September 6, 2026
Mumbai News Kannada
ಮಹಾರಾಷ್ಟ್ರ

ನಾಶಿಕ್ ಸಿಟಿ ವಲಯ ರೋಟರಿ ಕ್ಲಬ್ ಅಧ್ಯಕ್ಷರಾಗಿ ಬಾಲಚಂದ್ರ ಕೋಟ್ಯಾನ್ ಆಯ್ಕೆ.





ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980935

ನಾಶಿಕ್ ತ್ರ್ಯಂಬಕ್ ರಸ್ತೆಯಲ್ಲಿನ ಹೋಟೆಲ್ ಎಮ್.ಬಿ.ಸಿ. ಸಿಟಾಡೆಲ್ ನಲ್ಲಿ ಜರಗಿದ ರೋಟರಿ ಪದಗ್ರಹಣ ಸಮಾರಂಭದಲ್ಲಿ ನಾಶಿಕ್ ಸಿಟಿ ವಲಯ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಬಾಲಚಂದ್ರ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ದ್ನ್ಯಾನೇಶ್ವರ್ ಶೆವಾಲೆ ಉಪಸ್ಥಿತಿ ಹಾಗೂ ಅಧ್ಯಕ್ಷತೆಯಲ್ಲಿ 18.07.2025 ರಂದು ಸಮಾರಂಭ ಜರಗಿದ್ದು ನಿರ್ಗಮನ ಅಧ್ಯಕ್ಷ ಹರ್ಷವರ್ಧನ್ ಶಹಾ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೂತನ ಅಧ್ಯಕ್ಷ ಬಾಲಚಂದ್ರ ಕೋಟ್ಯಾನ್ ಹಾಗೂ ನೂತನ ಕಾರ್ಯದರ್ಶಿ ಪಂಕಜ್ ದಶಪುತೆ ಇವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಾಲಚಂದ್ರ ಕೋಟ್ಯಾನ್ ” ಆರೋಗ್ಯ , ಶಿಕ್ಷಣ , ಮಹಿಳಾ ಸಬಲೀಕರಣ , ಪರಿಸರ ಸಂರಕ್ಷಣೆ ಮುಂತಾದ ಸಮಾಜೋಪಯೋಗೀ ಆಶಯಗಳಿಗೆ ಒತ್ತುಕೊಡುವ ತಮ್ಮ ಮುಂದಿನ ಯೋಜನೆಗಳ ಬಗ್ಗೆ ” ವಿವರಿಸಿ ಇವನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವೀಗೊಳಿಸುವ ಆಶಯವನ್ನು ಪ್ರಕಟಿಸಿದರು.

ಪ್ರಸ್ತುತಃ ಒಬ್ಬ ಫೈನಾನ್ಸಿಯಲ್ ಕನ್ಸಲ್ಟೆಂಟ್ ಆಗಿರುವ ( ಮಲ್ಟಿ ನ್ಯಾಷನಲ್ ಕಂಪನಿಯೊಂದರ ನಿವೃತ್ತ ಜನರಲ್ ಮ್ಯಾನೇಜರ್ ) ಬಾಲಚಂದ್ರ ಕೋಟ್ಯಾನ್ ಇವರು ಫಿಲಟೆಲಿ ( ಸ್ಟಾಂಪ್ ಸಂಗ್ರಹಣೆ ಹಾಗೂ ಅದರ ಆಳವಾದ ಅಭ್ಯಾಸ ) ಬಗ್ಗೆ ವಿಶೇಷ ಆಸಕ್ತಿಹೊಂದಿದ್ದು ಇವರ ವಿಶೇಷ ಪಕ್ಷಿಗಳ ಚಿತ್ರಗಳು ನಾಶಿಕ್ ಅಂಚೆಇಲಾಖೆಯಲ್ಲಿನ ಸ್ಟಾಂಪ್ ಗಳಲ್ಲಿ ಮುದ್ರಿತ ಗೊಂಡಿವೆ.
ಒಬ್ಬ ನುರಿತ ನೇಚರ್ ಫೊಟೋಗ್ರಾಫರ್ ಆಗಿರುವ ಬಾಲಚಂದ್ರ ಕೊಟ್ಯಾನ್ ತಮ್ಮ ಹವ್ಯಾಸವಾದ ಹಿಮಾಲಯನ್ ಟ್ರೆಕಿಂಗ್ ನಲ್ಲಿ ಸಾವಿರಾರು ದುರ್ಲಭ ಪಕ್ಷಿಗಳ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಕಾಲೇಜು ದಿನಗಳಲ್ಲಿ ತಮ್ಮ ತಂದೆಯವರ ಅಸ್ತಿತ್ವದಲ್ಲಿದ್ದ ಮುಂಬೈ ಫೋರ್ಟ್ ನಲ್ಲಿಯ ಪ್ರಸಿದ್ಧ ವಿದ್ಯಾನಿಧಿ ಬುಕ್ ಡಿಪೋ ನೆನಪಿನಲ್ಲಿ ಎರಡು ವರ್ಷಗಳಿಂದ ನಾಶಿಕ್ ನಲ್ಲಿ ವಿದ್ಯಾನಿಧಿ ಉಚಿತ ಗ್ರಂಥಾಲಯವನ್ನು ಆರಂಭಿಸಿದ್ದು ಜನರ ಓದುವಿಕೆಯ ಹವ್ಯಾಸವನ್ನು ಚೇತನಗೊಳಿಸುವಲ್ಲಿ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
ಪದಗ್ರಹಣ ಸಮಾರಂಭದಲ್ಲಿ ನಾಶಿಕ್ ಸಿಟಿ ಯಲ್ಲಿನ ವಿವಿಧ ಭಾಗಗಳಿಂದ ಆಗಮಿಸಿದ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ ಹಾಗೂ ಸುದ್ದಿ :
ಪಿ.ಆರ್.ರವಿಶಂಕರ್ 8483980035



Related posts

ಕರ್ನಾಟಕ ಮಹಾಮಂಡಲ ಮೀರಾ ಭಾಯಂದರ್ ನ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ , ಹರಸಿನ ಕುಂಕುಮ ಕಾರ್ಯಕ್ರಮ 

Mumbai News Desk

ಮಹಾರಾಷ್ಟ್ರ ಎಸ್‌ಎಸ್‌ಸಿ ಫಲಿತಾಂಶ 2026: ಮೇ 8 ರಂದು 10ನೇ ತರಗತಿ ಫಲಿತಾಂಶ ಪ್ರಕಟ

Mumbai News Desk

ಬೊಯಿಸರ್ ಸಾರ್ವಜನಿಕ ಗಣೇಶೋತ್ಸವ ಮಂಡಲದ 100 ನೆಯ ವರ್ಷದ ಸಂಭ್ರಮಾಚರಣೆ.

Mumbai News Desk

ತುಕಾರಾಮ್ ಮುಂಢೆ ‘ಆ್ಯಕ್ಷನ್’ಗೆ ಮಹಾರಾಷ್ಟ್ರ FDA ವೇಗ: ಆಹಾರ ಮಾದರಿ ಸಂಗ್ರಹದಲ್ಲಿ ಶೇ.300ರಷ್ಟು ಏರಿಕೆ

Mumbai News Desk

ಬಿಜೆಪಿ ನಿರ್ಧಾರಕ್ಕೆ ನನ್ನ ಬೆಂಬಲವಿದೆ – ಮೌನ ಮುರಿದ ಏಕನಾಥ್ ಶಿಂಧೆ

Mumbai News Desk

ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ : ಮುಂದಿನ ಮುಖ್ಯಮಂತ್ರಿ ಯಾರು ಎಂಬ ಸ್ಪಷ್ಟತೆ ಇಲ್ಲ

Mumbai News Desk