32 C
Mumbai
March 7, 2026
Mumbai News Kannada
ತುಳುನಾಡು

ಮೂಲ್ಕಿ : ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಬಪ್ಪನಾಡು ದೇವಸ್ಥಾನದಲ್ಲಿ ದೇವಕಾರ್ಯ ಮಾಡುವ ಶ್ರೀ ನಾರಾಯಣ ಭಟ್ ಎನ್. ಪಿಯವರಿಗೆ ಸನ್ಮಾನ






ಮೂಲ್ಕಿ ಹೊಸ ಅಂಗಣ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಮಾಡುವ ಕಾರ್ಯಕ್ರಮವು ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್‌ನ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಯಾವುದೇ ತಮಗೆ ವಹಿಸಿಕೊಟ್ಟ ಕೆಲಸವನ್ನು ಮಾಡುತ್ತಾ ಮುಂದುವರಿಯಬೇಕು. ಈ ತಿಂಗಳ ತಿಂಗಳಬೆಳಕು ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಭಟ್ ಎನ್. ಪಿಯವರಿಗೆ ಸನ್ಮಾನ ಮಾಡಿದ್ದೀರಿ. ಇದರಿಂದ ಇವರ ಕೆಲಸದ ಬಗ್ಗೆ ಜನರಿಗೆ ತಿಳಿಯುತ್ತದೆ. ದೇವಸ್ಥಾನದಲ್ಲಿ ಮಾಡುವ ದೇವಕಾರ್ಯ ದೇವರು ಮೆಚ್ಚುವಂತೆ ಮಾಡುತ್ತಾ ಬಂದ ವ್ಯಕ್ತಿಗೆ ಉತ್ತೇಜನ ಕೊಟ್ಟಂತಾಗುತ್ತದೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜಾ ರವರು ಹೊಸಅಂಗಣ ಪತ್ರಿಕೆಗೆ ೧೦ ವರ್ಷ ತುಂಬಿದೆ. ಮೂಲ್ಕಿಯಲ್ಲಿ ಏಕೈಕ ಪತ್ರಿಕೆ ಇರುವ ಪತ್ರಿಕೆಗೆ ನಾವೆಲ್ಲರೂ ಸಹಕರಿಸಿ ಈ ಪತ್ರಿಕೆಯೂ ಇನ್ನಷ್ಟು ವರ್ಷಗಳು ಯಾವುದೇ ಅಡೆತಡೆ ಇಲ್ಲದೆ ಹೊರ ಬರಬೇಕೆಂದು ಹೇಳಿದರು.
ಮೂಲ್ಕಿ ಬಪ್ಪನಾಡು ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಭಟ್ ಮಾತನಾಡಿ ಬಪ್ಪನಾಡಿನಲ್ಲಿ ದೇವಕಾರ್ಯ ಮಾಡುವ ಶ್ರೀ ನಾರಾಯಣ ಭಟ್ ಎನ್. ಪಿಯವರು ತನ್ನ ಕೆಲಸವನ್ನು ನಿಸ್ವಾರ್ಥದಿಂದ ನಿರಂತರವಾಗಿ ತನಗೆ ವಹಿಸಿಕೊಟ್ಟ ಕೆಲಸವನ್ನು ಒಳ್ಳೆಯ ರೀತಿಯಿಂದ ಮಾಡುತ್ತಾ ಬಂದಿದ್ದಾರೆ. ಇವರಿಗೆ ಸನ್ಮಾನ ಮಾಡಿದಕ್ಕೆ ವಂದನೆಗಳು, ಅದರಂತೆ ಹೊಸಅಂಗಣ ಪತ್ರಿಕೆಯು ಒಳ್ಳೆಯ ಲೇಖನಗಳಿಂದ ಹೊರಬರುತ್ತಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಲಯನ್ಸ್ ಪುಪ್ಪರಾಜ ಚೌಟ, ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಅಶೋಕ್ ಚಿತ್ರಾಪು, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಉದ್ಯಮಿ ಜೋನ್ ಕ್ವಾಡ್ರಸ್, ನಂದಾ ಪಾಯಸ್ ಹಳೆಯಂಗಡಿ, ದಿನೇಶ್ ಶೆಟ್ಟಿ, ನ್ಯಾಯವಾದಿ ರವೀಶ್ ಕಾಮತ್, ಅಬ್ದುಲ್ ರಾಜಾಕ್, ಜಯರಾಮ್ ಬಿ. ಎಸ್, ನಿವೃತ್ತ ಪೋಲಿಸ್ ಅಧಿಕಾರಿ ಕೆ ಎನ್ ಕೋಟ್ಯಾನ್, ಹಳೆಯಂಗಡಿ ಬಂಕಿ ನಾಯಕರು ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕೆ ಸಂಪಾದಕರಾದ ಹರಿಶ್ಚಂದ್ರ ಪಿ ಸಾಲಿಯಾನ್ ಸ್ವಾಗತಿಸಿದರು, ಜೆ.ಸಿ ದಿನೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು, ರವಿಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

.

.

.

.

.

.



Related posts

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ‘ಮಾತೃ ವೈಭವ’ ಸಂಭ್ರಮ; ಭಕ್ತಿಪರವಶತೆಯ ಹೊರೆಕಾಣಿಕೆ ಸಮರ್ಪಣೆ

Mumbai News Desk

ಮಂಗಳೂರು ಕುಲಾಲ ಭವನ ಉದ್ಘಾಟನೆ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ, ಸಿಎಂ ಆಗಮನಕ್ಕೆ ಮನವಿ

Mumbai News Desk

ಅಕ್ಷತಾ ಪೂಜಾರಿ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

Mumbai News Desk

ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Mumbai News Desk

ಮೂಲ್ಕಿ : ಚಿತ್ರಾಪು ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

Mumbai News Desk

ಯಕ್ಷಧ್ರುವ ಪಟ್ಲ ಸಂಭ್ರಮದ ಸಮಾರೋಪ ಸಮಾರಂಭ* 

Mumbai News Desk