32 C
Mumbai
March 7, 2026
Mumbai News Kannada
ಮುಂಬಯಿ

ಮರಾಠ ಕೋಟಾ ಬೇಡಿಕೆಗೆ ಸರ್ಕಾರದ ಒಪ್ಪಿಗೆ, ಪ್ರತಿಭಟನೆ ಅಂತ್ಯ





ಮರಾಠರಿಗೆ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂಬ ತಮ್ಮ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡಿದ್ದು, ಮರಾಠವಾಡ ಪ್ರದೇಶದ ಮರಾಠಿಗರಿಗೆ ಕುಂಬಿ ಸ್ಥಾನಮಾನ ನೀಡುವ ಹೈದರಾಬಾದ್ ಗೆಜೆಟ್ ಅನುಷ್ಠಾನದ ಕುರಿತು ಅಧಿಕೃತ ಸರಕಾರಿ ನಿರ್ಣಯ ಸ್ವೀಕರಿಸಿದ ನಂತರ ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಪಾಟೀಲ್ ಆಂದೋಲನವನ್ನು ಹಿಂತೆಗೆದುಕೊಂಡಿದ್ದಾರೆ.
ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತ್ರತ್ವದ ಸರಕಾರಿ ನಿಯೋಗವು ಅಜಾದ್ ಮೈದಾನದಲ್ಲಿ ಅವರನ್ನು ಭೇಟಿಯಾದ ನಂತರ, ಜಾರಂಗೆ ಅವರು ಈ ಘೋಷಣೆ ಮಾಡಿದರು,ಅಲ್ಲಿ ಮರಾಠ ಕಾರ್ಯಕರ್ತರು ಕಳೆದ ಐದು ದಿನಗಳಿಂದ ಅನಿದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಿಯೋಗವು ಜಾರಂಗೆ ಪಾಟೀಲ್ ಅವರಿಗೆ ಸರ್ಕಾರಿ ನಿರ್ಣಯದ ಕರಡನ್ನು ಹಸ್ತಾಂತರಿಸಿ ಅವರ ಬೇಡಿಕೆಗೆ ಒಪ್ಪಿಗೆ ನೀಡಿತು.
” ನಾವು ಕರಡು ಪ್ರತಿಯನ್ನು ಸ್ವೀಕರಿಸಿದ್ದೇವೆ ಮತ್ತು ತಜ್ಞರ ಗುಂಪು ಅದನ್ನು ಒಂದು ಗಂಟೆಯಲ್ಲಿ ಅಧ್ಯಯನ ಮಾಡುತ್ತದೆ. ಅವರಿಂದ ಅನುಮೋದನೆ ಪಡೆದ ನಂತರ ಸರ್ಕಾರ ಒಂದು ಗಂಟೆಯಲ್ಲಿ ಸರ್ಕಾರಿ ನಿರ್ಣಯವನ್ನು ಹೊರಡಿಸುತ್ತದೆ. ಇತರ ಮೂರು ಗೆಜೆಟ್ ಗಳಿಗೆ ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತದೆ. ಪಾಟೀಲ್ ಅವರ ಎಂಟು ಬೇಡಿಕೆಗಳಲ್ಲಿ ಆರು ಬೇಡಿಕೆಗಳನ್ನು ಅಂಗೀಕರಿಸಲಾಯಿತು.
ಹೈದರಾಬಾದ್ ಗೆಜೆಟ್ ಅನ್ನು ತಕ್ಷಣದಿಂದ ಜಾರಿಗೆ ತರಲು ಸರ್ಕಾರ ಒಪ್ಪಿಕೊಂಡಿದೆ, ಹಾಗೂ 2023 ಮತ್ತು 2024ರಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮರಾಠ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಉಳಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಒಪ್ಪಿಕೊಂಡಿತು. ಮೀಸಲಾತಿಗಾಗಿ ತಮ್ಮ ಜೀವನವನ್ನು ಅಂತ್ಯ ಗೊಳಿಸಿದ ಮರಾಠ ಯುವಕರಿಗೆ ನಗದು ಪರಿಹಾರದ ಜೊತೆಗೆ ಯುವಕರ ಕುಟುಂಬ ಸದಸ್ಯರಿಗೆ ರಾಜ್ಯ ಸಾರಿಗೆ ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗಗಳನ್ನು ನೀಡಲು ನಿಯೋಗ ಒಪ್ಪಿಕೊಂಡಿದೆ. ರಾಜ್ಯ ಸರ್ಕಾರವು ಕುಂಬಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಂಡುಕೊಂಡಿದ್ದು ಅವುಗಳ ಆಧಾರದ ಮೇಲೆ ಕುಂಬಿ ಪ್ರಮಾಣ ಪತ್ರಗಳನ್ನು ವಿತರಿಸಲು ತಾಲೂಕು ಮಟ್ಟದ ಸಮಿತಿಗಳನ್ನು ಜಾರಂಗೆ ಪಾಟೀಲ್ ಕೋರಿದ್ದರು. ನೀಡಲಾದ ಪ್ರಮಾಣ ಪತ್ರಗಳ ಜಾತಿ ದೃಢೀಕರಣ ಸಮಿತಿಗಳಿಂದ ತಕ್ಷಣದ ಅನುಮೋದನೆ ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಮರಾಠ ಸಮುದಾಯವು ಐತಿಹಾಸಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ತಿಳಿಸುವ ಅಧಿಕೃತ ಸರ್ಕಾರಿ ದಾಖಲೆಗಳು ಗೆಜೆಟ್ ನಲ್ಲಿವೆ.ಇದಕ್ಕಾಗಿ ಮರಾಠ ಕಾರ್ಯಕರ್ತ ಮನೋಜ್ ಜಾರಂಗೆ ಪಾಟೀಲ್ ಹೈದರಾಬಾದ್ ಗೆಜೆಟ್ ಅನುಷ್ಠಾನಕ್ಕೆ ಮಾತ್ರವಲ್ಲದೆ ಸತಾರಾ ಮತ್ತು ಬಾಂಬೆ ಗೆಜೆಟ್ ಗಳ ದಾಖಲೆಗಳನ್ನು ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ – ಭಾಯಂದರ್ ಶಾಖೆಯ ಮಹಿಳಾ ವಿಭಾಗ, ಯುವ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಾ ಸತೀಶ್ ಶೆಟ್ಟಿ ಗೆ ಶೇ 92 ಅಂಕ.

Mumbai News Desk

ಮುಂಬೈ ಒತ್ತೆಯಾಳು ಬಿಕ್ಕಟ್ಟಿನ ಹಿಂದಿನ ವ್ಯಕ್ತಿ ರೋಹಿತ್ ಆರ್ಯ ಯಾರು? ಆತನ ಹಿನ್ನೆಲೆ ಏನು?

Mumbai News Desk

ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶ.

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿ, ಮುಂಬಯಿ ಇವರ ವತಿಯಿಂದ ಅರಿಶಿನ ಕುಂಕುಮ ಹಾಗೂ  ವಾರ್ಷಿಕ ಸಭೆ

Mumbai News Desk

ಕಿಸನ್ ನಗರ ಶ್ರೀ ಅಯ್ಯಪ್ಪ ಸೇವ ಸಮಿತಿಯ 23 ನೇ ವಾರ್ಷಿಕ ಮಹಾಪೂಜೆ

Mumbai News Desk