ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ದಿನಾಂಕ 20/07/2025, ರವಿವಾರದಂದು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಡೊ೦ಬಿವಲಿ ವಲಯದ ಸದಸ್ಯರು, ಮುಂಬಯಿ ವಲಯದ ಅಧ್ಯಕ್ಷರು ಈಶ್ವರಿ ಪ್ರಕಾಶ ಭಟ್ ಹಾಗೂ ಉಪಾಧ್ಯಕ್ಷರು ರಮಣ ಭಟ್ಟ್ ಮತ್ತು ಮುಂಬಯಿ – ಡೊಂಬಿವಲಿ ವಲಯಗಳ ಸಮಿತಿಯ ಹಲವಾರು ಸದಸ್ಯರು ಮತ್ತು ಕೊಲಾಡ ಅರಣ್ಯ ವಿಭಾಗದ ಅಧಿಕಾರಿಗಳು ಪಾಲ್ಗೊಂಡು ಬಿಲ್ವ, ಶಮೀ, ಮಾವು, ನೆಲ್ಲಿ ಮುಂತಾದ ಅನೇಕ ಜಾತಿಯ ಸಸ್ಯಗಳನ್ನು ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ನೆಡುವ ಮೂಲಕ ವನಮಹೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿದರು.
ಕೃಷ್ಣ ಭಟ್ ಗುಡ್ಡೇಬಾಳ ಹಾಗೂ ಪರಿವಾರದವರು ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದರು. ಮುಂಬಯಿಯ ಎಲ್ಲ ಹವ್ಯಕ ಬಾಂಧವರ ಕೂಡುವಿಕೆಯಲ್ಲಿ ಈ ಪರಿಸರ ಬೆಳೆಸಿ ಉಳಿಸುವ ಕಾರ್ಯಕ್ರಮ ಈ ವರ್ಷ ಶ್ರೀಸಂಸ್ಥಾನದವರ ಐವತ್ತನೇ ವರ್ಧಂತಿಯಾಗಿರುವುದರಿಂದ ವಿಶೇಷವಾಗಿ ಬಹಳ ಸಂತೋಷದಿಂದ ನೆರವೇರಿತು.
B. Dinesh Kulal
Mob.: 9821868674
B. Dinesh Kulal
Mob.: 9821868674




