ಮುಂಬಯಿ ಮಹಾನಗರದ ಹಿರಿಯ ಸಂಸ್ಥೆಗಳಲ್ಲಿ ಒಂದಾದ ಕನ್ನಡ ಕಲಾ ಸಮಾಜ, ಮುಂಬಯಿ (ಕೋಟೆ)*ಇದರ ಮಾಜಿ ಕಾರ್ಯಕಾರಿ ಸಮಿತಿಯ ಸದಸ್ಯರ ಹಾಗೂ ಹಿರಿಯ ಸಕ್ರಿಯ ಸದಸ್ಯರ ವಾರ್ಷಿಕ ಸ್ನೇಹ ಸಮ್ಮಿಳನಾ ಒಕ್ಕೂಟ ಸಭೆಯು ತಾರೀಕು 10.08.2025 ರವಿವಾರ ಬೆಳಿಗ್ಗೆ 11.00 ಗಂಟೆ, ಸರಿಯಾಗಿ, ಕೋಟೆ ಮುಂಬಯಿನ ,ಪಿ.ಎಂ. ಮಾರ್ಗದ ,ಜೀವನ್ ಪ್ರಕಾಶ್ ಕಟ್ಟಡದ 4 ಮಾಳಿಗೆಯಲ್ಲಿ, ನ್ಯಾಯವಾದಿ ಸತೀಶ್ ಬಿಜೈ ಅಧ್ಯಕ್ಷತೆಯಲ್ಲಿ ಹಾಗೂ ನಾರಾಯಣ ಸಿ . ಸಾಲ್ಯಾನ್ ಗೌರವ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆಯಿತು. ಒಂದು ಕಾಲದಲ್ಲಿ, ಅದೆಷ್ಟೋ ತುಳು ಕನ್ನಡಿಗರ ಬಡಪಾಯ ವಿಧ್ಯಾರ್ಥಿಗಳಿಗೆ, ಜಾತಿ ಮತ, ಬೇಧಭಾವ , ಇಲ್ಲದೆ, ನಿಲ್ಲಲು, ಆಶ್ರಯ ನೀಡಿ, ಅವರಿಗೆ , ವಿಧ್ಯಾರ್ಥಿ ವೇತನ, ಫ್ರೀ ವಾಚನಾಲಯ, ಯಕ್ಷಗಾನ ತರಬೇತಿ, ಭಜನಾ, ಸಂಕೀರ್ತನೆ, ಆಟೋಟ ಸ್ಪರ್ಧೆ, ಇತ್ಯಾದಿ, ನಿರಂತರವಾಗಿ ಸುಮಾರು 40 ಸತತ ವಾಗಿ ಸೇವೆಯನ್ನು ತುಳು ಕನ್ನಡಿಗರಿಗಾಗಿ ಮಾಡುತ್ತಾ ಬಂದಿರುವ ಈ ಸಂಸ್ಥೆಯು, ಅದೆಷ್ಟೋ , ವಿಧ್ಯಾರ್ಥಿಗಳು , ಹಗಲಲ್ಲಿ ಕ್ಯಾಂಟೀನ್ , ಹೋಟೆಲ್ಗಳಲ್ಲಿ ದುಡಿದು, ರಾತ್ರಿ ಶಾಲೆ, ಕಾಲೇಜು ಕಲಿತು, ಉತ್ತಮ ಮಟ್ಟದಲ್ಲಿ,ಕೆಲವರು ಈಗಾಗಲೇ ನಿವೃತ್ತಿ ಜೀವನವನ್ನು ,ಇನ್ನೂ ಕೆಲವರು ದೊಡ್ಡ ಹುದ್ದೆ ಯಲ್ಲಿ, ಉದ್ಯಮಿಗಳಾಗಿ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿಧಾರೆ, .
ಅಂದಿನ ದಿನಗಳಲ್ಲಿ ಪೋರ್ಟ್ ಪರಿಸರದಲ್ಲಿ ಹೆಸರು ಪಡೆದ ಶ್ರೀಧರ್ ಕ್ಯಾಂಟೀನ್ ನ ಮಾಜಿ ಮಾಲಕರು , ಇಂದಿನ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ನಾರಾಯಣ ಸಿ. ಸಾಲಿಯಾನ್ ಮಾತನಾಡುತ್ತಾ, ನೀವು ಇವತ್ತು ಆಮಂತ್ರಿಸಿ, ಗೌರವಿಸಿ, ಸನ್ಮಾನಿಸಿದ, ನಿಮಗೆ ಧನ್ಯವಾದಗಳು, ನೀವು ಅಂದಿನ ದಿನಗಳಲ್ಲಿ, ತಮ್ಮ ಕರ್ತವ್ಯವನ್ನು, ನಿಷ್ಟೆ ಹಾಗೂ ಸ್ವಾಭಿಮಾನ, ನನ್ನ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿ , ರಾತ್ರಿ,ಶಾಲೆ, ಕಾಲೇಜುಗಳಲ್ಲಿ ಓದಿ ಉತ್ತಮ ನಾಗರಿಕರಾಗಿ ಈ ಸಮಾಜದ ಆಗಿ , ಇಂತಹ ಪೂರ್ಣ್ಯಕಾರ್ಯಕ್ರಮವನ್ನು, ಮಾಡುತ್ತಾ ಬಂದಿರುವುದು ನನಗೆ ಬಹಳ ಹೆಮ್ಮೆ ತಂದಿದೆ… ನಿಮ್ಮೆಲ್ಲರ ವೃತ್ತಿ ನಿವೃತ್ತಿ ದಿನಗಳು ಒಳ್ಳೆಯದಾಗಿ ಸಾಗಲಿ ಅದಕ್ಕೆ ದೇವರ ದಯೆ ಇರಲಿ ಎಂದು, ಆಶೀರ್ವದಿಸಿದರು… ಕಾರ್ಯದರ್ಶಿಯಾಗಿ ನೇಮಕ ಗೊಂಡ , ಸಂಘದ ಸಕ್ರಿಯವಾಗಿ ಕೆಲಸ ಮಾಡಿದ, ಶ್ರೀ ವಸಂತ್ ಬುನ್ನಾನ್ ಇದರ ಮೊದಲು ಬಂದ ಎಲ್ಲಾ ಸದಸ್ಯರನ್ನು ಸ್ವಾಗತಿ,ವಿಶೇಷವಾಗಿ, ಗೌರವ ಅಧ್ಯಕ್ಷರಾದ, ನಾರಾಯಣ ಸಿ ಸಾಲಿಯಾನ್, ಹಾಗೂ ಹಿರಿಯ ಸಕ್ರಿಯ ಮಾಜಿ ಅಧ್ಯಕ್ಷರಾದ, ರೈಲ್ವೆ ಸೇವಾ ನಿವೃತ್ತಿ ಹೊಂದಿದ ರವಿ ಕೋಟ್ಯಾನ್ , ಇವರನ್ನು, ಹೂ ಗುಚ್ಛ ನೀಡಿ , ಸತ್ಕರಿಸಲಾಯಿತು. ಅನಂತರ ಪ್ರಥಮವಾಗಿ, ಸಂಘದಲ್ಲಿ ಅದೆಷ್ಟೋ ಪರೋಪಕಾರಿ ಕೆಲಸ ಮಾಡಿ, ಸದ್ಗತಿ ಸೇರಿದ ಮಹಾನ್ ಸದಸ್ಯರಿಗೆ 2 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಸಭೆಯ ಕಾರ್ಯಕ್ರಮವನ್ನು ಆರಂಭಿಸಲಾಯಿತು… ಹಿರಿಯ ಕಿರಿಯ ಸದಸ್ಯರು ತಮ್ಮ ತಮ್ಮ ಅಂದಿನ ಅನಿಸಿಕೆ , ಅಭಿಪ್ರಾಯ, ಅನುಭವ, ಕಷ್ಟದ ದಿನಗಳನ್ನು ನೆನೆಸಿಕೊಂಡು ಮಾತನ್ನಾಡಿ ಹಂಚುತ್ತಾ, ಪ್ರಥಮವಾಗಿ, ಸಂಘದ ಕಿರಿಯ ಸದಸ್ಯ, ಹಾಗೂ ಭಾರತ್ ಬ್ಯಾಂಕಿನ ಈಗಿನ ಅಧಿಕಾರಿ *ಉಮೇಶ್ ಡಿ. ಸುವರ್ಣ* ಮಾತನಾಡುತ್ತಾ, ಮುಂಬಯಿ ಪೋರ್ಟ್ ಶಾಲಾ, ಕಾಲೇಜು ದಿನಗಳಲ್ಲಿ , ನನಗೆ ಆಸರೆ ಕೊಟ್ಟು, ಬಿಡುವಿನ ರಜಾ ದಿನಗಳಲ್ಲಿ, ಸಮಯವನ್ನು ಕಳೆಯಲು, ಪುಸ್ತಕ ಗ್ರಂಥಾಲಯ, ಆಟೋಟ ಸ್ಪರ್ಧೆ , ಚೆಸ್, ಕೇರಂ, ಕ್ರಿಕೆಟ್, ಫುಟ್ಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿ, ಕೊಟ್ಟ ಈ ಸಮಾಜಕ್ಕೆ ನನ್ನ ಕೃತಜ್ಞನಾಗಿದ್ದು, ನಾನು ಎಂದಿಗೂ ಮರೆಯಲಾರೆ. .. ಇನ್ನೊಬ್ಬ ಸದಸ್ಯರಾದ ಜಗನ್ನಾಥ ಶೆಟ್ಟಿ ತನ್ನ ಮನದಾಳ ಮಾತುಗಳನ್ನು, ಮಾತಾಡುತ್ತಾ, ಕನ್ನಡ ಕಲಾ ಸಮಾಜ, ಒಂದು ಗುರುಕುಲ ಇದ್ದಂತೆ, ಶಿಸ್ತು ಬದ್ಧವಾಗಿ, ಕೇವಲ ಜಾತಿಗೆ ಸೀಮಿತವಾಗದೇ, ಬಡವ, ಬಲ್ಲಿದ ಎಂಬ ಭೇದ ಭಾವವಿಲ್ಲದೆ , ಎಲ್ಲರಿಗೆ ,ನಿಲ್ಲಲು ಆಶ್ರಯವನ್ನು ಕೊಟ್ಟಿದಲ್ಲದೇ, ಜೀವದ ಗುರಿಯನ್ನು ಮುಂದಿನ ಭವಿಷ್ಯದ ಬಗ್ಗೆ ಮಾದರಿಯನ್ನು, ರೂಪಿಸಿ, ಸಲಹೆ ಕೊಡುವ ಸಂಸ್ಥೆ ಆಗಿತ್ತು, ನಾನು ಸಹ ಮುಂದಿನ ಭವಿಷ್ಯದ ಬಗ್ಗೆ ಯೋಚಿವ ಜವಾಭಾರಿಯನ್ನು , ಆ ದಿನಗಳಲ್ಲಿ ಕಲ್ಪಿಸಿ, ಇಂದು ಎಲ್ಲರ ಮುಂದೆ ತಲೆ ಎತ್ತಿ ತೋರಿಸುವಂತೆ ಮಾಡಲು ಮಾರ್ಗದರ್ಶನ ಮಾಡಿದ ಈ ದೇಗುಲದಂಥ ಸಂಸ್ಥೆಯಾಗಿದ್ದು.. ಇಂತಹ ಸಂಸ್ಥೆಗೆ ನಿಜವಾಗಿಯೂ ಚಿರ ಋಣಿ ಯಾಗಿದ್ದೇನೆ……. ಅನಂತರ ಹಿರಿಯ ಸದಸ್ಯರಾದ ಶಿವರಾಮ್ ಸಪಲಿಗ, ರವಿ ಕೋಟ್ಯಾನ್, ಅರುಣ್ ಶ್ರೀಯಾನ್, ಹರೀಶ್ ಪೂಜಾರಿ, ಪುರುಷೋತ್ತಮ ಸಾಲಿಯಾನ್, ಶ್ರೀಧರ್ ಸುವರ್ಣ,ಜಯರಾಮ್ ಸಪಲಿಗ, ಜಗನ್ನಾಥ ಕರ್ಕೇರ , ಅರುಣ್ ಶ್ರೀಯಾನ್, ಬಾಲಚಂದ್ರ ಶೆಟ್ಟಿ, ಶಂಕರ ಕೋಟ್ಯಾನ್, ಜಯಶೀಲ ಶೆಟ್ಟಿ,ಮಾತನಾಡುತ್ತಾ, ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಮಾತಾಡಿದರು … ಗೌರವ ಅಧ್ಯಕರು ನಾರಾಯಣ ಸಿ .ಸಾಲಿಯಾನ್ ಮಾತನಾಡುತ್ತಾ, ಎಷ್ಟೂ ವರುಷಗಳ ಬಳಿಕ ಈ ರೀತಿ ಮಿಲನ ಆಗುವ ಭಾಗ್ಯ, ಹಾಗೂ ಗತಾ ವೈಭವದ ಆಗಿಹೋದ ಜೀವನದ ಕಷ್ಟ, ಸುಖ, ಸೌಹಾರ್ದ ಭಾವನೆಯನ್ನು,ಹಂಚಿ ಮಾತನಾಡುವ ಸೌಭಾಗ್ಯ ನನಗೆ ಒದಗಿ ಸಿಕ್ಕಿದೆ, ನನ್ನನು ಇಂದಿನ ಸಭೆಗೆ ಆಮಂತ್ರಿಸಿ, ನನ್ನ ಮೇಲೆ ಪ್ರೀತಿ ಇಟ್ಟು , ಸತ್ಕರಿಸಿದಕ್ಕೆ ತುಂಬ ಧನ್ಯವಾದಗಳು…. ಅವರು ಸದಸ್ಯರಿಗೆ , ನಮ್ಮ ಮುಂದಿನ ದಿನಗಳಲ್ಲಿ ಇಂತಹ ಸೌಹಾರ್ದ ಸಂಬಂಧ, ಸಮಾಜ ಸೇವೆ ಕಾರ್ಯಕ್ರಮವನ್ನು, ಸತತ ನಿರಂತ ವಾಗಿ ನಡೆಯಲಿ, ನನ್ನಿಂದ ಆದಷ್ಟು ಕೈ ಜೋಡಿಸುವೆ ಎಂದು ಭಾವುಕರಾಗಿ ತಮ್ಮ ಮನದಾಳದ ಮಾತು ಸಭೆಯಲ್ಲಿ ಮಾತಾಡಿ, ಎಲ್ಲಾ ಸದಸ್ಯರು ಅವರಿಗೆ ಅಭಿನಂದನೆ ಸಲ್ಲಿಸಿದರು. ಇಂತಹ ಆಯೋಜನೆ ಮಾಡುವ ಮುಖಾಂತರ, ನಮ್ಮ ಜೀವನ ಶೈಲಿಯಲ್ಲಿ ಆರೋಗ್ಯ, ನೆಮ್ಮದಿ ಸಿಗಲಿದೆ , ಹೆಚ್ಚು ಕಾಲ ಸಂತೋಷದಿಂದ ನಗು ನಗುತ್ತಾ ಆದಷ್ಟು ಕಾಲ ಬಾಳಿ ಈ ಸಮಾಜದ ನೆನಪು ಶಾಶ್ವತವಾಗಿ ಉಳಿಯಲಿ ಎಂದು ಆಶೀರ್ವದಿಸಿದರು. …ಕೊನೆಯಲ್ಲಿ ಅಧ್ಯಕ್ಷರಾದ ಸತೀಶ್ ವಿ. ಬಿಜೈ ಮಾತನಾಡುತ್ತಾ, ಇಂತಹ ಸೌಹಾರ್ದ ಒಟ್ಟು ಗುಡಿಸಿ, ಅರ್ಥ ಪೂರ್ಣವಾದ, ಕಾರ್ಯಕ್ರಮವನ್ನು, ಮಾಡಿ ಆಯೋಜಿಸಿದ ಸಕ್ರಿಯ ಕಾರ್ಯಕರ್ತರಾದ ಶಿವರಾಮ್ ಸಪಲಿಗ, ವಸಂತ ಬುನ್ನನ್ ಇವರನ್ನೂ ಹಾಗೂ ಸವಿ ರುಚಿಕರವಾದ ಭೋಜನದ ವ್ಯವಸ್ಥೆಯ ಹಾಗೂ ಸಭೆಯನ್ನು ಸುಸ್ಸಂಗವಾಗಿ ನೆರವೇರಿಸಲು ಜಾಗದ ವ್ಯವಸ್ಥೆಯನ್ನು ಮಾಡಿ ಕೊಟ್ಟ ಇವರನ್ನು ಸ್ವಾಗತಿಸಿ, ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ರಾಷ್ಟ್ರ ಗೀತೆಯನ್ನು ಹಾಡಿ , ಸಭೆಯನ್ನು ಮುಕ್ತಾಯಗೊಲಿಸಲಾಯಿತು.




