September 6, 2026
Mumbai News Kannada
ಸುದ್ದಿ

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಧರಣಿ ಎಚ್ಚರಿಕೆಯ ಬಳಿಕ, ಪರಿಶೀಲನೆ ನಡೆಸಿದ ಬೆಂಗಳೂರು ಪ್ರಾದೇಶಿಕ ಅಧಿಕಾರಿ





ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂತೆಕಟ್ಟೆ ಅಂಡರ್ ಪಾಸ್ ಅವ್ಯವಸ್ಥೆ, ಕಾಪು ಕ್ಷೇತ್ರದ ಉಚ್ಚಿಲ ಪೇಟೆಯಲ್ಲಿ ನಿರಂತರ ಅಪಘಾತ, ವಿಪರೀತ ಸಾವು – ನೋವುಗಳ ಬಗ್ಗೆ ನಿರಂತರವಾಗಿ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯುತ್ತಿದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳ ವಿಳಂಬ ನೀತಿ ವಿರೋಧಿಸಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಅಧಿಕಾರಿಯ ಕಚೇರಿ ಎದುರು ಧರಣಿ ನಡೆಸುವುದಾಗಿ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರಿದ ಅಧಿಕಾರಿಗಳು ಇಂದು ಬೆಳಿಗ್ಗೆ ಉಡುಪಿಗೆ ಬಂದು ಸಂಸದ ಕೋಟ ಮತ್ತು ಜಿಲ್ಲಾಡಳಿತದ ಜೊತೆ ಸ್ಥಳದಲ್ಲಿ ಸಮಗ್ರ ಚರ್ಚೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳ ತಂಡ ಕಲ್ಯಾಣ್ ಪುರ, ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಎಡ ಮತ್ತು ಕುಂದಾಪುರದಿಂದ ಉಡುಪಿ ಕಡೆ ಬರುವ ಬಲ ಮೇಲ್ಸೇತುವೆಯ ರಸ್ತೆಗಳನ್ನು ತುರ್ತು ಡಾಮರಿಕರಣ ಮಾಡುವುದಾಗಿ ಒಪ್ಪಿದರು. ತಳಭಾಗದ ಮುಖ್ಯ ರಸ್ತೆಯನ್ನು ಎರಡು ದಿನಗಳ ಒಳಗೆ ಡಾಮರಿಕರಣ ಪೂರ್ಣ ಮಾಡುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರ ರಸ್ತೆಯನ್ನು ತುತ್ತಾಗಿ ಜನರ ಓಡಾಟಕ್ಕೆ ಸಮರ್ಪಕಗೊಳಿಸಿದರೆ ತನ್ನ ಅಭ್ಯಂತರ ಇಲ್ಲ ಎಂದು ಸಂಸದರು ತಿಳಿಸಿ ವಾಹನ ಸಂಚಾರದ ವ್ಯವಸ್ಥೆ ಸರಿಪಡಿಸಲು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಡ ಕಾಪವಿನ ಬಳಿ ಉಚ್ಚಿಲ ಬಸ್ ನಿಲ್ದಾಣದ ಕ್ರಾಸಿಂಗ್ ನಲ್ಲಿ ಅವ್ಯವಸ್ಥೆ, ಮೂಳೂರು ಶಾಲೆ ಬಳಿ ಅವೈಜ್ಞಾನಿಕ ಯು ಟರ್ನ್, ರಾಷ್ಟ್ರೀಯ ಹೆದ್ದಾರಿಯ ದಾರಿದೀಪದ ಸಮಸ್ಯೆ, ಸರ್ವಿಸ್ ರೋಡಲ್ಲಿ ಹಂಪ್ ಗಳ ನಿರ್ಮಾಣ, ರಸ್ತೆ ಬಳಿಯ ಒಳಚರಂಡಿ ಅವ್ಯವಸ್ಥೆ, ಮಹಾಲಕ್ಷ್ಮಿ ದೇವಸ್ಥಾನದ ಬಳಿ ಶಾಲಾ ವಲಯದಲ್ಲಿ ಅಂಡರ್ ಪಾಸ್ ಬೇಡಿಕೆ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.



Related posts

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಜಾನ್ವಿ ರಾಜೇಶ್ ಕುಲಾಲ್ ರವರಿಗೆ 87%_ಅಂಕ

Mumbai News Desk

ಮಸ್ಕತ್ – ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ, ಸಂಸದರಿಗೆ ಮನವಿ

Mumbai News Desk

“ಆನಂದವನ್ನು ನಮ್ಮೊಳಗೆ ಹುಡುಕಬೇಕು” : ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ

Mumbai News Desk

ಉಡುಪಿ : ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕಾರ, ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ – ಹರಿರಾಮ್ ಶಂಕರ್

Mumbai News Desk

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Mumbai News Desk

ಗುಜರಾತ್ ಭರುಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಅದ್ದೂರಿಯ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ.

Mumbai News Desk