
ಕೆನರಾ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿ ಅವರಿಗೆ ಸನ್ಮಾನ
ವೃತ್ತಿ ಸಾಧಕ ವ್ಯಕ್ತಿಗಳನ್ನು ಗೌರವಿಸುವ ಮೂಲಕ ಯುವ ಜನರಿಗೆ ಉತ್ತಮ ಪ್ರೇರಣೆ ಮತ್ತು ಮಾರ್ಗದರ್ಶಿಯಾಗುತ್ತದೆ ಎಂದು ಎಂದು ಮಂಗಳೂರಿನ ಕೆನರಾ ಬ್ಯಾಂಕ್ವೃತ್ತ ಕಛೇರಿ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಬಿ ಸಿಂಘಾಯ್ ಹೇಳಿದರು. ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ ಪ್ರಯುಕ್ತ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಭಾರತದ ಕಾನೂನು ನೆರವು ಘಟಕ ಹಳೆಯಂಗಡಿ, ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಅಮ್ಮಂಬಾಳ್ ಸುಬ್ಬರಾವ್ ಪೈ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಾಲ್ಕು ಶಾಖೆಗಳಲ್ಲಿ ಐದುಬಾರಿ ಅತ್ಯುತ್ತಮ ಬ್ರಾಂಚ್ ಪ್ರಶಸ್ತಿ ಪಡೆದ ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿಯವರನ್ನು ಸನ್ಮಾನಿಸಿ ಮಾತನಾಡಿದರು.ಈ ಸಂದರ್ಭಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ಮಂಗಳೂರು ಲೋಕಯುಕ್ತ ಪೋಲಿಸ್ ಉಪ ಅಧೀಕ್ಷಕ ಸುರೇಶ್ ಕುಮಾರ್,ಭಾರತದ ಕಾನೂನು ನೆರವು ಘಟಕದ ಅಧ್ಯಕ್ಷ ಡೇನಿಯಲ್ ದೇವರಾಜ್ ,ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಟೇಶ್ ಭಟ್, ಸಿ.ಎಸ್.ಐ ಯುನಿಟಿ ಚರ್ಚು ಮುಲ್ಕಿಯ ಸಭಾಪಾಲಕ ರೆವೆ. ಸ್ಟೀವನ್ ಸರ್ವೋತ್ತಮ, ವಿಶ್ರಾಂತ ಸಭಾಪಾಲಕ ರೆವೆ. ಐಸನ್ ಪಾಲನ್ನ, ಮೂಲ್ಕಿಯ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು. ಚಿತ್ರ:ಎಂಯುಎಲ್ನ೧೯೨ ಕೆನರಾ/ ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮಂಬಾಳ್ ಸುಬ್ಬರಾವ್ ಪೈ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಾಲ್ಕು ಶಾಖೆಗಳಲ್ಲಿ ಐದುಬಾರಿ ಅತ್ಯುತ್ತಮ ಬ್ರಾಂಚ್ ಪ್ರಶಸ್ತಿ ಪಡೆದ ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿಯವರನ್ನು ಸನ್ಮಾನಿಸಿದರು.




