
ಭಕ್ತರ ಸೇವೆಯೇ ಪರ್ಯಾಯ: ಶೀರೂರು ವೇದವರ್ಧನತೀರ್ಥ ಶ್ರೀ
ಮುಂಬಯಿ,ಸೆ.13.:ಭಕ್ತರಕಷ್ಟ-ಕಾರ್ಪಣ್ಯ ಗಳನ್ನು ಆಲಿಸುವುದು ಬಹುದೊಡ್ಡ ಸೇವೆ ಯಾಗುತ್ತದೆ. ಎಲ್ಲ ಭಾರ ಸೇವೆಯೇ ಪರ್ಯಾಯ ಅಂದರೆ ಭಕ್ತರ ವರ್ಯಾಯ ವಾಗಿದೆ. ಭಕ್ತರೆಲ್ಲರ ಜವಾಬ್ದಾರಿಯೇ ಈ ಪರ್ಯಾಯದ ಸೇವೆಯಾಗಿದೆ. ಸೇವೆಯ ಫಲವೇ ಪ್ರಸಾದವಾಗಿದ್ದು ಪ್ರಸಾದ ಸ್ವೀಕರಿ ಸಲು ಭಕ್ತರೆಲ್ಲರೂ ಬೇಕಾಗಿರುತ್ತಾರೆ. ಆದ್ದ రెండో ఎల్లడు, ఎట్నరెడ్డు ఒళగలండు ఈ ಪರ್ಯಾಯ ನೆರವೇರಿಸಿದರೆ ಇಲ್ಲಿನ ಪೂಜೆ ಗಳೆಲ್ಲವೂ ಸಂಪೂರ್ಣಗೊಳ್ಳುವುದು ಎಂದು ಉಡುಪಿಯ ಅಷ್ಟಮಠಗಳಲ್ಲೊಂದಾದ ಶ್ರೀ ಶೀರೂರು ಮಠದ ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ತಿಳಿಸಿದರು
ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ಯ ಭವನದ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಮಂಗಳವಾರ ನಡೆದ ಶ್ರೀ ವಿಟ್ಟಲ ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲಮಹಾಸಂಸ್ಥಾನಂಶ್ರೀವಾಮನತೀರ್ಥ ಪರಂಪರೆಯ ಮಠದ ಶ್ರೀ ಶೀರೂರು ಪರ್ಯಾಯ – 2026 ಪೂರ್ವಭಾವಿ ಸಭೆ ಯನ್ನು ಶ್ರೀಗಳು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿ, ಅನ್ನದಾನದ ಜತೆಗೆ ವಿವಿಧ ಸೇವೆಗಳನ್ನು ಖುದ್ದಾಗಿ ನಿಭಾಯಿಸಿ ದಾಗ ಆಧ್ಯಾತ್ಮಿಕ ಅನುಭವದ ಜತೆಗೆ ದೇವರ ಸನ್ನಿಧಾನವೂ ಪ್ರತಿಷ್ಠಿತಗೊಂಡು ಭಕ್ತರ ಸೇವೆ ಫಲಪ್ರದಗೊಳ್ಳುತ್ತದೆ. ಆದ್ದರಿಂದ ಮುಂಬಯಿ ವಾಸಿ ಭಕ್ತರೆಲ್ಲರೂ ನಮ್ಮ ಪರ್ಯಾಯವನ್ನು ಸ್ವತಃ ಅನುಭವಿಸಬೇಕು ಎಂದರು.
*ಶ್ರೀಗಳು ಮಠದ ಶಿಲಾಮಯ ಮಂದಿರ
ದೇವರಿಗೆ ಆರತಿ ನೆರವೇರಿಸಿದರು. ಬಳಿಕ ಚೆಂಡೆ-ವಾದ್ಯಗಳ ನೀನಾದದೊಂದಿಗೆ ಶ್ರೀಗಳನ್ನು ಭಕ್ತರು ಸಭಾಗೃಹದ ವೇದಿಕೆಗೆ ಬರಮಾಡಿಕೊಂಡರು. ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಮಠದ ಪುರೋಹಿತ ವರ್ಗ ಹಾಗೂ ಮುಂಬಯಿಯ ಸಮಸ್ತ ಭಕ್ತರ ಪರವಾಗಿ ಶ್ರೀ ಪೇಜಾವರ ಮಠದ ಪ್ರಧಾನ.
ವ್ಯವಸ್ಥಾಪಕ ಡಾ|ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿದರು.
ಉಡುಪಿ ಶಾಸಕ ಹಾಗೂ ಶೀರೂರು ಪರ್ಯಾಯ ಉಡುಪಿ ಸಮಿತಿಯ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಮತ್ತು ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ವಿಶೇಷವಾಗಿ ಉಪಸ್ಥಿತರಿದ್ದು ಶ್ರೀಶೀರೂರುಪರ್ಯಾಯದ
ವೈಶಿಷ್ಟ್ಯ, ತಿಳಿಸಿ ಪರ್ಯಾಯದ ಯಶಸ್ಸಿಗೆ ವಿಶೇಷವಾಗಿ ಮುಂಬಯಿಯ ಶ್ರೀಕೃಷ್ಣನ ಭಕ್ತರು ಸ್ವತಃ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದರು.




ಸಭೆಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅವಿನಾಶ್ ಶಾಸ್ತ್ರಿ ಶ್ರೀ ಪೇಜಾವರ ಮಠ ಮುಂಬಯ ವ್ಯವಸ್ಥಾಪಕರಾದ ಶ್ರೀಹರಿ
ಭಟ್ ಪುತ್ತಿಗೆ. ನಿರಂಜನ್ ಗೋಗ್ಯ ಶ್ರೀಪಾಭಟ್, ಕೆ. ವಿಷ್ಣುಮೂರ್ತಿ ಆಚಾರ್ಯ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉಚ್ಚಿಲಶ್ರೀಪತಿ ಭಟ್, ಪೇಜಾವರ ಮಠದ ಅರ್ಚಕ ಉಂಡಾರುರಾಘವೇಂದ್ರ ಭಟ್, ವಿಷ್ಣುತೀರ್ಥ ಸಾಲಿ, ಶ್ರೀನಿವಾಸ ಭಟ್ ಪರೇಲ್, ಉದ್ಯಮಿಗಳಾದ ಡಾ| ಎಂ. ಎಸ್. ಆಳ್ವ ಎರ್ಮಾಳ್ ಹರೀಶ್ ಶೆಟ್ಟಿ, ಶರಣ್ ಶೆಟ್ಟಿ ಪಂಜಳ ಬೆಳ್ಳಕ್, ಧರ್ಮಪಾಲ್ ಯು. ದೇವಾಡಿಗ ,ಪದ್ಮನಾಭ ಎಸ್. ಪಯ್ಯಡೆ, ಅರವಿಂದ್ ಎ. ಶೆಟ್ಟಿ ಮೀರಾರೋಡ್, ತೆಳ್ಳಾರ್ ಮಹೇಶ್ ಶೆಟ್ಟಿ ,ಡಾ| ಎಂ. ನರೇಂದ್ರ, ಮಾಳ, ರಾಘವೇಂದ್ರ ಭಟ್, ಶೇಖರ್ ಜೆ.ಸಾಲ್ಯಾನ್, ಚಂದ್ರಶೇಖರ್ ಎಸ್ರ ಶೆಟ್ಟಿ ,ರಘುನಾಥ ಎನ್. ಶೆಟ್ಟಿ, ಮುಂಡೂರು ರತ್ನಾಕರ ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ನಂದನ್ ಮಲ್ಯ ಮಂಗಳೂರು, ಲಕ್ಷ್ಮೀಕಾಂತ್ ಪ್ರಭು, ಪಿ. ಡಿ. ಶೆಟ್ಟಿಸಯಾನ್, ಅಶೋಕ್ ಶೆಟ್ಟಿ ಬೊರಿವಲಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಶ್ಯಾಮಲಾ ಎ. ಶಾಸ್ತ್ರಿ ಮುಂದಾಳತ್ವದಲ್ಲಿ ಮದ್ದೇಶ ಭಜನ ಮಂಡಳಿ ಸಾಂತಾಕ್ರೂಜ್ ಹಾಗೂ ನಗರದ ವಿವಿಧ ಭಜನ ಮಂಡಳಿ ಗಳಿಂದ ಭಜನ ಕಾಠ್ಯಕ್ರಮ ನಡೆಯಿತು. ಶ್ರೀ ಶೀರೂರು ಪರ್ಯಾಯ ಮುಂಬಯಿ ಸಮಿತಿ ರಚಿಸಲಾಯಿತು. ಶೀರೂರು ಪರ್ಯಾಯ ಉಡುಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಸಿದರು. ಶೀರೂರು ಮಠದ ದಿವಾನ ಡಾ। ಉದಯ ಕುಮಾರ್ ಸರಳತ್ತಾಯ ಸ್ವಾಗತಿಸಿ ಕಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
—+
ಶ್ರೀ ವೇದವರ್ಧನತೀರ್ಥ
ಸ್ವಾಮೀಜಿಯವರ ಪ್ರಪ್ರಥಮ ಉಡುಪಿ ಶೀರೂರು ಪರ್ಯಾಯವನ್ನು ಈ ಬಾರಿ ವೈಭವದೊಂದಿಗೆ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಸ್ವಾಮೀಜಿಗಳು ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಧಾರ್ಮಿಕ ಬಂಧುಗಳು, ಭಗವಧ್ಯಕ್ಷರ ಕೂಡುವಿಕೆಯಿಂದ ಈ ಪರ್ಯಾಯವನ್ನು ಯಶಸ್ವಿಯಾಗಿಸಲು ಕೈಜೋಡಿಸಬೇಕು.
– ಯಶ್ ಪಾಲ್ ಸುವರ್ಣ
ಶಾಸಕರು ಉಡುಪಿ,
– ——–
– ಒಂದು ಪವಿತ್ರ ಪಲ್ಲಕಿ ಹೊರ ಬೇಕು ಅಂದರೆ ಅದಕ್ಕೆ ಹತ್ತಾರು ಜನರು ಹೆಗಲನ್ನು ಕೊಡಬೇಕು. ರಥವನು ಎಳೆಯಬೆಕಾದರೂ ಇಡೀ ಸಮಾಜ ಜತೆಗೂಡಬೇಕಾಗುತ್ತದೆ. ಯೋಗ ಭಾಗ್ಯವುಳ್ಳವರಿಗೆ ಮಾತ್ರ ಈ ಅವಕಾಶ ಪ್ರಾಪ್ತಿಯಾಗುತ್ತದೆ. అంతేయe 20260 అడు ಶೀರೂರು ಪರ್ಯಾಯದ ಸೇವೆಯ ಸದುಪಯೋಗ ಪಡೆದು ಧನ್ಯರಾಗಬೇಕು.
-ಗುರ್ಮೆ ಸುರೇಶ್ ಶೆಟ್ಟಿ
ಕಾಪು ಶಾಸಕರು
Show quoted text




