
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಡುಪಿ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾನ, ಸಂಯುಕ್ತ ಆಶ್ರಯದಲ್ಲಿ 14 ಮತ್ತು 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟ ವಿಕ್ರಾಂತಪರ್ವ 2025 ಇವರ ಸಹಭಾಗಿತ್ವದಲ್ಲಿ ದಿನಾಂಕ 11.09.2025 ಗುರುವಾರ ನಡೆದಂತಹ ಜಿಲ್ಲಾ ಮಟ್ಟದ 17ರವಯೋಮಿತಿ ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು. ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ವಿಭಾಗಿಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಸುವರ್ಣ ಮತ್ತು ಯತಿನ್ ಬಂಗೇರ ರವರು ತರಬೇತಿಯನ್ನು ಪಡೆಡಿದ್ದಾರೆ.
ಶಾಲಾ ಸಂಚಾಲಕರಾದ ಸುಕುಮಾರ್ ಸಿ ಶ್ರೀ ಯಾನ್ ಹಾಗೂ ಶಾಲಾ ಮುಖೋಪಾಧ್ಯಾಯನಿ ಪದ್ಮಶ್ರೀ ಸುರೇಶ್ ರವರು ಶುಭವನ್ನು ಕೋರಿದ್ದಾರೆ.

.




