25 C
Mumbai
March 7, 2026
Mumbai News Kannada
ಕರ್ನಾಟಕ

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.





ಅನಾಮಿಕ ದೂರುದಾರನೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದ್ದು, ಇದು ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವನ್ನು ಸೂಚಿಸಿದೆ. ಆರಂಭದಲ್ಲಿ ಸಾಕ್ಷ್ಯ ಸಂರಕ್ಷಣಾ ಕಾಯಿದೆಯಡಿ ರಕ್ಷಣೆ ಪಡೆದಿದ್ದ ಈ ವ್ಯಕ್ತಿಯ ಬಂಧನಕ್ಕೆ ಕಾನೂನು ತೊಡಕುಗಳು ಎದುರಾಗಿದ್ದವು. ಆದರೆ, ಎಸ್‌ಐಟಿ ಸಂಗ್ರಹಿಸಿದ ಹೊಸ ಸಾಕ್ಷ್ಯಗಳು ಮತ್ತು ದೂರಿನಲ್ಲಿನ ಸುಳ್ಳುಗಳಿವೆ ಎಂಬ ಅನುಮಾನಗಳು ಬಂಧನಕ್ಕೆ ದಾರಿ ಮಾಡಿಕೊಟ್ಟಿವೆ.

ಅನಾಮಿಕ ದೂರುದಾರನು ನೀಡಿದ ಮಾಹಿತಿ ಮತ್ತು ತನಿಖೆ ನಂತರ ದೊರೆತ ವಾಸ್ತವಾಂಶಗಳ ನಡುವೆ ಭಾರಿ ವೈರುಧ್ಯಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. (ದೂರುದಾರ ತಿಳಿಸಿದ್ದ ಶವ ಹೂತಿದ್ದೇನೆ ಎಂಬ 17 ಸಮಾಧಿ ಸ್ಥಳಗಳನ್ನು ಅಗೆದರೂ ಯಾವುದೇ ಅಸ್ತಿಪಂಜರದ ಕುರುಹು ಸಿಕ್ಕಿಲ್ಲ. ಒಂದೆರಡು ಜಾಗದಲ್ಲಿ ಮಾತ್ರ ಸಣ್ಣಪುಟ್ಟ ಮೂಳೆಗಳು ಲಭ್ಯವಾಗಿವೆ.) ಎಸ್‌ಐಟಿಯು ಈ ವ್ಯಕ್ತಿ ಸುಳ್ಳು ಮಾಹಿತಿ ನೀಡಿದ್ದಾನೆ, ತಪ್ಪು ದೂರು ಕೊಟ್ಟಿದ್ದಾನೆ ಮತ್ತು ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರಿಂದಾಗಿ, ಈ ದೂರುದಾರನಿಗೆ ‘ಸಾಕ್ಷ್ಯ ಸಂರಕ್ಷಣಾ ಕಾಯಿದೆ’ ಅಡಿಯಲ್ಲಿ ಸಿಗುತ್ತಿದ್ದ ರಕ್ಷಣೆಯನ್ನು ಹಿಂತೆಗೆದುಕೊಂಡು, ಬಂಧಿಸಿರುವ ಸಾಧ್ಯತೆಯಿದೆ.
ನಿನ್ನ ಶುಕ್ರವಾರ ಬೆಳಗ್ಗೆ 10:30ರಿಂದ ಆರಂಭವಾದ ವಿಚಾರಣೆಯು ರಾತ್ರಿಯವರೆಗೆ ನಿರಂತರವಾಗಿ ನಡೆಯಿತು. ಮಾಸ್ಕ್‌ಮ್ಯಾನ್‌ನನ್ನು SIT ಮುಖ್ಯಸ್ಥ ಪ್ರಣಬ್ ಮೊಹಂತಿ ಸ್ವತಃ ವಿಚಾರಣೆಗೊಳಪಡಿಸಿದರು. ಮಧ್ಯಾಹ್ನ 2 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೆ ತೀವ್ರ ವಿಚಾರಣೆ ನಡೆದಿದ್ದು, ದೂರುದಾರನ ಹೇಳಿಕೆಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ. ಈ ವಿಚಾರಣೆಯಲ್ಲಿ ದೂರುದಾರನು ತಾನು 2014ರಲ್ಲಿ ಧರ್ಮಸ್ಥಳವನ್ನು ತೊರೆದ ಬಳಿಕ ತಮಿಳುನಾಡಿನಲ್ಲಿದ್ದೆ ಎಂದು ಹೇಳಿದ್ದಾನೆ. 2023ರಲ್ಲಿ ಕೆಲವರು ತನ್ನನ್ನು ಸಂಪರ್ಕಿಸಿ, ಶವದೊಂದಿಗೆ ಶರಣಾಗುವಂತೆ ಸೂಚಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾನೆ, ಇದು ಪಿತೂರಿಯ ಭಾಗವಾಗಿತ್ತು ಎಂಬುದು SIT ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ, ದೂರುದಾರನಿಗೆ ಒದಗಿಸಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯ ರಕ್ಷಣೆಯನ್ನು SIT ರದ್ದುಗೊಳಿಸಿದೆ.



Related posts

ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್​ ಪತನ: ನಾಗೇಂದ್ರ ರಾಜಿನಾಮೆಗೆ ಸಿಎಂ ಸೂಚನೆ

Mumbai News Desk

ಎಸ್ ಎಸ್ ಎಲ್ ಸಿ ಫಲಿತಾಂಶ -2025ಕೆ ಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ ಚಿತ್ರಾಪು, ಮುಲ್ಕಿ ವಿದ್ಯಾರ್ಥಿಗಳ ಸಾಧನೆ

Mumbai News Desk

ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ: ರಾಜ್ಯ ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Mumbai News Desk

ಕರ್ನಾಟಕದಲ್ಲಿ ನಾಳೆಯಿಂದ ಜೂನ್ 6ರ ವರೆಗೆ ಮದ್ಯ ಮಾರಾಟ ಬಂದ್

Mumbai News Desk

ಕರ್ನಾಟಕ : ಋತುಚಕ್ರದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

Mumbai News Desk

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Mumbai News Desk