
ಪಲಾವಾ ಕನ್ನಡಿಗರ ಫೌಂಡೇಶನ್, ಪಲಾವಾ–ಡೊಂಬಿವಲಿ : ನವೆಂಬರ್ 30ರಂದು 5ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
ಪಲಾವಾ ಕನ್ನಡಿಗರ ಫೌಂಡೇಶನ್ (ರಿ) ವತಿಯಿಂದ ನಾಡಿನ ನುಡಿ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 30ರಂದು, ಆದಿತ್ಯವಾರ, ಕಾಸಾರಿಯೋ ಸೆಂಟ್ರಲ್ ಕ್ಲಬ್ ಹೌಸ್, ಲೋಧಾ ಪಲಾವಾ ಫೇಸ್–1, ಕಲ್ಯಾಣ–ಶಿಲ್ ರಸ್ತೆ, ಡೊಂಬಿವಲಿ (ಪೂರ್ವ)ದಲ್ಲಿ ಆಚರಿಸಲಾಗುತ್ತಿದೆ.
ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 10:00: ಶ್ರೀ ಸತ್ಯನಾರಾಯಣ ಪೂಜೆ
ಸಂಜೆ 5:00: ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 8:30: ಸಭಾ ಕಾರ್ಯಕ್ರಮ
ರಾತ್ರಿ 9:30: ಪ್ರೀತಿ ಭೋಜನ
ಸಭಾ ಕಾರ್ಯಕ್ರಮದ ಅತಿಥಿಗಳು:
ಮುಖ್ಯ ಅತಿಥಿ:
ಶ್ರೀ ಸುಕುಮಾರ್ ಎನ್. ಶೆಟ್ಟಿ (ಅಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ)
ಗೌರವ ಅತಿಥಿಗಳು:
ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ (ಕಾರ್ಯಾಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ)
ಶ್ರೀ ಅರುಣ್ ಎಸ್. ಶೆಟ್ಟಿ (ಕಾರ್ಯಾಧ್ಯಕ್ಷರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬಯಿ – ಡೊಂಬಿವಲಿ ಪ್ರಾದೇಶಿಕ ಸಮಿತಿ)
ಶ್ರೀ ರವೀಂದ್ರ ವೈ. ಶೆಟ್ಟಿ (ಸಂಚಾಲಕರು, ಬಂಟರ ಸಂಘ ಮುಂಬಯಿ – ಭಿವಂಡಿ–ಬದ್ಲಾಪುರ ಪ್ರಾದೇಶಿಕ ಸಮಿತಿ)
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪಲಾವಾ ಕನ್ನಡಿಗರ ಫೌಂಡೇಶನ್ನ ಅಧ್ಯಕ್ಷ ಅವಿನಾಶ್ ಸಿದ್ದೇಶ್ವರೆ, ಗೌರವ ಪ್ರಧಾನ ಕಾರ್ಯದರ್ಶಿ ಕಿರಣ್ ರಾಜ್ ಕುಬಸದ್, ಉಪಾಧ್ಯಕ್ಷ ಹಾಗೂ ಗೌರವ ಕೋಶಾಧಿಕಾರಿ ಶಾಂತಾರಾಮ ಶೆಟ್ಟಿ, ಹಾಗು ಕಾರ್ಯಕಾರಿ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.




