26.3 C
Mumbai
March 7, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕುಣಿತ ಭಜನೆ, ಯಕ್ಷಗಾನ ತಾಳಮದ್ದಳೆಗೆ ಚಾಲನೆ,





ಭಜನೆ ಮೂಲಕ ಮಕ್ಕಳಲ್ಲಿ ಧಾರ್ಮಿಕ ಪ್ರಜ್ನೆ ಮೂಡುಸುತ್ತಿರುವುದು ಪ್ರಶಂಸನೀಯ –  ಪ್ರವೀಣ್ ಭೋಜ ಶೆಟ್ಟಿ,

ಮುಂಬಯಿ:    ಮಕ್ಕಳು ಭಜನೆ ಹಾಗೂ ಕುಣಿತ ಭಜನೆಯಲ್ಲಿ ಬಾಗವಹಿಸುತ್ತಿರುವದಿಂದ ಮುಂದೆ ಅವರಲ್ಲಿ ಧಾರ್ಮಿಕ ಪ್ರಜ್ನೆ ಮೂಡುವುದು. ಅಂತಹ ಕಾರ್ಯ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಹಾಗೂ ದಿನೇಶ್ ಕುಲಾಲ್ ಮತ್ತು ತಂಡದ ಎಲ್ಲರಿಂದ ನಡೆಯುತ್ತಿರುವುದು ಪ್ರಶಂಸನೀಯ. ಈ ಪರಿಸರದ ಎಲ್ಲಾ ಜಾತಿಯ ಬಂಧುಗಳು ಒಗ್ಗಟ್ಟಾಗಿ ಸಂಸ್ಥೆಯನ್ನು ಮುನ್ನಡೆಸಿ ಇರುವುದು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ

 ಎಂದು ಬಂಟರ  ಸಂಘ ಮುಂಬಯಿಯ ಅಧ್ಯಕ್ಷ  ಪ್ರವೀಣ್ ಭೋಜ ಶೆಟ್ಟಿ ನುಡಿದರು. 

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 16 ನೇ ವಾರ್ಷಿಕ   ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 10 ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಶಾರದಾ ಗ್ಯಾನಪೀಠ ಇಂಟರ್ನ್ಯಾಷನಲ್ ಶಾಲೆಯ ಹತ್ತಿರ,  ಮಲಾಡ್ ಪೂರ್ವ ಇಲ್ಲಿ ಜರಗಿದ್ದು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಹಾಗೂ ಇತರ ಗಣ್ಯರೊಂದಿಗೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ  ಮಾತನಾಡುತ್ತಾ ಮಲಾಡ್ ಇದೀಗ ಬಹಳ ಅಭಿವೃದ್ದಿಯಾಗಿದ್ದು ಇಲ್ಲಿಯವರಿಗೆ ವರಮಹಾಲಕ್ಷ್ಮಿಯ ಅನುಗ್ರಹವಿದೆ. ಒಂದು ಸಂಸ್ಥೆಯಲ್ಲಿ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರಂತಹ ವ್ಯಕ್ತಿ 16 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದು ಅವರ ಸರಳವಾದ ವ್ಯಕ್ತಿತ್ವಕ್ಕೆ ಹಾಗೂ ನಿಸ್ವಾರ್ಥ ಸೇವೆಗೆ ಸಂದ ಗೌರವ. ಸಂಪತ್ತಿನ ಅದಿದೇವತೆಯಾದ ವರಮಹಾಲಕ್ಷ್ಮೀಯ ಪೂಜೆ ಮಾಡಿದವರಿಗೆ ಕಷ್ಟ ಅಸಾಧ್ಯ. ಇದೇ ರೀತಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮೂಲಕ ಜನರೊಂದಿಗೆ ಸಂಮಂಧ ಬೆಳೆಯುತ್ತಿರಲಿ ಎಂದು ಶುಭ ಹಾರೈಸಿದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ  ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಅರ್. ಕೆ. ಶೆಟ್ಟಿಯವರು ಮಾತನಾಡುತ್ತಾ ಪೂಜಾ ಸಮಿತಿಯ ಸದಸ್ಯರ ಮಕ್ಕಳು ಶಿಕ್ಷಣವನ್ನು ಪಡೆದು ಉದ್ಯೋಗ ದೊರೆಯಲು ಸೂಕ್ತ ತರಬೇತಿ ನೀಡುವ ಬಗ್ಗೆ ನನ್ನ  ಸಂಜೀವಿನಿ ಸಂಸ್ಥೆಯ ವತಿಯಿಂದ ಸರಕಾರದ ಸಹಾಯದಿಂದ ಟಾಟಾ ಸಂಸ್ಥೆಯೊಂದಿಗೆ ತರಬೇತಿ ನೀಡುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಈ ಪರಿಸರದ ತುಳು ಕನ್ನಡಿಗರಿಗೆ ನೀಡಲು ಸಹಕರಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು,

ಬಾಂಬೆ ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ  ಸಿ.ಎ. ಸುರೇಂದ್ರ ಶೆಟ್ಟಿ ಮಾತನಾಡುತ್ತಾ ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯ ಕಾರ್ಯಕ್ರಮವು ನನ್ನ ಮನೆಯ ಕಾರ್ಯಕ್ರಮದಂತೆ. ಕಳೆದ 16 ವರ್ಷಗಳಿಂದ ಮಲಾಡ್ ಪರಿಸರದಲ್ಲಿ ನಮ್ಮ ತುಳು ನಾಡಿನ ಸಂಸ್ಕೃತಿಯನ್ನು ಉಳಿಸುತ್ತಾ ನಮ್ಮ ಭವ್ಯ ಭಾರತದ ಪರಂಪರೆಯನ್ನು ಉಳಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ, ಎಲ್ಲಿ ಮಹಿಳೆಯರಿಗೆ ಗೌರವ ಇದೆ ಆ ಸಂಘಟನೆಗೆ ಉತ್ತಮ ಭವಿಷ್ಯವಿದೆ, ಅದು ಇಲ್ಲಿ ಕಾಣುತ್ತಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಬಂಟರ  ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ  ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ ಇಂದು ಧರ್ಮ, ಸಂಸ್ಕೃತಿ ಉಳಿದಿದ್ದರೆ ಅದು ಬಡವರಿಂದ ಹಾಗೂ ಮಧ್ಯಮ ವರ್ಗದವರಿಂದ ಅಂತ ಹೇಳಬಹುದು. ಮೀರಾರೋಡ್ ಪರಿಸರದಲ್ಲಿ ವಾರಕ್ಕೆ ಎರಡು ಯಾ ಮೂರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ ಹಾಗೂ ಇಂತಹ ಕಾರ್ಯಕ್ರಮಗಳ ಅಗತ್ಯವೂ ಇದೆ. ಜನಸಾಮಾನ್ಯರಿಂದ ಸ್ಥಾಪನೆಗೊಂಡು ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆದಿದೆ.  ಮಹಿಳೆಯರನ್ನು ಒಗ್ಗೂಡಿಸಿ ನಡೆಸುತ್ತಿರುವ ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ಉತ್ತಮ ಭವಿಷ್ಯವಿದೆ ಎಂದರು. 

ಮುಖ್ಯ ಅತಿಥಿ ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ನ  ಸಿಎಂಡಿ,  ರವೀಂದ್ರನಾಥ್ ಎಂ. ಭಂಡಾರಿಯವರು ಮಾತನಾಡುತ್ತಾ ಈ ಸಂಘಟನೆಗೆ 16 ವರ್ಷವಾಗಿದೆ, ಆಗದೆ ಪ್ರಾಯ ಮುಖ್ಯವಲ್ಲ. ಯಾವಾಗಲು ಮನಸ್ಸಿಗೆ ಪ್ರಾಯವಾಗುದಿಲ್ಲ ಆದರೆ ಶರೀರಕ್ಕೆ ಮಾತ್ರ ಪ್ರಾಯವಾಗುತ್ತದೆ. ಧರ್ಮವನ್ನು ರಕ್ಷಿಸಿದಲ್ಲಿ ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಮ್ಮಲ್ಲಿ ದುಡು ಇದ್ದಲ್ಲಿ ಅದರ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವುದರ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.   

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಮೀರಾ ಬಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪ್ಪಾಡಿ ಮಾತನಾಡುತ್ತಾ ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯ ಮಹಿಳೆಯರಿಂದ ನಡೆಯುತ್ತಿರುವ ಶ್ರೀ ವರಮಹಾಲಕ್ಷ್ಮೀ  ಪೂಜಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಅಧ್ಯಕ್ಷತೆಯನ್ನು ವಹಿಸಿದ ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿದರು.  

ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು  ನಡೆಯಿತು. 

ಸಂಜೆ ಯಕ್ಷಗುರು  ನಾಗೇಶ ಪೋಳಲಿಯವರ ನಿರ್ದೇಶನದಲ್ಲಿ ಶ್ರೀ ಶನಿಮಹಾತ್ಮೆ ತಾಳಮದ್ದಳೆ ನಡೆಯಿತು. 

 ವೇದಿಕೆಯಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯ ಅಧ್ಯಕ್ಷ ಶ್ರೀನಿವಾಸ್  ಸಾಪಲ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ರವೀಶ್ ಆಚಾರ್ಯ, ಭಾರತ್ ಬ್ಯಾಂಕಿನ ನಿರ್ದೇಶಕ ಪೂಜಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕೆ ಪೂಜಾರಿ, ಪೂಜಾ ಸಮಿತಿಯಕಾರ್ಯದರ್ಶಿ ಸನತ್ ಪೂಜಾರಿ, ಖಜಾಂಚಿ ಸುರೇಂದ್ರ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ, , ಜಗನ್ನಾಥ್ ಎಚ್. ಮೆಂಡನ್, ದಿನೇಶ್ ಪೂಜಾರಿ, ಸಂಚಾಲಕ  ದಿನೇಶ್ ಕುಲಾಲ್, ಸಹ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಸಹ ಖಜಾಂಚಿ ಸುಂದರ್ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಪಾಲ್ಗೊಂಡಿದ್ದರು,

 ಕಾರ್ಯಕ್ರಮ ಯಶಸ್ವಿಗೆ, ಪೂಜಾ ಸಮಿತಿಯಸಿದ್ದರಾಮ ಗೌಡ, ಈಶ್ವರ ಕುಲಾಲ್, ಮೃತ್ಯುಂಜಯ್ ಪಳ್ಳಿ, ನಿತ್ಯಾನಂದ ಕೋಟ್ಯಾನ್, , ಗೋಪಾಲ ಪೂಜಾರಿ, ದಿನೇಶ್ ಕಾಮತ್, ಪ್ರತಿಕ್ ಜೆ. ಶೆಟ್ಟಿ, ಚಂದ್ರಶೇಖರ ಶೆಟ್ಟಿ, , ಶ್ರೀಪತಿ ಪಾಟ್ಕರ್, ಹರೀಶ್ ಶೆಟ್ಟಿ ಪೆರಾರ, ಸದಾನಂದ ಕೋಟ್ಯಾನ್, ಸುರೇಂದ್ರ ಶೆಟ್ಟಿ ಹೊಸ್ಮಾರು, , ಜಯ ಪೂಜಾರಿ,  , ಸದಾನಂದ ರಾವ್, ಹರೀಶ್ ಪೂಜಾರಿ ಕಾರ್ನಾಡ್, , ನಿತ್ಯಾನಂದ ಪೂಜಾರಿ, ಶಶಿಧರ್ ಹೆಗ್ಡೆ, , ಗೋಪಾಲ ಶೆಟ್ಟಿಗಾರ್, ರಘುರಾಂ ನಾಯಕ್, , ಯೋಗೇಶ್ ಬಂಗೇರಾ, ಗಣೇಶ್ ನಾಯ್ಕ್,ಮಹಿಳಾ ವಿಭಾಗ ದ ಉಪಾಧ್ಯಕ್ಷರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್. ಗೌಡ, ಸಂಧ್ಯಾ ಎಸ್. ಪ್ರಭು, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕಾರ್ಕೇರ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್. ರಾವ್, ವಿದ್ಯಾ ಎಸ್. ನಾಯಕ್, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ, ವಿದ್ಯಾ ಡಿ. ಆಚಾರ್ಯ, ಸಲಹೆಗಾರರಾದ ಮೊಹಿನಿ ಜೆ. ಶೆಟ್ಟಿ ಮತ್ತು ರತ್ನಾ ಡಿ. ಕುಲಾಲ್, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷರುಗಳಾದ  ಪ್ರಣೀತಾ ವಿ. ಶೆಟ್ಟಿ, ನವಿನ್ ಯು. ಸಾಲಿಯನ್, ನಿಧಿ ಜಿ. ನಾಯಕ್, ದಿಶಾ ಪಿ. ಕಾರ್ಕೇರ, ಕಾರ್ಯದರ್ಶಿ ರಾಜೇಶ್ ಕೆ. ಮೂಲ್ಯ, ಕೋಶಾಧಿಕಾರಿ ಶಿವಾನಿ ಎಸ್. ಪ್ರಭು, ಸಂಚಾಲಕ ಡಾ. ಶಶಿನ್ ಕೆ. ಆಚಾರ್ಯ, ಸಾಮಾಜಿಕ ಮಾಧ್ಯಮದ ಹರ್ಷ್ ಎಂ. ಕುಂದರ್ , ಜೊತೆ ಕಾರ್ಯದರ್ಶಿಗಳಾದ ಪ್ರತಮ್ ಆರ್. ಪೂಜಾರ್, ಶ್ವೇತಾ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ದೀಕ್ಷಿತ್ ಎಂ. ಪೂಜಾರಿ,  ವಿನೀತ್ ಜಿ. ಪೂಜಾರಿ ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ದಿವ್ಯ ಎನ್ ಅಮೀನ್, ಸೌಮ್ಯ ಜೆ ಮೆಂಡನ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು,

ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪೂಜೆಯ ಪ್ರಸಾದವನ್ನು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿಕೊಂಡರು.

——–

ಮಲಾಡ್ ಕುರಾರ್  ವಿಲೇಜ್ ನ ಅಭಿವೃದ್ಧಿಗೆ ಸಮಿತಿಯ ಸೇವಾ ಕಾರ್ಯಗಳು ಪೂರಕವಾಗಿದೆ: ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಪಣಿಯೂರು .

ಸಮಾರಂಭದ ಅಧ್ಯಕ್ಷತೆ ವಹಿಸಿದ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಎಂ ಶೆಟ್ಟಿ ಪಣಿಯೂರು. ಮಾತನಾಡುತ್ತಾ ಪೂಜಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಈ ಪರಿಸರದ ತುಳು ಕನ್ನಡಿಗರು ಮಕ್ಕಳು ಮಹಿಳೆಯರು ತಮ್ಮ ಕಲಾ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿಯಾಗಿದೆ.. ಅಲ್ಲದೆ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವಲ್ಲಿ ನಮ್ಮ ಸಮಿತಿ ಸಕ್ರಿಯವಾಗಿದೆ. 16 ವರ್ಷ ಕಾರ್ಯಗಳು ದಾನಿಗಳ ಸಹಕಾರ ಮತ್ತು ಸದಸ್ಯರ ಬೆಂಬಲ ಮುಖ್ಯ ಕಾರಣವಾಗಿದೆ ಎಂದು ನುಡಿದರು.

B. Dinesh Kulal

Mob.: 9821868674



Related posts

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ, 

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಕೆ ಭೋಜರಾಜ್ ರವರಿಗೆ ನುಡಿ ನಮನ ಕಾರ್ಯಕ್ರಮ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ಗ್ರಂಥಾಯನ ವಿಭಾಗ’:ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಮತ್ತು ‘ಮುಂಬೈ ಕನ್ನಡ ಗದ್ಯ ವಾಹಿನಿ’ ಕೃತಿಗಳ ಬಿಡುಗಡೆ

Mumbai News Desk

ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್ – ಜಾಗತಿಕ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬೈ ಅರವತ್ತನೇ ವಾರ್ಷಿಕ ಸತ್ಯನಾರಾಯಣ ಮಹಾ ಪೂಜೆ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಮುಂಬೈ ನಗರದಲ್ಲಿ ಭಾರೀ ಮಳೆ: ಕರಾವಳಿ ಪ್ರದೇಶಗಳಿಗೆ ತೆರಳದಂತೆ, ಒಳಾಂಗಣದಲ್ಲಿಯೇ ಇರುವಂತೆ ಪೊಲೀಸರು ನಾಗರಿಕರಿಗೆ ಮನವಿ

Mumbai News Desk