July 23, 2026
Mumbai News Kannada
ಸುದ್ದಿ

ನವಿ ಮುಂಬೈ – ಪ್ರಮುಖ ಪೈಪ್ ಲೈನ್ ಕಾಮಗಾರಿಗಾಗಿ ಜುಲೈ 18 – 19ರಂದು 18 ಗಂಟೆಗಳ ಕಾಲ ನೀರು ಸರಬರಾಜು ಕಡಿತ








ನವಿ ಮುಂಬೈ ಮನ್ಸಿಪಲ್ ಕಾರ್ಪೊರೇಷನ್ (NMMC) ಪ್ರದೇಶಕ್ಕೆ ನೀರು ಸರಬರಾಜು ಮಾಡುವ 1700 ಮಿಮೀ ವ್ಯಾಸದ ಮೋಬ್ರೆ ಮುಖ್ಯ ನೀರಿನ ಪೈಪ್ ಲೈನ್, ಪಾಮ್ ಬೀಚ್ ರಸ್ತೆಯಲಿದೆ. ನೆರೂಲ್ ನ ಸೆಕ್ಟರ್ 46ರ ಅಕ್ಷರ್ ಕಟ್ಟಡದ ಬಳಿ ಆಗಾಗ್ಗೆ ಸೋರಿಕೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಪೀಡಿತ ಪ್ರದೇಶದಲ್ಲಿ ಹೊಸ ಪೈಪ್ ಲೈನ್ ಅನ್ನು ಹಾಕಲಾಗಿದೆ. ಹೊಸ ಪೈಪ್ ಲೈನ್ ಅನ್ನು ಹಳೆಯ ಪೈಪ್ ಲೈನ್ ಗೆ ಎರಡು ತುದಿಗಳಲ್ಲಿ ಸಂಪರ್ಕಿಸುವ ಕೆಲಸವನ್ನು ಶುಕ್ರವಾರ ಜುಲೈ 18ರಂದು ಮಾಡಲಾಗುವುದು.
ಪರಿಣಾಮವಾಗಿ ಜುಲೈ 18, 2025ರ ಶುಕ್ರವಾರ ಬೆಳಿಗ್ಗೆ 10 ರಿಂದ ಜುಲೈ 19, 2025ರ ಶನಿವಾರ ಬೆಳಿಗ್ಗೆ 4:00ರ ವರೆಗೆ 18 ಗಂಟೆಗಳ ಕಾಲ ಮುಖ್ಯ ಪೈಪಲೈನ್ ನಿಂದ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಈ ಅವಧಿಯಲ್ಲಿ ಬೇಲಾಪುರ, ನೆರೂಲ್, ವಾಶಿ, ತುರ್ಬೆ, ಸಾನ್ಪಾಡ, ಕೊಪರ್ಖರ್ನೆ, ಘಂನ್ಸೋಲಿ, ಐರೋಲಿಯಲ್ಲಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಅಲ್ಲದೆ ಮುಖ್ಯ ಪೈಪಲೈನ್ ನಿಂದ ನೇರ ನೀರಿನ ಸಂಪರ್ಕ ಹೊಂದಿರುವ ಪ್ರದೇಶಗಳು ಮತ್ತು ಖಾರ್ಗರ್, ಕಾಮೋಥೆ ಯಂತಹ ಸಿಡ್ಕೋ ವಲಯಗಳು ಸಹ ಪರಿಣಾಮ ಬೀರುತ್ತವೆ.
ಜುಲೈ 18 ಶುಕ್ರವಾರ ಸಂಜೆ ಮತ್ತು ಜುಲೈ 19 ಶನಿವಾರ ಬೆಳಗ್ಗೆ ನೀರು ಸರಬರಾಜು ಇರುವುದಿಲ್ಲ, ಜುಲೈ 19 ಶನಿವಾರ ಸಂಜೆ ನಿವಾಸಿಗಳು ಕಡಿಮೆ ಒತ್ತಡ ಅಥವಾ ಅಸಮರ್ಪಕ ನೀರು ಸರಬರಾಜನ್ನು ಎದುರಿಸಬಹುದು. ಈ ಅವಧಿಯಲ್ಲಿ ನಾಗರಿಕರು ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ನವಿ ಮುಂಬೈ ಮನ್ಸಿಪಲ್ ಕಾರ್ಪೊರೇಷನ್ ವಿನಂತಿಸಿದೆ.



Related posts

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

Mumbai News Desk

ಮಹಾರಾಷ್ಟ್ರ: ಎಚ್ ಎಸ್ ಸಿ ಫಲಿತಾಂಶ : ನಿಧಿಶಾ ಡಿ. ಪೂಜಾರಿ ಗೆ ಶೇ.91.67ಅಂಕ

Mumbai News Desk

ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ವಿಯೋಗ

Mumbai News Desk

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಮಾತೃ ವಿಯೋಗ.

Mumbai News Desk

ಜುಲೈ 9 : ಗಣೇಶಪುರಿಯಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಗಳ ಮೂರ್ತಿ ಪುನರ್ ಪ್ರತಿಷ್ಠಾಪನೋತ್ಸವ: ಭಕ್ತರಿಗೆ ಅಪೂರ್ವ ದರ್ಶನದ ಸೌಭಾಗ್ಯ

Mumbai News Desk