32 C
Mumbai
March 7, 2026
Mumbai News Kannada
ಪ್ರಕಟಣೆ

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ





ಮೀರಾ ರೋಡ್: ಮುಂಬೈನ ಮೀರಾ ರೋಡ್ ಪ್ರದೇಶದ ಮೀರಾ ಗಾಂವ್, ಮೀರಾ ಸೊಸೈಟಿಯಲ್ಲಿ ನೆಲೆಸಿರುವ ಮತ್ತು ತುಳು-ಕನ್ನಡಿಗರಿಂದ ಸ್ಥಾಪಿಸಲ್ಪಟ್ಟಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ವರ್ಷದ 34ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಯನ್ನು ನವೆಂಬರ್ 30, ಭಾನುವಾರದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

​ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀಮಂತೂರು ಮಜಲು ಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಸಾರಥ್ಯದಲ್ಲಿ ಹಾಗೂ ಪ್ರಧಾನ ಅರ್ಚಕರಾದ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ಶ್ರೀ ಜಯಶೀಲ ಗುರುಸ್ವಾಮಿ ಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

ಸಮಯಕಾರ್ಯಕ್ರಮ
ಬೆಳಿಗ್ಗೆ 6:00 – 7:00ಗಣಹೋಮ
ಬೆಳಿಗ್ಗೆ 7:00 – 8:00ರುದ್ರಾಭಿಷೇಕ
ಬೆಳಿಗ್ಗೆ 9:30 – 10:30ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ
ಬೆಳಿಗ್ಗೆ 10:30 – 11:30ಶ್ರೀ ಜಯಶೀಲ ಗುರುಸ್ವಾಮಿ ನೇತೃತ್ವದಲ್ಲಿ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ
ಬೆಳಿಗ್ಗೆ 11:30 ಕ್ಕೆಪಡಿಪೂಜೆ (ಪಡಿಸೇವೆ) ಹಾಗೂ ಮಹಾ ಮಂಗಳಾರತಿ
ಮಧ್ಯಾಹ್ನ 12:30 ಕ್ಕೆಮಹಾ ಅನ್ನಸಂತರ್ಪಣೆ (ಪ್ರಸಾದ ವಿತರಣೆ)

ದೇವಸ್ಥಾನದ ಸ್ಥಾಪಕರಾದ ದಿವಂಗತ ವಿಶ್ವನಾಥ ಪೂಂಜ ಪರಿವಾರ, ಕೃಷ್ಣ ಶೆಟ್ಟಿ, ಪ್ರಧಾನ ಅರ್ಚಕರಾದ ಶ್ರೀ ಸಾಂತಿಂಜ ಮಾಧವ್ ಭಟ್, ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು ಹಾಗೂ ಮೀರಾ ಸೊಸೈಟಿ ಸಮಿತಿ ಸದಸ್ಯರು ಸಮಸ್ತ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಕಲಿಯುಗ ವರದಾತ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ.



Related posts

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk

ಅಗಸ್ಟ್ 23, ತುಲುವೆರ ಕಲ(ರಿ), ಸಂಸ್ಥೆಯ ಊರು ಮತ್ತು ಮುಂಬೈಯ ಜಂಟಿ ಆಯೋಜನೆಯಲ್ಲಿ ಬಂಟರ ಸಂಘ ಕುರ್ಲಾದ ಎನೆಕ್ಸ್ ಹಾಲ್‌ನಲ್ಲಿ ‘ತುಲುವೆರ ಮಿನದನ’ ಕಾರ್ಯಕ್ರಮ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk