ್ತಿ ಮಾಡಲಾಯಿತು. ಜೊತೆಗೆ ಶ್ರೀಧರ ಹಿಂದೂ ಪೂರ್ ರವರನ್ನು ಸಂಘದ ಮುಖವಾಣಿ ‘ಕಲ್ಯಾಣ ದರ್ಪಣ’ದ ಸಂಪಾದಕರಾಗಿ ಹಾಗೂ ಜನ ಸಂಪರ್ಕ ಅಧಿಕಾರಿಯಾಗಿ, ಶ್ರೀಮತಿ ವಿಭಾ ದೇಶಮುಖರವರನ್ನು ಉಪ ಕಾರ್ಯದರ್ಶಿಯಾಗಿ,ಶ್ರೀಮತಿ ಆಶಾ ನಾಯಕ್ ರವರನ್ನು ಸ್ವರ ಕಲಾವೇದಿಕೆಯ ಕಾರ್ಯಾಧ್ಯಕ್ಷೆಯಾಗಿ ಹಾಗೂ ಶ್ರೀಮತಿ ಪ್ರಸನ್ನ ಹೆಗ್ಡೆಯವರನ್ನು ಯುವ ವಿಭಾಗದ ಪ್ರತಿನಿಧಿಯಾಗಿ ನೇಮಿಸಲಾಗಿದೆಯೆಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




