ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ ಲಭಿಸಿದೆ.
ಈ ಗೌರವವನ್ನು 2025ರ ಸೆಪ್ಟೆಂಬರ್ 18ರಂದು ಗೋವದಲ್ಲಿ ನಡೆದ ಆಲ್ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿಂಗ್ ಸಮಿಟ್‍ನಲ್ಲಿ, ಗೋವಾ ಸರ್ಕಾರದ ಸಹಕಾರ ಖಾತೆಯ ಮಾನ್ಯ ಸಚಿವರಾದ ಶ್ರೀ ಸುಬಾಶ್ ಶಿರೋಡ್ಕರ್ ಅವರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಬ್ಯಾಂಕ್ ಪರವಾಗಿ ಈ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿದವರು – ಸೂರ್ಯಕಾಂತ ಜಯ ಸುರ್ವಣ, ಕಾರ್ಯಧ್ಯಕ್ಷರು, ವಿದ್ಯಾನಂದ ಕರ್ಕೇರ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD & CEO), ಜೊತೆಗೆ ದಿನೇಶ್ ಸಾಲ್ಯಾನ್, ಸಂಯುಕ್ತ ವ್ಯವಸ್ಥಾಪಕ ನಿರ್ದೇಶಕರು (Jt. MD) ಹಾಗೂ
ಭಾಸ್ಕರ್ ರಾವ್, ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO).
ಈ ಸಾಧನೆ ಭಾರತ್ ಬ್ಯಾಂಕ್‌ನ ಅಚಲವಾದ ಬದ್ಧತೆ, ಭದ್ರತೆ ಮತ್ತು ದೃಢವಾದ ಅಪಾಯ ನಿರ್ವಹಣಾ ಕ್ರಮಗಳ ಸ್ಪಷ್ಟ ಸಾಕ್ಷಿಯಾಗಿದೆ.




