
ಮುಂಬಯಿ :
“ಸಂಘಟನೆಗಳ ಸಂಘಟನೆ” ಎಂದು ಹೆಸರಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ತನ್ನ 25ನೇ ಸಂಸ್ಥಾಪನಾ ದಿನಾಚರಣೆಯನ್ನು ಶಿಕ್ಷಕರ ದಿನದಂದು ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಮುಂಬಯಿ ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್‌ನಲ್ಲಿ ವೈಭವದಿಂದ ಆಚರಿಸಲಿದೆ.
2000ರ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನದಂದು ಸಂಸ್ಥಾಪಿತವಾದ ಈ ಸಮಿತಿ, ಕಳೆದ ಎರಡು ದಶಕಗಳಿಂದ ತುಳು-ಕನ್ನಡಿಗರ ಜನ್ಮಭೂಮಿಯಾದ ಪರಶುರಾಮ ಸೃಷ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರಾಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ಯಶಸ್ವಿಯಾಗಿದೆ. ಎಂಜಿನಿಯರ್‌ಗಳು, ಡಾಕ್ಟರುಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪನಿ ಸೆಕ್ರೆಟರಿಗಳು, ಡಾಕ್ಟರೇಟ್ ಪದವೀಧರರು, ಬ್ಯಾಂಕರ್‌ಗಳು, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ಸಮಾಜ ಸೇವಕರು, ರಾಜಕೀಯ ನಾಯಕರು ಸೇರಿದ ಅನೇಕ ಗಣ್ಯರ ಒಗ್ಗಟ್ಟಿನಿಂದ ಈ ಸಮಿತಿ ಬೆಳೆಯಿತು.
ಕಾರ್ಯಕ್ರಮದ ವಿಶೇಷತೆಗಳು
ಕಾರ್ಯಕ್ರಮಕ್ಕೆ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಉಪಸ್ಥಿತರಿದ್ದು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ವಹಿಸಲಿದ್ದಾರೆ.
ಶ್ರೀ ದಿಗಂಬರ ಜೈನ ಮಠ, ಮೂಡಬಿದಿರೆ, ದಕ್ಷಿಣ ಕನ್ನಡ ಜಿಲ್ಲೆಯ ಜಗದ್ಗುರು ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರ್ ಯು.ಟಿ. ಖಾದರ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿರಲಿದ್ದಾರೆ.
ಗೌರವ ಪುರಸ್ಕಾರಗಳು
ಬೆಳ್ಳಿ ಹಬ್ಬದ ಅಂಗವಾಗಿ ಸಮಾಜಸೇವೆ ಹಾಗೂ ಸಂಘಟನೆಗಳ ಬಲವರ್ಧನೆಗೆ ತಮ್ಮದೇ ಆದ ಕೊಡುಗೆ ನೀಡಿದ 25 ತುಳು-ಕನ್ನಡ ಸಂಘ ಸಂಸ್ಥೆಗಳಿಗೆ ವಿಶೇಷ ಗೌರವ ಪುರಸ್ಕಾರ ನೀಡಲಾಗುತ್ತಿದೆ.
ಅವುಗಳೆಂದರೆ :
- ಮೊಗವೀರ ವ್ಯವಸ್ಥಾಪಕ ಮಂಡಳಿ
- ಬಂಟರ ಸಂಘ, ಮುಂಬಯಿ
- ಬಿಲ್ಲವರ ಅಸೋಸಿಯೇಶನ್, ಮುಂಬಯಿ
- ಬಿ.ಎಸ್.ಕೆ.ಬಿ. ಅಸೋಸಿಯೇಶನ್, ಸಯಾನ್
- ಬಾಂಬೆ ಬಂಟ್ಸ್ ಅಸೋಸಿಯೇಶನ್
- ದಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್
- ಒಕ್ಕಲಿಗರ ಸಂಘ, ಮಹಾರಾಷ್ಟ್ರ
- ದೇವಾಡಿಗ ಸಂಘ, ಮುಂಬಯಿ
- ಸಾಫಲ್ಯ ಸೇವಾ ಸಂಘ
- ಭಂಡಾರಿ ಸೇವಾ ಸಮಿತಿ
- ಅಖಿಲ ಕರ್ನಾಟಕ ಜೈನ್ ಸಂಘ
- ಕುಲಾಲ ಸಂಘ, ಮುಂಬಯಿ
- ಗಾಣಿಗ ಸಮಾಜ, ಮುಂಬಯಿ
- ಪದ್ಮಶಾಲಿ ಸಮಾಜ ಸೇವಾ ಸಂಘ
- ಹೆಗ್ಗಡೆ ಸೇವಾ ಸಂಘ
- ತೀಯಾ ಸಮಾಜ, ಮುಂಬಯಿ
- ರಜಕ ಸಂಘ, ಮುಂಬಯಿ
- ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್
- ಬಿಲ್ಲವ ಸೇವಾ ಸಂಘ, ಕುಂದಾಪುರ – ಮುಂಬಯಿ
- ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ
- ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್
- ಜವಾಬ್
- ಶಾಫಿ ವೆಲ್ಫೇರ್ ಅಸೋಸಿಯೇಶನ್
- ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್
- ಇತರ ಪ್ರಮುಖ ಸಂಘ ಸಂಸ್ಥೆಗಳು
ಸಮಿತಿಯ ಸಾಧನೆಗಳು
ಸಮಿತಿಯ ಹೋರಾಟದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ಮಹತ್ತರವಾದ ಹಲವು ಯೋಜನೆಗಳು ಕಾರ್ಯರೂಪ ಪಡೆದಿವೆ.
ನಾಗಾರ್ಜುನ ವಿದ್ಯುತ್ ಯೋಜನೆ (ಈಗ ಆದಾಣಿ ಪವರ್)
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ
ಮಂಗಳೂರು–ಬೆಂಗಳೂರು ರೈಲು ಸಂಪರ್ಕ ಮರು ಪ್ರಾರಂಭ ಹಾಗೂ ಬ್ರಾಡ್ ಗೇಜ್ ಪರಿವರ್ತನೆ
ಗರೀಬ್ ರಥ್ ರೈಲು ಸೇವೆ – ಮುಂಬಯಿ–ಮಂಗಳೂರು ನಡುವೆ
ಮಂಗಳೂರು–ಬೈಂದೂರು 6 ಲೇನ್ ಹೆದ್ದಾರಿ – ರೂ.700 ಕೋಟಿ ಕೇಂದ್ರ ಹೂಡಿಕೆ
ವಿಶೇಷ ಆರ್ಥಿಕ ವಲಯಗಳು (SEZ) ಮತ್ತು ಐಟಿ ಉದ್ಯಾನವನಗಳು
ಕುದುರೆಮುಖ ಐರನ್ ಓರ್ ಕಂಪೆನಿಗೆ ಲೀಸ್ ವಿಸ್ತರಣೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 10% ಉದ್ಯಮೀಕರಣ ಮಿತಿ
ಪ್ರತೀ ಕೈಗಾರಿಕೆಯಲ್ಲಿ 33% ಹಸಿರು ವಲಯ ಕಡ್ಡಾಯ
317 ಕಿಮೀ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ
24×7 ವಿದ್ಯುತ್ ಪೂರೈಕೆಗಾಗಿ ಹೋರಾಟ
ಇತ್ತೀಚೆಗೆ, 2025ರ ಆಗಸ್ಟ್ 16ರಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚನೆ
ನಾಯಕತ್ವ ಹಾಗೂ ಸಮಿತಿ ಸದಸ್ಯರು
ಈ ಸಮಿತಿಯ ಬೆನ್ನೆಲುಬಾಗಿರುವವರು –
ಗೌರವಾಧ್ಯಕ್ಷ : ಪದ್ಮವಿಭೂಷಣ ಡಾ. ಬಿ.ಎಂ. ಹೆಗ್ಡೆ
ಗೌರವ ಪ್ರಧಾನ ಕಾರ್ಯದರ್ಶಿ : ಮುಂಡ್ಕೂರು ಸುರೇಂದ್ರ ಸಾಲಿಯಾನ್
ಉಪಾಧ್ಯಕ್ಷರು : ಪಿ. ಧನಂಜಯ ಶೆಟ್ಟಿ, ಜಗದೀಶ್ ಅಧಿಕಾರಿ, ಹಿರಿಯಡ್ಕ ಮೊಹನ್ ದಾಸ್, ಡಾ. ಸುರೇಂದ್ರಕುಮಾರ್ ಹೆಗ್ಡೆ, ಚಂದ್ರಶೇಖರ ಆರ್. ಬೆಲ್ಚಡ, ನ್ಯಾ. ಆರ್.ಎಂ. ಭಂಡಾರಿ, ಜಿತೇಂದ್ರ ಗೌಡ, ನ್ಯಾ. ಮೊಹಿದಿನ್ ಮುಂಡ್ಕೂರು, ಸಿಎ. ಐ.ಆರ್. ಶೆಟ್ಟಿ, ನ್ಯಾ. ಶಶಿಧರ್ ಯು. ಕಾಪು, ಡಾ. ಆರ್.ಕೆ. ಶೆಟ್ಟಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಶ್ರೀನಿವಾಸ್ ಸಾಫಲ್ಯ, ಗಿರೀಶ್ ಬಿ. ಸಾಲಿಯಾನ್
ಜಿಲ್ಲಾ ಕಾರ್ಯಾಧ್ಯಕ್ಷ : ಹರೀಶ್ ಕುಮಾರ್ ಎಂ. ಶೆಟ್ಟಿ
ಜಿಲ್ಲಾ ಕಾರ್ಯದರ್ಶಿಗಳು : ಜಿ.ಟಿ. ಆಚಾರ್ಯ, ಸುರೇಂದ್ರ ಮೆಂಡನ್
ಜಿಲ್ಲಾ ಕೋಶಾಧಿಕಾರಿ : ಪ್ರಭಾಕರ ಬಂಗೇರ ಕಾರ್ಕಳ
ಎನ್.ಆರ್.ಐ. ಉಪಾಧ್ಯಕ್ಷ : ಡಾ. ಫ್ರಾಂಕ್ ಫರ್ನಾಂಡಿಸ್
ಗೌರವ ಕಾರ್ಯದರ್ಶಿಗಳು : ದೇವದಾಸ್ ಕುಲಾಲ್, ಸಿ.ಎಸ್. ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ
ಗೌರವ ಕೋಶಾಧಿಕಾರಿ : ಸದಾನಂದ ಎನ್. ಆಚಾರ್ಯ
ಗೌರವ ಸಹಾಯಕ ಕೋಶಾಧಿಕಾರಿಗಳು : ತೋನ್ಸೆ ಸಂಜೀವ ಪೂಜಾರಿ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ
ಮಾಜಿ ಅಧ್ಯಕ್ಷರು : ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ ದೇವಾಡಿಗ, ಎಲ್.ವಿ. ಅಮಿನ್, ಪ್ರವೀಣ್ ಭೋಜ ಶೆಟ್ಟಿ, ಬಿ. ರಮಾನಂದ ರಾವ್, ಹರೀಶ್ ಜಿ. ಅಮೀನ್, ಸೂರ್ಯಕಾಂತ್ ಜಯ ಸುವರ್ಣ, ವಿಲ್ಸನ್ ಫೆರ್ನಾಂಡಿಸ್, ಲಕ್ಷ್ಮಣ ಸಿ. ಪೂಜಾರಿ
ವಕ್ತಾರ : ದಯಾಸಾಗರ ಚೌಟ
ಸದಸ್ಯರು : ವಿರಾರ್ ಶಂಕರ್ ಶೆಟ್ಟಿ, ಜಯಂತ್ ಕೆ. ಶೆಟ್ಟಿ, ರವಿ ದೇವಾಡಿಗ, ನ್ಯಾ. ಗುಣಕರ ಶೆಟ್ಟಿ, ವಾಸು ದೇವಾಡಿಗ, ಕಿಶೋರ್ ಕುಮಾರ್ ಕುತ್ತ್ಯಾರ್, ಸಂತೋಷ್ ರೈ ಬೆಳ್ಳಿಪಾಡಿ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ಜನಾರ್ಧನ ದೇವಾಡಿಗ, ರವಿರಾಜ್ ಕಲ್ಯಾಣಪುರ, ಪದ್ಮನಾಭ ಸಸಿಹಿತ್ಲು, ತುಳಸಿದಾಸ್ ಎಲ್. ಅಮಿನ್, ಡಾ. ಪ್ರಭಾಕರ್ ಶೆಟ್ಟಿ ಬೋಳ, ಉದಯ ಅಧಿಕಾರಿ, ನ್ಯಾ. ದಯಾನಂದ ಶೆಟ್ಟಿ, ಉತ್ತಮ್ ಶೆಟ್ಟಿಗಾರ್, ಕೃಷ್ಣಕುಮಾರ್ ಎನ್. ಬಂಗೇರ, ದಿವಾಕರ್ ಶೆಟ್ಟಿ ಪೋಸ್ರಾಲ್, ಪ್ರಕಾಶ್ ಶೆಟ್ಟಿ ಸುರತ್ಕಲ್, ನ್ಯಾ. ಮೋರ್ಲಾ ರತ್ನಾಕರ್ ಶೆಟ್ಟಿ, ಲೋಕನಾಥ್ ಎಂ. ಪೂಜಾರಿ, ಸುಧಾಕರ್ ಉಚ್ಚಿಲ್, ರಾಮಚಂದ್ರ ಗಣಿಗ ಎಂ.ಎನ್. ಕರ್ಕೇರ, ನ್ಯಾ. ಸಂತೋಷ್ ಕುಮಾರ್ ಹೆಗ್ಡೆ, ಕರುಣಾಕರ ಹೇಜ್ಮಾಡಿ, ಚಿತ್ರಾಪು ಕೆ.ಎಂ. ಕೋಟ್ಯಾನ್, ಪದ್ಮನಾಭ ಪೂಜಾರಿ, ಬಾಲಕೃಷ್ಣ ಪಿ. ಭಂಡಾರಿ, ಗಂಗಾಧರ್ ಎನ್. ಗೌಡ, ವಿಶ್ವನಾಥ ಹೆಗ್ಡೆ, ಅಶೋಕ್ ಸುವರ್ಣ, ರಾಮಣ್ಣ ದೇವಾಡಿಗ.
ಅಹ್ವಾನ
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ತನ್ನ ಬೆಳ್ಳಿ ಹಬ್ಬದ ಈ ಸಂಭ್ರಮಕ್ಕೆ ಸಮಾಜದ ಎಲ್ಲ ವರ್ಗದ ಗಣ್ಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗೌರವಾಧ್ಯಕ್ಷ ಡಾ. ಬಿ.ಎಂ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ವಕ್ತಾರ, ಕಾರ್ಯಕಾರಿ ಸದಸ್ಯರು ವಿನಂತಿ ಮಾಡಿದ್ದಾರೆ.




