32 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ, ಜೋಗೇಶ್ವರಿ ಪೂರ್ವ – ಸೆ. 22ರಿಂದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವ





ಮುಂಬಯಿ : ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ, ಕೃಷ್ಣ ನಗರ, ಗುಂಪಾ ತೇಕಡಿ, ಜೋಗೇಶ್ವರಿ ಪೂರ್ವ ಇಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಸೆ. 22 ರಿಂದ ಅ. 2ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಸೆ. 22 ರಂದು ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆ, ಪುಣ್ಯಾಹ ವಾಚನ, ಘಟ ಸ್ಥಾಪನೆ, ಪಂಚಾಮೃತ ಅಭಿಷೇಕ, ನವಕ ಪ್ರಧಾನ ಕಲಶಾಭಿಷೇಕ, ದ್ವಾದಶ ನಾರಿಕೇಳ ಗಣಯಾಗ, ಮಹಾಪೂಜೆ. ಸೆ. 23 ರಂದು ಬೆಳಿಗ್ಗೆ 10ಕ್ಕೆ ಪಂಚಬ್ರಹ್ಮ ಮಂತ್ರಯಾಗ, ಮಹಾಪೂಜೆ, ಸೆ. 24ರಂದು ಬೆಳಿಗ್ಗೆ 10ಕ್ಕೆ ಸ್ವಯಂವರ ಪಾರ್ವತಿ ಮಂತ್ರಯಾಗ, ಮಹಾಪೂಜೆ, ಸೆ. 25ರಂದು ಬೆಳಿಗ್ಗೆ 10ಕ್ಕೆ ಭಾಗೈಕ ಮತ್ಸಸೂಕ್ತ ಯಾಗ, ಮಹಾಪೂಜೆ, ಸೆ. 26 ರಂದು ಬೆಳಿಗ್ಗೆ 8.30ಕ್ಕೆ ಲಲಿತಾ ಪಂಚಮಿಯ ಪ್ರಯುಕ್ತ ಸಾಮೂಹಿಕ ಚಂಡಿಕಾಯಾಗ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ, ಮಹಾಪೂಜೆ, ಸೆ. 27 ರಂದು ಬೆಳಿಗ್ಗೆ 10 ಕ್ಕೆ ಲಕ್ಷ್ಮಿ ಹೃದಯ ನಾರಾಯಣ ಹೃದಯ ಮಂತ್ರ ಯಾಗ, ಮಹಾಪೂಜೆ, ಸೆ. 28 ರಂದು ಬೆಳಿಗ್ಗೆ 10ಕ್ಕೆ ವಾಯುಸ್ತುತಿ ಪುರಶ್ಚ ಗಣಯಾಗ, ಮಹಾಪೂಜೆ, ಸೆ. 29 ರಂದು ಬೆಳಿಗ್ಗೆ 10ಕ್ಕೆ ಶ್ರೀಸೂಕ್ತ ಯಾಗ, ಮಹಾಪೂಜೆ, ಸೆ. 30 ರಂದು ಬೆಳಿಗ್ಗೆ 10ಕ್ಕೆ ನವಾಕ್ಷರೀ ಮಂತ್ರಯಾಗ ಮಹಾಪೂಜೆ, ಅ. 1 ರಂದು ಬೆಳಿಗ್ಗೆ 10ಕ್ಕೆ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ. ಅ. 2 ರಂದು ಬೆಳಿಗ್ಗೆ 10ಕ್ಕೆ ವಿಜಯದಶಮಿ ಪ್ರಯುಕ್ತ ದುರ್ಗಾ ಹೋಮ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ ರಾತ್ರಿ 7.00ರಿಂದ ಕಾಲಭೈರವ ದೇವರಿಗೆ ರಂಗ ಪೂಜೆ ನಡೆಯಲಿರುವುದು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಜಗದಂಬಾ ಪರಿವಾರ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಪರವಾಗಿ ಅಧ್ಯಕ್ಷರು ಹಾಗೂ ಆಡಳಿತ ಮೊಕ್ತೇಸರರಾದ ಸಂಜೀವ ಪಿ. ಪೂಜಾರಿ, ಟ್ರಷ್ಟಿ ಹಾಗೂ ಗೌ. ಕಾರ್ಯದರ್ಶಿ ಶೇಖರ ಕರ್ಕೇರ, ಟ್ರಷ್ಟಿ ಹಾಗೂ ಹಾಗೂ ಉಪಾಧ್ಯಕ್ಷ ಎಚ್ ಬಾಬು ಪೂಜಾರಿ, ಟ್ರಷ್ಟಿ ಹಾಗೂ ಗೌ. ಕೋಶಾಧಿಕಾರಿ ಡಿ. ಟಿ. ಕುಂದರ್, ಎಂ ಸಿ ಸುವರ್ಣ, ಜಿ ಟಿ ಆಚಾರ್ಯ, ಸುಂದರ್ ಸಿ ಪೂಜಾರಿ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸಂತೋಷ್ ಜಿ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ದೇವದಾಸ್ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ಜಯಕರ್ ಶೆಟ್ಟಿ, ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಕೋಟ್ಯಾನ್ ಪಡುಬಿದ್ರಿ, ಭಜನಾ ಭುವಾಜಿ ಲವಕುಶ್ ಗುಪ್ತ ಹಾಗೂ ಟ್ರಸ್ಟ್ ಗಳು, ಸೇವಾ ಸಮಿತಿ ಭಜನಾ ಮಂಡಳಿ ಮತ್ತು ಮಹಿಳಾ ವಿಭಾಗ ವಿನಂತಿಸಿದೆ.



Related posts

ಡಿ.13 ರಂದು ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿಯ 22ನೇ ವರ್ಷದ ಅಯ್ಯಪ್ಪ ಮಹಾಪೂಜೆ. 

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ ಇದರ ಬೆಳ್ಳಿ ಹಬ್ಬದ ಸಲುವಾಗಿ ಜ.14 ರಂದು ಸಾರ್ವಜನಿಕ ಭಜನಾ ಕಾರ್ಯಕ್ರಮ

Mumbai News Desk

ಜ.11. ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ 64ನೇ ವಾರ್ಷಿಕೋತ್ಸವ ಮತ್ತು ಪಾರಿತೋಷಕ ವಿತರಣಾ ಸಮಾರಂಭ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಜ. 25: ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk